ಆರೋಪಿಯನ್ನು ಬಂಧಿಸಲು ಬಂಗಾಲಕ್ಕೆ ಹೋದ ಬಿಹಾರದ ಪೊಲೀಸ್ ಅಧಿಕಾರಿಯನ್ನೇ ಹತ್ಯೆಗೈದ ಜನರಗುಂಪು!
ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಬಿಹಾರದ ಕಿಶನಗಂಜ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಅಶ್ವಿನಿ ಕುಮಾರ ಇವರು ಪೊಲೀಸ್ ತಂಡದೊಂದಿಗೆ ಬಂಗಾಲಕ್ಕೆ ತೆರಳಿದ್ದರು. ಈ ಸಮಯದಲ್ಲಿ ದಿನಾಜಪುರ ಜಿಲ್ಲೆಯ ಪಂಜಿಪಾಡಾ ಪೊಲೀಸ್ ಪ್ರದೇಶದ ಪನತಾಪಾಡಾ ಗ್ರಾಮದಲ್ಲಿ, ಆರೋಪಿಗಳನ್ನು ರಕ್ಷಿಸಲು ಜನಸಮೂಹವು ಅಶ್ವಿನಿ ಕುಮಾರ ತಂಡದ ಮೇಲೆ ಹಲ್ಲೆ ನಡೆಸಿತು.