‘ವಾಲ್ಟ ಡಿಸ್ನಿ’ಕಡೆಯಿಂದ ಮನೊರಂಜನೆ ಸರಣಿಯಲ್ಲಿ ಹೆಚ್ಚಿನ ಪ್ರಮಾಣದ ಸಲಿಂಗಿಕಾಮಿಗಳ ಪಾತ್ರಗಳನ್ನು ಸಮಾವೇಶ ಮಾಡುವ ನಿರ್ಣಯ !

  • ಮಕ್ಕಳ ಮನಸ್ಸಿನ ಮೇಲೆ ಅಯೋಗ್ಯ ಸಂಸ್ಕಾರ ನಿರ್ಮಾಣ ಮಾಡುವ ಅಮೆರಿಕಾದ ವಿಕೃತ ಪ್ರಕಾರ !

  • ಅಮೇರಿಕಾದ ಫ್ಲೋರಿಡಾ ರಾಜ್ಯದಲ್ಲಿ ೩ನೇ ವರೆಗಿನ ಮಕ್ಕಳಿಗೆಗೆ ಲೈಂಗಿಕ ಶಿಕ್ಷಣ ನಿಷೇಧಿಸುವ ಕಾನೂನು ಸಂಸ್ಥೆಯಿಂದ ನಿಷೇಧ !

ಈಗಾಗಲೇ ಸಂಸ್ಕಾರದ ಹೆಸರಿನಲ್ಲಿ ಸಮಾಜವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಅಮೆರಿಕಾ ಇದೀಗ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಸಲಿಂಗಕಾಮದ ವಿಕೃತಿಯನ್ನು ಹೇರಲು ಹೊರಟಿದೆ. ಇವರ ಅಂಧಾನುಕರಣೆ ಮಾಡುವ ಭಾರತೀಯರು ಇದರಿಂದಲಾದರೂ ಎನಾದರೂ ಪಾಠ ಕಲಿಯಬಹುದೇ ?

ಕ್ಯಾಲಿಫೋರ್ನಿಯಾ (ಅಮೇರಿಕಾ) – ‘ಮಿಕ್ಕಿ ಮೌಸ’, ಮತ್ತು ‘ಡೊನಾಲ್ಡ್ ಡಕ’ನಂತಹ ಅನೇಕ ಕಾಲ್ಪನಿಕ ಪಾತ್ರಗಳಿರುವ ಮನರಂಜನಾ ಸರಣಿಗಳನ್ನು ನಿರ್ಮಿಸಿ ಚಿಕ್ಕ ಮಕ್ಕಳನ್ನು ಅವುಗಳ ಚಟವನ್ನಾಗಿಸುವ ಅಮೇರಿಕಾದ ‘ವಾಲ್ಟ ಡಿಸ್ನಿ’ ಇಗ ವಿಕೃತ ನಿರ್ಧಾರ ತೆಗೆದುಕೊಂಡಿದೆ. ಅಮೇರಿಕಾದ ಫ್ಲೋರಿಡಾ ರಾಜ್ಯವು ಮೂರನೇವರೆಗಿನ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನಿಷೇಧಿಸುವ ಕಾನೂನಿನ ಸಂಸ್ಥೆಯನ್ನು ನಿಷೇಧಿಸಿದೆ. ಈ ಕಾನೂನಿಗೆ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯ ಸಲಿಂಗಕಾಮಿ ಉದ್ಯೋಗಿಗಳು ಕಾನೂನನ್ನು ವಿರೋಧಿಸಿದ್ದರಿಂದ ಸಂಸ್ಥೆಯು ಚಿಕ್ಕ ಮಕ್ಕಳಿಗಾಗಿ ಇರುವ ಕಾರ್ಯಕ್ರಮಗಳಲ್ಲಿ ಸಲಿಂಗಕಾಮಿ ಪಾತ್ರಗಳನ್ನು ಸೇರಿಸಲು ನಿರ್ಧರಿಸಿತು. ಇದಕ್ಕಾಗಿ ೨೦೨೨ ರ ಕೊನೇಯವರೆಗೆ ಸಂಸ್ಥೆಯ ಒಟ್ಟು ಶೇ. ೫೦ ರಷ್ಟು ಪಾತ್ರಗಳನ್ನು ಸಲಿಂಗಕಾಮಿ ಅಥವಾ ನಪುಂಸಕರನ್ನು ತೋರಿಸಲಾಗುವುದು ಎಂದು ಸಂಸ್ಥೆಯು ಮನೊರಂಜನಾ ವಿಭಾಗದ ನಿರ್ದೇಶಕ ಕೆರೆ ಬುರ್ಕ ಅವರು ಘೋಷಣೆ ಮಾಡಿದರು.