ಭಾಜಪವು ಹಿಂದುತ್ವದ ವಾತಾವರಣವನ್ನು ಸೃಷ್ಟಿಸಿರುವುದರಿಂದ ನಮಗೆ ಬಹುಶಃ ಮತ ಸಿಗದಿರಬಹುದು ! – ಅಶೋಕ ಗೆಹ್ಲೋತ, ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸತತವಾಗಿ ಹಿಂದೂ ವಿರೋಧಿ ನಿರ್ಧಾರಗಳನ್ನು ತೆಗೆದುಕೊಂಡಿತು. ಈ ಕಾರಣದಿಂದಾಗಿ ಹಿಂದೂಗಳು ಕಾಂಗ್ರೆಸ್ ಅನ್ನು ಉರುಳಿಸಿದರು. ಆದರೂ ಕಾಂಗ್ರೆಸ್ ಮುಸಲ್ಮಾನರ ಓಲೈಕೆ ಮಾಡುತ್ತಾ ಹಿಂದೂಗಳನ್ನು ಭಯೋತ್ಪಾದಕರು ಎಂದು ನಿರ್ಧರಿಸುವ ಪ್ರಯತ್ನವನ್ನು ಕೈಬಿಡುತ್ತಿಲ್ಲ. ಆದ್ದರಿಂದ, ಕಾಂಗ್ರೆಸ್ ಪತನ ನಿಶ್ಚಿತವಾಗಿದೆ !

ಅಶೋಕ ಗೆಹ್ಲೋತ

ಜೈಪುರ (ರಾಜಸ್ಥಾನ) – ಭಾಜಪ ಮತ್ತು ರಾ. ಸ್ವಂ. ಸೇ. ಸಂಘ ಇವು ಕೇವಲ ಹಿಂದುತ್ವದ ಬಗ್ಗೆ ಮಾತ್ರ ಮಾತನಾಡುತ್ತವೆ. ಆದ್ದರಿಂದ ಹಿಂದುತ್ವದ ವಾತಾವರಣವನ್ನು ಸೃಷ್ಟಿಸಿದ್ದರಿಂದ ನಾವೂ ಭಯಭೀತರಾಗಿದ್ದೇವೆ. ಈ ಕಾರಣದಿಂದಾಗಿ, ಜನರು ನಮಗೆ ಮತ ಚಲಾಯಿಸದಿರಬಹುದು; ಆದರೆ ಭಯಪಡುವ ಅಗತ್ಯವಿಲ್ಲ. ನಾವು ನಿರ್ಭಯರಾಗಿರಬೇಕು ಮತ್ತು ನಮ್ಮ ವಿಚಾರಸರಣಿಯ ಮೇಲೆ ನಡೆಯಬೇಕು. ಸತ್ಯದ ಹಾದಿಯಲ್ಲಿ ಸಾಗುವವರಿಂದ ಯಶಸ್ಸನ್ನು ಸಾಧಿಸಬಹುದು ಎಂಬ ನುಡಿಮುತ್ತನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋತ ಇವರು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ ೫೧ ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಲಾದ ಆನ್‍ಲೈನ್ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು.

ಮುಖ್ಯಮಂತ್ರಿ ಅಶೋಕ್ ಗೆಹ್ಲೋತ ಅವರ ಹೇಳಿಕೆಗೆ, ಭಾಜಪದ ನಾಯಕ ರಾಜವರ್ಧನಸಿಂಗ ರಾಥೋಡ್ ಅವರು, ಜನರ ಮನಸ್ಸಿನಲ್ಲಿ ಯಾವುದೇ ಭಯವಿಲ್ಲ, ಬದಲಾಗಿ ವಿಶ್ವಾಸವು ಮೂಡಿದೆ. ಭಾಜಪದ ಮತ್ತು ಸಂಘದ ಕಾರ್ಯಕರ್ತರು ಪೂರ್ಣ ನಿಷ್ಠೆಯಿಂದ ರಾಷ್ಟ್ರ ಸೇವೆ ಮಾಡುತ್ತಿದ್ದಾರೆ. ಆದ್ದರಿಂದಲೇ ದೇಶದಲ್ಲಿ ರಾಷ್ಟ್ರೀಯತೆ, ಹಿಂದುತ್ವ ಮತ್ತು ‘ಸಬಕಾ ಸಾಥ್ ಮತ್ತು ಸಬಕಾ ವಿಕಾಸ್’ ವಾತಾವರಣವು ಸೃಷ್ಟಿಯಾಗಿದೆ ಎಂದು ಹೇಳಿದರು.