* ಕಾಶ್ಮೀರಿ ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ‘ನರಸಂಹಾರ’ವೆಂದು ಸ್ವೀಕರಿಸಬೇಕು ! – ಭಾರತ ಸರಕಾರದ ಬಳಿ ಆಯೋಗವು ವಿನಂತಿಸಿದೆ- ಸಂಪಾದಕರು * ಭಾರತ ಸರಕಾರವು ಏನು ಮಾಡುವುದು ಅಪೇಕ್ಷಿತವಿತ್ತೋ ಅದನ್ನು ಅಮೇರಿಕಾದಲ್ಲಿನ ಒಂದು ಮಾನವಾಧಿಕಾರ ಆಯೋಗವು ಮಾಡಿದೆ ! ಜಾತ್ಯಾತೀತವಾದದ ಗಾಢನಿದ್ರೆಯಲ್ಲಿರುವ ಮತ್ತು ಹಿಂದೂಗಳ ಮೇಲಿನ ಅನ್ಯಾಯಕ್ಕೆ ಕವಡೆಯಷ್ಟು ಬೆಲೆ ನೀಡದಿರುವ ಇಂದಿನವರೆಗಿನ ಎಲ್ಲ ಪಕ್ಷಗಳ ರಾಜಕಾರಣಿಗಳಿಗೆ ಇದು ಲಜ್ಜಾಸ್ಪದವಾಗಿದೆ ! ಹಿಂದೂಗಳ ಈ ದೈನ್ಯಾವಸ್ಥೆಯ ಮೇಲೆ ‘ಹಿಂದೂ ರಾಷ್ಟ್ರದ ಸ್ಥಾಪನೆಯೇ ಏಕೈಕ ಉಪಾಯವಾಗಿದೆ, ಎಂಬುದನ್ನು ತಿಳಿಯಿರಿ !- ಸಂಪಾದಕರು |
ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿನ ‘ಇಂಟರನ್ಯಾಶನಲ್ ಕಮಿಶನ ಫಾರ ಹ್ಯೂಮನ ರಾಯಿಟ್ಸ್ ಅಂಡ್ ರಿಲಿಜಿಯಸ್ ಫ್ರೀಡಂ’ (ಮಾನವಾಧಿಕಾರ ಮತ್ತು ಧಾರ್ಮಿಕ ಸ್ವಾತಂತ್ರ‍್ಯಕ್ಕಾಗಿ ಕಾರ್ಯನಿರತವಾಗಿರುವ ಅಂತರಾಷ್ಟ್ರೀಯ ಆಯೋಗ)ವು ಜಮ್ಮೂ ಮತ್ತು ಕಾಶ್ಮೀರದಲ್ಲಿನ ಹಿಂದೂಗಳ ನರಸಂಹಾರಕ್ಕೆ ಅಧಿಕೃತವಾಗಿ ಮಾನ್ಯತೆ ನೀಡಿದೆ. ಈ ಪ್ರಕರಣದ ಸಂದರ್ಭದಲ್ಲಿ ನಡೆದ ಒಂದು ಆಲಿಕೆಯ ನಂತರ ಈ ನರಸಂಹಾರಕ್ಕೆ ಜಾಹೀರು ಮಾನ್ಯತೆ ನೀಡಲಾಗಿದೆ.
#ICHRRF officially recognises the #KashmiriHinduGenocide of 1989-1991 as #ethniccleansing https://t.co/lNo7bBiaKq
— India TV (@indiatvnews) March 28, 2022
೧. ಆಯೋಗವು ಪ್ರಸಾರಿಸಿದ ಒಂದು ಪ್ರಸಿದ್ಧಿಪತ್ರಕದಲ್ಲಿ ಹೀಗೆ ಹೇಳಲಾಗಿದೆ, ಮಾರ್ಚ ೨೭ರಂದು ‘ಕಾಶ್ಮೀರಿ ಹಿಂದೂ ನರಸಂಹಾರ (೧೯೮೯-೧೯೯೧)’ ಈ ವಿಷಯದ ಮೇಲೆ ಆಯೋಗವು ಒಂದು ವಿಶೇಷವಾದ ಸಾರ್ವಜನಿಕ ಆಲಿಕೆಯನ್ನು ಆಯೋಜಿಸಿತ್ತು.
೨. ಇದರಲ್ಲಿ ಅನೇಕ ಸಂತ್ರಸ್ತರು, ವಂಶಿಕ ಮತ್ತು ಸಾಂಸ್ಕೃತಿಕ ಸಂಹಾರದಲ್ಲಿ ಉಳಿದ ಹಿಂದೂಗಳು ತಮ್ಮ ಮೇಲಾದ ಅತ್ಯಾಚಾರಗಳ ಪುರಾವೆಗಳನ್ನು ಸಾದರಪಡಿಸಿದರು. ಸ್ವದೇಶದಲ್ಲಿಯೇ ಅನೇಕ ಕಾಶ್ಮೀರಿ ಹಿಂದೂಗಳು ತಮ್ಮ ಮೇಲೆ ನಡೆದ ಕ್ರೌರ್ಯದ ವ್ಯಥೆಯನ್ನು ಧೈರ್ಯದಿಂದ ಹೇಳಿದರು.
೩. ‘ಜಿಹಾದಿ ಭಯೋತ್ಪಾದನೆಯ ಕ್ರೌರ್ಯವನ್ನು ಹೇಗೆ ಎದುರಿಸಬೇಕಾಯಿತು ?’, ‘ಸ್ವಂತದ ಅಸ್ತಿತ್ವಕ್ಕಾಗಿ ಹೇಗೆ ಹೋರಾಡಬೇಕಾಯಿತು ?’, ‘ಪುನರ್ವಸತಿಗಾಗಿ ಅವರು ಎಷ್ಟೊಂದು ಕಷ್ಟ ಸಹಿಸಬೇಕಾಯಿತು ?’ ಇತ್ಯಾದಿ ಮಾಹಿತಿ ನೀಡಲಾಯಿತು.
೪. ಪ್ರಸಿದ್ಧಿ ಪತ್ರಕದಲ್ಲಿ ಹಿಂದೂಗಳ ನರಸಂಹಾರದ ಬಗ್ಗೆ ವಸ್ತುನಿಷ್ಠ ಮಾಹಿತಿಯನ್ನು ನೀಡಲಾಗಿದ್ದು ‘ನರಸಂಹಾರದ ಬಗ್ಗೆ ರಾಜಕಾರಣಿಗಳು, ನೆರೆಯವರು, ಮಿತ್ರರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪೊಲೀಸರು ಕಣ್ಣು, ಕಿವಿ ಮುಚ್ಚಿದ್ದು ಅತ್ಯಂತ ದುಃಖದಾಯಕವಾಗಿತ್ತು’ ಎಂದು ಸಂತ್ರಸ್ಥರು ಹೇಳಿದರು.
೫. ‘ಇಂತಹ ಹಿಂಸಾತ್ಮಕ ದುರಂತವನ್ನು ಎದುರಿಸುತ್ತಿರುವಾಗ ಕಾಶ್ಮೀರಿ ಹಿಂದೂಗಳಿಗೆ ಹಿಂಸಾತ್ಮಕ ದ್ವೇಷ ಸಾಧಿಸುವಲ್ಲಿ ಅಥವಾ ಮುಸಲ್ಮಾನ ವಿರೋಧಿ ಪ್ರಚಾರ ಮಾಡುವಲ್ಲಿ ಯಾವುದೇ ಆಸಕ್ತಿಯಿಲ್ಲ’ ಎಂಬುದನ್ನು ವಿಶೇಷವಾಗಿ ಇಲ್ಲಿ ಉಲ್ಲೇಖಿಸಲಾಗಿದೆ.
ಜಗತ್ತು ಕಾಶ್ಮೀರಿ ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ‘ನರಸಂಹಾರದ ಕೃತ್ಯ’ ಎಂದು ಮಾನ್ಯತೆ ನೀಡಬೇಕು !ಆಯೋಗವು ಭಾರತ ಸರಕಾರ ಮತ್ತು ಜಮ್ಮೂ-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಸರಕಾರಕ್ಕೆ ‘ಅವರು ಕಾಶ್ಮಿರಿ ಹಿಂದೂಗಳ ಮೇಲಿನ ಅತ್ಯಾಚಾರಗಳನ್ನು ‘ನರಸಂಹಾರ’ ಎಂದು ಸ್ವೀಕರಿಸಬೇಕು. ಆಯೋಗವು ಇತರ ಮಾನವಾಧಿಕಾರ ಸಂಸ್ಥೆ, ಅಂತರಾಷ್ಟ್ರೀಯ ಸಂಸ್ಥೆ ಹಾಗೂ ಸರಕಾರಕ್ಕೂ ಈ ಅತ್ಯಾಚಾರಗಳನ್ನು ‘ನರಸಂಹಾರದ ಕೃತ್ಯ’ ಎಂದು ಅಧಿಕೃತವಾಗಿ ಸ್ವೀಕರಿಸಬೇಕು ಎಂದು ಕರೆ ನೀಡಿದೆ. |