`ಚೀನಾ ಭಾರತದ ಮೇಲೆ ದಾಳಿ ಮಾಡಿದರೆ ರಷ್ಯಾ ಭಾರತದ ಪರವಾಗಿ ನಿಲ್ಲುವುದಿಲ್ಲ !’ (ಅಂತೆ) – ಅಮೇರಿಕಾ

* ಭಾರತವು ರಷ್ಯಾದ ಜೊತೆ ಸ್ನೇಹ ಸಂಬಂಧ ಶಾಶ್ವತವಾಗಿಟ್ಟುಕೊಂಡಿದ್ದರಿಂದ ಅಮೆರಿಕಾಗೆ ಸಹಿಸಲಾಗುತ್ತಿಲ್ಲ. ಆದ್ದರಿಂದ ಅಮೇರಿಕಾ ಈ ರೀತಿಯ ಹೇಳಿಕೆ ನೀಡಿ ಭಾರತಕ್ಕೆ ಹೆದರಿಸುವ ಪ್ರಯತ್ನ ಮಾಡುತ್ತಿರುವುದು, ಎಂದು ಹೇಳುವ ಅವಶ್ಯಕತೆ ಇಲ್ಲ !- ಸಂಪಾದಕರು 

ದಲಿಪ ಸಿಂಹ

ವಾಷಿಂಗ್ಟನ (ಅಮೆರಿಕಾ) – ರಷ್ಯಾ ಮತ್ತು ಚೀನಾ ಇವರಲ್ಲಿನ ಸ್ನೇಹ ಸಂಬಂಧ ಬಹಳ ಆಳವಾಗಿದೆ. ಪ್ರಸ್ತುತ ಆ ಎರಡೂ ದೇಶಗಳು ಬಹಳ ಹತ್ತಿರವಾಗಿವೆ. ಆದ್ದರಿಂದ `ಚೀನಾ ಭಾರತದ ಮೇಲೆ ದಾಳಿ ಮಾಡಿದರೆ ರಷ್ಯಾ ಭಾರತದ ಪರವಾಗಿ ನಿಲ್ಲುವುದು’, ಎಂಬ ಭ್ರಮೆಯಲ್ಲಿ ಭಾರತ ಇರಬಾರದು, ಎಂದು ಅಮೇರಿಕಾದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲಿಪ ಸಿಂಹ ಇವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ದಲಿಪ ಸಿಂಹ ಇವರು ಕೆಲವೇ ದಿನದಲ್ಲಿ ಭಾರತದ ಪ್ರವಾಸ ಕೈಗೊಳ್ಳುವವರಿದ್ದಾರೆ. ಈ ಮೊದಲೇ ಅವರು ಈ ಹೇಳಿಕೆ ನೀಡಿದ್ದಾರೆ. ಇದರ ಮೊದಲು ಭಾರತದ ವಿದೇಶಾಂಗ ಸಚಿವ ಹರ್ಷವರ್ಧನ ಶೃಂಗಲಾ ಇವರು ಅವರನ್ನು ಭೇಟಿ ಮಾಡಿದರು. ಈ ಭೇಟಿಯ ನಂತರ ದಲಿಪ ಸಿಂಹ ಇವರು ಭಾರತಕ್ಕೆ ರಷ್ಯಾ ಮತ್ತು ಚೀನಾದ ಸ್ನೇಹ ಸಂಬಂಧದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆಯೆಂದು ಹೇಳಿದರು.

ರಷ್ಯಾ ಭಾರತಕ್ಕೆ ಕಡಿಮೆ ಬೆಲೆಯಲ್ಲಿ ಎಣ್ಣೆ ನೀಡುವ ಪ್ರಸ್ತಾಪದ ವಿಷಯವಾಗಿ ಕೇಳಿದಾಗ ದಲಿಪ ಸಿಂಹ ಇವರು, “ಅಂತರಾಷ್ಟ್ರೀಯ ಮಟ್ಟದ ನಿರ್ಬಂಧ ವ್ಯಾಪ್ತಿಗೆ ಬರುವ ಯಾವುದೇ ವಸ್ತು ಭಾರತ ರಷ್ಯಾದಿಂದ ಖರೀದಿಸಬಾರದು. ಇಂತಹ ವಸ್ತುಗಳ ವ್ಯಾಪಾರ ಹೆಚ್ಚಾಗುವುದು ನಡೆಯಬಾರದು.” ಎಂದು ಹೇಳಿದರು.