೨೧೦೦ ರ ವೇಳೆಗೆ, ಮುಂಬಯಿ ಸೇರಿದಂತೆ ಭಾರತದ ಕರಾವಳಿಯ ೧೨ ನಗರಗಳು ನೀರಿನಲ್ಲಿ ಮುಳುಗಲಿವೆ !

ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ವರದಿಯ ಪ್ರಕಾರ, ಹವಾಮಾನದ ಬದಲಾವಣೆಯಿಂದಾಗುವ ವಿಪತ್ತಿನಿಂದಾಗಿ ಮುಂದಿನ ೮೦ ವರ್ಷಗಳಲ್ಲಿ ಅಂದರೆ ೨೧೦೦ರಲ್ಲಿ ಭಾರತದ ಕರಾವಳಿಯಲ್ಲಿ ಮುಂಬಯಿ ಸೇರಿದಂತೆ ೧೨ ನಗರಗಳು ೩ ಅಡಿಗಳಷ್ಟು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ

ಭಯೋತ್ಪಾದಕರಿಗೆ ಒದಗಿಸಲಾಗುವ ಹಣಕಾಸು ಹಾಗೂ ತಾಂತ್ರಿಕ ಸಹಾಯವನ್ನು ತಡೆಗಟ್ಟಲು ಪ್ರಯತ್ನಿಸುವೆವು !

ಆಗಸ್ಟ್ 19 ರಂದು ಜಯಶಂಕರರು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾದ ಆಂತೊನಿಯೋ ಗುಟ್ರೆಸರವರ ಐಸಿಸ್ ಮೇಲಿನ (ಇಸ್ಲಾಮಿಕ್ ಸ್ಟೇಟ್ ಅಂದರೆ ಇಸ್ಲಾಮಿಕ್ ರಾಜ್ಯದ) ವರದಿಯ ವಿಷಯದ ಚರ್ಚೆಯಲ್ಲಿಯೂ ಭಾಗವಹಿಸಲಿದ್ದಾರೆ.

ಒಂದು ತಿಂಗಳ ಮಟ್ಟಿಗೆ ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನ ಅಧ್ಯಕ್ಷ ಪದವಿಯಲ್ಲಿ ಭಾರತ!

ಸಂಯುಕ್ತ ರಾಷ್ಟ್ರದಲ್ಲಿನ ಭಾರತದ ಸ್ಥಾಯಿ(ಶಾಶ್ವತ) ಪ್ರತಿನಿಧಿ ರಾಜದೂತ ಟಿ.ಎಸ್.ತಿರುಮೂರ್ತಿ ಇವರು, ಭಾರತವು ಸಾಗರ ಸಂರಕ್ಷಣೆ, ಶಾಂತಿಯ ರಕ್ಷಣೆ ಮತ್ತು ಆತಂಕವಾದವನ್ನು ತಡೆಗಟ್ಟುವುದು ಈ ಮೂರು ಪ್ರಮುಖ ವಿಷಯಗಳಗ ಬಗ್ಗೆ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.

ಅತ್ಯಂತ ಹೆಚ್ಚು ಕೊರೊನಾ ರೋಗಿಗಳು ಅಮೆರಿಕದಲ್ಲಿ ಮತ್ತೆ ಪತ್ತೆ !

ಕಳೆದ ಕೆಲವು ದಿನಗಳಿಂದ ಅಮೇರಿಕಾದಲ್ಲಿ ಕೊರೊನಾ ರೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ೬೦,೦೦೦ ಕ್ಕೂ ಹೆಚ್ಚು ರೋಗಿಗಳು ಪತ್ತೆಯಾಗಿದ್ದಾರೆ. ಆದ್ದರಿಂದ ಅತ್ಯಂತ ಹೆಚ್ಚು ರೋಗಿಗಳು ಪತ್ತೆಯಾದ ಪ್ರಕರಣದಲ್ಲಿ ಅಮೇರಿಕಾವು ಮೊದಲ ಸ್ಥಾನಕ್ಕೆ ತಲುಪಿದೆ.

ಅಫ್ಘಾನಿಸ್ತಾನದಲ್ಲಿನ ಸಿಕ್ಖ ಹಾಗೂ ಹಿಂದೂಗಳಿಗೆ ನಾಗರಿಕತ್ವ ನೀಡಲು ಕೆನಡಾ ಸರಕಾರವು ಯೋಜನೆ ರೂಪಿಸಬೇಕು ! – ಕೆನಡಾದ ಸಿಕ್ಖರ ಸಂಘಟನೆಗಳಿಂದ ಬೇಡಿಕೆ

ಕೆನಡಾದಲ್ಲಿನ ಸಿಕ್ಖ ಸಂಘಟನೆಯು ಖಲಿಸ್ತಾನಿ ಬೆಂಬಲಿಗರಾಗಿದ್ದು ಅವರು ಈ ಹಿಂದೆ ಭಾರತದ ನಾಗರಿಕತ್ವ ತಿದ್ದುಪಡಿ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದರು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಸತತವಾಗಿ ೧೦ ವರ್ಷ ಪ್ರತಿದಿನ ೧೭ ನಿಮಿಷ ಸ್ಮಾರ್ಟ್‍ಫೋನ್ ಬಳಸಿದರೆ ಕ್ಯಾನ್ಸರ್ ಆಗುವ ಸಾಧ್ಯತೆ ಶೇ. ೬೦ ರಷ್ಟಿದೆ! – ಸಂಶೋಧಕರ ಸಂಶೋಧನೆ

ಅಮೇರಿಕಾದ ವಿಜ್ಞಾನಿಗಳ ಪ್ರಕಾರ, ಸ್ಮಾರ್ಟ್‍ಫೋನ್‍ಅನ್ನು ಸತತವಾಗಿ ೧೦ ವರ್ಷಗಳ ಕಾಲ ಪ್ರತಿದಿನ ೧೫ ನಿಮಿಷ ಉಪಯೋಗಿಸಿದರೆ ಕ್ಯಾನ್ಸರ್ ಆಗುವ ಸಾಧ್ಯತೆ ಶೇ. ೬೦ ರಷ್ಟು ಹೆಚ್ಚಾಗುತ್ತದೆ. ಇದನ್ನು ಸಂಚಾರವಾಣಿ(ಮೊಬೈಲ್) ಮತ್ತು ಮಾನವ ಇವುಗಳ ಬಗ್ಗೆ ೪೬ ಪ್ರಕಾರದ ಸಂಶೋಧನೆಯನ್ನು ಮಾಡಲಾಯಿತು.

ಅಮೇರಿಕಾದ ೩೬ ರಾಜ್ಯಗಳಿಂದ ಗೂಗಲ್ ಸಂಸ್ಥೆಯ ವಿರುದ್ಧ ದೂರು ದಾಖಲು !

ಅಮೇರಿಕಾದ ೩೬ ರಾಜ್ಯಗಳು ಗೂಗಲ್ ಸಂಸ್ಥೆಯ ವಿರುದ್ಧ ದೂರನ್ನು ದಾಖಲಿಸಿವೆ. ಗೂಗಲ್‍ನ ಪ್ಲೆ ಸ್ಟೋರ್ ನಲ್ಲಿ ಆ್ಯಪನ್ನು ಹುಡುಕುವಾಗ ಗೂಗಲ್‍ನಿಂದ ಸೀಮಿತ ಆ್ಯಪನ್ನು ತೋರಿಸಲಾಗುತ್ತಿದೆ. ಅನೇಕ ಸಂಸ್ಥೆಗಳ ಆ್ಯಪನ್ನು ತೋರಿಸುವುದಿಲ್ಲ. ಅದನ್ನು ಬ್ಲಾಕ್ ಮಾಡಲಾಗಿದೆ, ಎಂದು ಆರೋಪಿಸಲಾಗಿದೆ

ಭಾರತದಲ್ಲಿ ಹಿಂದೂಗಳದ್ದೇ ಹೆಚ್ಚಿನ ಮತಾಂತರ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ

ಕ್ರೈಸ್ತ ಮಿಷನರಿಗಳು ಸಮಾಜಸೇವೆಯ ಹೆಸರಿನಲ್ಲಿ ಕೇವಲ ಹಿಂದೂಗಳನ್ನು ಮತಾಂತರಿಸಲು ಭಾರತದಲ್ಲಿ ಕಾರ್ಯನಿರತವಾಗಿವೆ. ಅದರ ಆಚೆಗೆ ಅವರಿಗೆ ಯಾವುದೇ ಉದ್ದೇಶವಿರುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಈ ಬಗ್ಗೆ ತಥಾಕಥಿತ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಎಂದಾದರೂ ಬಾಯಿ ತೆರೆಯುವರೇ ?

ಭಯೋತ್ಪಾದನಾ ಚಟುವಟಿಕೆಗಳಿಗೆ ಡ್ರೋನ್‍ಅನ್ನು ಬಳಸುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಗಟ್ಟುವುದು ಅವಶ್ಯಕ !

ಭಯೋತ್ಪಾದಕ ಚಟುವಟಿಕೆಗಳಿಗಾಗಿ ಡ್ರೋನ್‍ಅನ್ನು ಉಪಯೋಗಿಸುವುದರ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಭವಿಷ್ಯದಲ್ಲಿ ಅದರ ಮೇಲೆ ಹಿಡಿತ ಸಾಧಿಸಲು ಕಠಿಣವಾಗಬಹುದು, ಎಂದ್ಲು ಭಾರತವು ಇಲ್ಲಿಯ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಅಂಶವನ್ನು ಮಂಡಿಸಿತು.

ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಆಶ್ರಯ ನೀಡುವ ದೇಶವು ಅಪರಾಧಿ !

ಕಳೆದ ಕೆಲವು ದಶಕಗಳಿಂದ ಗಡಿಯಲ್ಲಾಗುತ್ತಿರುವ ಭಯೋತ್ಪಾದನೆಗೆ ಭಾರತವು ಬಲಿ ಆಗುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಹಾಗೂ ಅವರಿಗೆ ಆಶ್ರಯ ನೀಡುವ ದೇಶವು ಇದಕ್ಕೆ ಕಾರಣಕರ್ತವಾಗಿದೆ ಎಂದು ಭಾರತವು ವಿಶ್ವ ಸಂಸ್ಥೆಯಲ್ಲಿ ಪಾಕ್‍ನ ಹೆಸರನ್ನು ಹೇಳದೇ ಟೀಕಿಸಿದೆ.