ಬಡ ವಿದ್ಯಾರ್ಥಿಗಳಿಗೆ ‘ಆನ್‌ಲೈನ್’ ಶಿಕ್ಷಣಕ್ಕಾಗಿ ಉಚಿತ ಸಾಮಗ್ರಿಗಳನ್ನು ಒದಗಿಸಿ ! – ದೆಹಲಿ ಉಚ್ಚ ನ್ಯಾಯಾಲಯದಿಂದ ಶಾಲೆಗಳಿಗೆ ಆದೇಶ

ಆನ್‌ಲೈನ್ ಶಿಕ್ಷಣಕ್ಕಾಗಿ ಲ್ಯಾಪ್‌ಟಾಪ್, ಸಂಚಾರವಾಣಿ, ಇಂಟರ್‌ನೆಟ್ ಇತ್ಯಾದಿಗಳು ಅಗತ್ಯವಿರುವುದರಿಂದ ಈ ಸೌಲಭ್ಯವನ್ನು ಸರಕಾರಿ ಹಾಗೂ ಖಾಸಗಿ ಶಾಲೆಗಳು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಬೇಕು, ಎಂದು ದೆಹಲಿ ಉಚ್ಚ ನ್ಯಾಯಾಲಯವು ಸಪ್ಟೆಂಬರ್ ೧೮ ರಂದು ಆದೇಶ ನೀಡಿದೆ.

ಮಡಗಾವ್ ಸ್ಫೋಟ ಪ್ರಕರಣದಲ್ಲಿ ಸನಾತನವು ನಿರಪರಾಧಿಯೆಂದು ಮತ್ತೊಮ್ಮೆ ಸಾಬೀತು !

ಗೋವಾದಲ್ಲಿ ಅಂದಿನ ಕಾಂಗ್ರೆಸ್ ಸರಕಾರವು ಮಡಗಾವ್ ಸ್ಫೋಟ ಪ್ರಕರಣದಲ್ಲಿ ಸನಾತನದ ೬ ಅಮಾಯಕ ಸಾಧಕರನ್ನು ಸಿಲುಕಿಸಲು ಪ್ರಯತ್ನಿಸಿತ್ತು. ನಾಲ್ಕು ವರ್ಷಗಳ ಕಾಲ ಕಾರಣವಿಲ್ಲದೇ ಜೈಲುವಾಸದ ನಂತರ, ಸತ್ರ ನ್ಯಾಯಾಲಯವು ಸನಾತನ ಎಲ್ಲ ಸಾಧಕರನ್ನು ನಿರಪರಾಧಿಯೆಂದು ಮುಕ್ತಗೊಳಿಸಿತ್ತು.

ರಾಷ್ಟ್ರೀಯ ತನಿಖಾ ದಳದಿಂದ ಬಂಗಾಲ ಹಾಗೂ ಕೇರಳದಿಂದ ‘ಅಲ್-ಕಾಯದಾ’ದ ೯ ಭಯೋತ್ಪಾದಕರ ಬಂಧನ

ರಾಷ್ಟ್ರೀಯ ತನಿಖಾ ದಳವು (‘ಎನ್.ಐ.ಎ.’ಯು) ಸಪ್ಟೆಂಬರ್ ೧೯ ರಂದು ಬೆಳಿಗ್ಗೆ ಬಂಗಾಲ ಹಾಗೂ ಕೇರಳ ರಾಜ್ಯಗಳಲ್ಲಿ ದಾಳಿ ಮಾಡಿ ಅಲ್ಲಿಂದ ‘ಅಲ್-ಕಾಯದಾ’ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ೯ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

೧೨ ವರ್ಷದ ಬಾಲಕಿಯನ್ನು ಅಪಹರಿಸಿದ್ದ ೭ ಮಂದಿಯ ಬಂಧನ

ಇಲ್ಲಿಯ ಇಬಾದತ್‌ನಗರದಲ್ಲಿ ಸಪ್ಟೆಂಬರ್ ೧೧ ರಂದು ಅಪಹರಿಸಲಾಗಿದ್ದ ೧೨ ವರ್ಷದ ಹುಡುಗಿಯನ್ನು ೪ ದಿನಗಳ ನಂತರ ಹುಡುಕುವಲ್ಲಿ ಪೊಲೀಸರಿಗೆ ಯಶಸ್ಸು ಸಿಕ್ಕಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟಿ ಖಾನ್ ಸಹಿತ ೭ ಮಂದಿಯನ್ನು ಬಂಧಿಸಲಾಗಿದೆ.

‘ಝೀ ಟಿವಿ’ಯಲ್ಲಿನ ‘ರಾಮ ಪ್ಯಾರೆ ಸಿರ್ಫ್ ಹಮಾರೆ’ ಧಾರಾವಾಹಿಯಲ್ಲಿ ಪ್ರಭು ಶ್ರೀ ರಾಮನ ಅವಮಾನ

‘ಝೀ ಟಿವಿ’ ಈ ಖಾಸಗಿ ವಾಹಿನಿಯಲ್ಲಿ ಅಕ್ಟೋಬರ್ ೫ ರಿಂದ ‘ರಾಮ ಪ್ಯಾರೆ ಸಿರ್ಫ್ ಹಮಾರೆ’ ಹೆಸರಿನ ಹಿಂದಿ ಧಾರಾವಾಹಿಯು ಪ್ರಸಾರವಾಗಲಿದೆ. ಈ ಧಾರಾವಾಹಿಯ ‘ಪ್ರೋಮೊ’ (ಪ್ರಸಿದ್ಧಿಗಾಗಿ ಮಾಲಿಕೆಯಲ್ಲಿನ ಆಯ್ದ ಭಾಗಗಳನ್ನು ತೋರಿಸುವುದು) ತೋರಿಸಲಾಗುತ್ತಿದ್ದು ಅದರಲ್ಲಿ ದುಲಾರಿ ಹೆಸರಿನ ಮಹಿಳೆಯ ಗಂಡನ ಹೆಸರು ‘ರಾಮ’ ಇದೆ.

ಚೀನಾ ಕಬಳಿಸಿದ ಭೂಮಿಯನ್ನು ಪಡೆಯಲು ಬುಮಲಾ (ಅರುಣಾಚಲ ಪ್ರದೇಶ) ದಲ್ಲಿ ಭೂಮಾತೆಯ ಪೂಜೆ

ಇಂಡೋ-ಟಿಬೆಟ್ ಸಹಕಾರ ವೇದಿಕೆಯು ಪ್ರತಿವರ್ಷ ತವಾಂಗ್ ತೀರ್ಥಯಾತ್ರೆಯನ್ನು ಆಯೋಜಿಸುತ್ತದೆ. ಯಾತ್ರಿಕರು ಇಂಡೋ-ಟಿಬೆಟಿಯನ್ ಗಡಿಯಲ್ಲಿರುವ ಬುಮಲಾಗೆ ಕಾಲ್ನಡಿಗೆಯಿಂದ ಹೋಗಿ ಮಾತೃಭೂಮಿಗೆ ಪೂಜೆ ಸಲ್ಲಿಸುತ್ತಾರೆ. ೧೯೬೨ರಲ್ಲಿ ಚೀನಾ ವಶಪಡಿಸಿಕೊಂಡ ಭೂಮಿಯನ್ನು ಪುನಃ ಪಡೆದುಕೊಳ್ಳಲು ಅವರು ಸಂಕಲ್ಪ ಮಾಡುತ್ತಾರೆ

‘ಲವ್ ಜಿಹಾದ್’ನ ಘಟನೆಗಳನ್ನು ತಡೆಗಟ್ಟಲು ಮತಾಂತರವಿರೋಧಿ ಕಾಯ್ದೆಯನ್ನು ರೂಪಿಸಲಿರುವ ಉತ್ತರಪ್ರದೇಶ ಸರಕಾರ

ಲವ್ ಜಿಹಾದ್‌ನ ವಿಷಯದಲ್ಲಿ ಉತ್ತರಪ್ರದೇಶ ಸರಕಾರ ಶೀಘ್ರವಾಗಿ ಮತಾಂತರದ ಬಗ್ಗೆ ಸುಗ್ರಿವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ‘ಇತರ ರಾಜ್ಯಗಳಲ್ಲಿ ಮತಾಂತರದ ವಿರುದ್ಧ ರೂಪಿಸಲಾಗಿರುವ ಕಾನೂನುಗಳು ಹಾಗೂ ಅಧಿನಿಯಮಗಳ ಬಗ್ಗೆ ಅಭ್ಯಾಸ ಮಾಡಲಾಗುತ್ತಿದೆ. ನಂತರ ಉತ್ತರಪ್ರದೇಶ ಸರಕಾರ ಇದರ ಬಗ್ಗೆ ತನ್ನ ಕಾನೂನುಗಳನ್ನು ರೂಪಿಸಲಿದೆ’, ಎಂದು ರಾಜ್ಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಮಡಿಕೇರಿಯಲ್ಲಿ ಅಶ್ಲೀಲ ಸಂದೇಶವನ್ನು ಕಳುಹಿಸಿದ ಮಹಮ್ಮದ ಮುನಾಸಿರನನ್ನು ಥಳಿಸಿದ ಹಿಂದೂ ಮಹಿಳೆ ಹಾಗೂ ಆಕೆಯ ಸಂಬಂಧಿಕರು

ಇಲ್ಲಿಯ ಮಡಿಕೇರಿಯಲ್ಲಿನ ಹಿಂದೂ ಮಹಿಳೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶವನ್ನು ಕಳುಹಿಸಿದ ಮಹಮ್ಮದ ಮುನಾಸಿರ್‌ನನ್ನು ಆ ಮಹಿಳೆ ಹಾಗೂ ಆಕೆಯ ಸಂಬಂಧಿಕರು ಥಳಿಸಿದರು. ಪೊಲೀಸರು ಮಹಮ್ಮದ ಮುನಾಸಿರನನ್ನು ಬಂಧಿಸಿದ್ದಾರೆ. ಅದೇರೀತಿ ಮಹಮ್ಮದ ಮುನಾಸಿರಗೆ ಥಳಿಸಿದ ಪ್ರಕರಣದಲ್ಲಿ ಮಹಿಳೆ ಹಾಗೂ ಆಕೆಯ ೪ ಸಂಬಂಧಿಕರನ್ನು ಸಹ ಬಂಧಿಸಿದ್ದಾರೆ.

ವಿಜಯವಾಡ(ಆಂಧ್ರಪ್ರದೇಶ)ದ ಶ್ರೀ ಕನಕದುರ್ಗಾ ದೇವಸ್ಥಾನದಲ್ಲಿ ಬೆಳ್ಳಿಯ ೩ ಸಿಂಹಗಳ ಮೂರ್ತಿಗಳ ಕಳ್ಳತನ

ಇಲ್ಲಿಯ ಶ್ರೀ ಕನಕದುರ್ಗಾ ದೇವಸ್ಥಾನ ಪ್ರಾಂಗಣದಲ್ಲಿಯ ‘ಅಮ್ಮಾವರಿ ರಥಮ್’ನ (‘ಪವಿತ್ರ ರಥ’ದ) ೪ ಮೂಲೆಗಳಲ್ಲಿರುವ ಸಿಂಹಗಳ ಬೆಳ್ಳಿಯ ಮೂರ್ತಿಗಳ ಪೈಕಿ ೩ ಮೂಲೆಯ ಸಿಂಹದ ಮೂರ್ತಿಗಳ ಕಳ್ಳತನವಾಗಿದೆ. ಪ್ರತಿಯೊಂದು ಸಿಂಹವನ್ನು ೩ ಕೆಜಿಯಷ್ಟು ಬೆಳ್ಳಿಯಿಂದ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷವಾಗಿರುವ ಟಿಡಿಪಿಯು ಸಿಬಿಐ ತನಿಖೆಯನ್ನು ಆಗ್ರಹಿಸಿದೆ.

‘ಬಾಬರಿ ಮಸೀದಿಯನ್ನು ಪುನಃ ಕಟ್ಟುತ್ತೇವೆ !’ (ಯಂತೆ)

ಸಿಎಎ ಕಾಯ್ದೆಯ ವಿರುದ್ಧ ನಡೆದ ಆಂದೋಲನದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ಶರಜೀಲ್ ಉಸ್ಮಾನೀಯು ‘ಬಾಬರಿ ಮಸೀದಿ ಪುನಃ ಕಟ್ಟುವೆವು’, ಎಂಬ ಪ್ರಚೋದನಕಾರಿ ಟ್ವೀಟ್ ಮಾಡಿದ್ದಾನೆ.