ಹುತಾತ್ಮರಾದ ಸೈನಿಕನ ಹೆಂಡತಿಗೆ ೬೯ ವರ್ಷಗಳ ನಂತರ ದೊರಕಿದ ಪಿಂಚಣಿ !

ಸರಕಾರಿ ಕಚೇರಿಯ ಅಕ್ಷಮ್ಯ ತಪ್ಪು ! ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ; ಆದರೆ ಸರಕಾರಿ ನೌಕರರಿಗೆ ಅವರ ಬಗ್ಗೆ ಯಾವುದೇ ರೀತಿಯ ಸಹಾನುಭೂತಿ ಇಲ್ಲ, ಇದು ನಾಚಿಕೆಗೇಡಿನ ಸಂಗತಿ ! ಇಂತಹ ತಪ್ಪುಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !

ನವ ದೆಹಲಿ – ಹುತಾತ್ಮರಾಗಿದ್ದ ಸೈನಿಕ ಗಗನ ಸಿಂಗ ಅವರ ಪತ್ನಿಗೆ ೬೯ ವರ್ಷಗಳ ನಂತರ ಪಿಂಚಣಿ ಸಿಕ್ಕಿರುವ ಘಟನೆ ಬೆಳಕಿಗೆ ಬಂದಿದೆ. ಗಗನ ಸಿಂಗ ಅವರು ಕರ್ತವ್ಯದಲ್ಲಿದ್ದಾಗ ೧೯೫೨ ರಲ್ಲಿ ಹುತಾತ್ಮರಾದರು. ಗಂಡನ ಮರಣದ ನಂತರ ಪತ್ನಿ ಪರುಲಿ ದೇವಿಗೆ ಪಿಂಚಣಿ ಸಿಗಬೇಕಾಗಿತ್ತು; ಆದರೆ ಸಿಗಲಿಲ್ಲ. ಭಾರತೀಯ ಸೇನಾಪಡೆಯೂ ಈ ಬಗ್ಗೆ ಗಮನ ಹರಿಸಲಿಲ್ಲ. (ಇಂತಹ ಸಂವೇದನಾಶೂನ್ಯತೆಯು ಭಾರತೀಯ ಸೇನೆಯಿಂದ ಅಪೇಕ್ಷಿತವಿಲ್ಲ ! – ಸಂಪಾದಕರು) ನಿವೃತ್ತ ಅಧಿಕಾರಿ ಡಿ.ಎಸ್. ಭಂಡಾರಿ ಅವರು ಈ ವಿಷಯದಲ್ಲಿ ನೇತೃತ್ವವನ್ನು ವಹಿಸಿದರು ಮತ್ತು ಅವರ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿತು. ಸುಮಾರು ೬೯ ವರ್ಷಗಳ ನಂತರ, ಪರುಲಿದೇವಿ ಅವರಿಗೆ ಪಿಂಚಣಿ ಸಿಕ್ಕಿತು. ಭಂಡಾರಿಯವರು ನೀಡಿದ ಮಾಹಿತಿಯ ಪ್ರಕಾರ, ಪರುಲಿ ದೇವಿಗೆ ೧೯೭೭ ರಿಂದ ೪೪ ವರ್ಷಗಳ ಕಾಲಾವಧಿಯಲ್ಲಿ ಬಾಕಿಯಾಗಿದ್ದ ಸುಮಾರು ೨೦ ಲಕ್ಷ ರೂಪಾಯಿಗಳ ಪಿಂಚಣಿ ಸಿಗಲಿದೆ.