ರಷ್ಯಾಗೆ ಸಹಾಯ ಮಾಡಿದರೆ ಕಠಿಣ ಕಾರ್ಯಾಚರಣೆ ಮಾಡುವೆವು ! – ಚೈನಾಗೆ ಬೆದರಿಕೆಯೊಡ್ಡಿದ ಅಮೇರಿಕಾ

ಚೈನಾದ ಸಹಾಯ ಬೇಡಿದ ರಷ್ಯಾ

ವಾಶಿಂಗ್ಟನ (ಅಮೆರಿಕಾ) – ಒಂದು ವೇಳೆ ರಷ್ಯಾದ ಮೇಲೆ ಹೇರಲಾದ ನಿರ್ಬಂಧಗಳ ಸಂದರ್ಭದಲ್ಲಿ ಚೀನಾವು ರಷ್ಯಾಗೆ ಸಹಾಯ ಮಾಡಿದರೆ, ಆಗ ಚೈನಾದ ಮೇಲೆ ಕಠಿಣ ಕಾರ್ಯಾಚರಣೆ ಮಾಡಲಾಗುವುದು, ಎಂದು ಅಮೆರಿಕಾವು ಚೀನಾಗೆ ಬೆದರಿಕೆಯೊಡ್ಡಿದೆ. ಈ ಬಗ್ಗೆ ಚೈನಾ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ. ಅಮೇರಿಕಾ ಹಾಗೂ ‘ನಾಟೊ’ ದೇಶಗಳು ರಷ್ಯಾದ ಮೇಲೆ ಹೇರಿರುವ ನಿರ್ಬಂಧಗಳಿಂದ ವಿದೇಶದಲ್ಲಿರುವ ರಷ್ಯಾದ ವಿದೇಶದಲ್ಲಿನ ಚಿನ್ನ ಹಾಗೂ ವಿದೇಶಿ ಹಣದ ಭಂಡಾರವನ್ನು ಜಪ್ತಿ ಮಾಡಲಾಗಿದೆ. ಇದರಿಂದ ರಷ್ಯಾ ಆರ್ಥಿಕ ಸಂಕಟವನ್ನು ಎದುರಿಸಬೇಕಾಗುತ್ತಿದೆ. ಇದರಿಂದ ರಷ್ಯಾವು ಚೀನಾಗೆ ಸಹಾಯ ಮಾಡುವಂತೆ ವಿನಂತಿಸಿದೆ.

(ಸೌಜನ್ಯ : WION)

ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ ಸುಲಿವನರವರು, ಚೀನಾಗೆ ರಷ್ಯಾವು ಉಕ್ರೇನನ ಮೇಲೆ ದಾಳಿ ಮಾಡುವುದು ಎಂದು ಮೊದಲೇ ತಿಳಿದಿತ್ತು. ನಾವು ಮೊದಲಿನಿಂದಲೂ ಚೀನಾದ ಮೇಲೆ ನಿಗಾ ಇಟ್ಟಿದ್ದೇವೆ’ ಎಂದು ಹೇಳಿದರು.