ತೃಣಮೂಲ ಕಾಂಗ್ರೆಸ್ ಗೆ ಮತ ಚಲಾಯಿಸುವಂತೆ ಮುಸಲ್ಮಾನರಿಗೆ ಕರೆ ನೀಡಿದ ಪ್ರಕರಣ
ಮಮತಾ ಬ್ಯಾನರ್ಜಿ ತಮ್ಮ ವರ್ಚಸ್ಸನ್ನು ಹೆಚ್ಚಿಸಕೊಳ್ಳಲು ಎಷ್ಟು ಹೇಳಿಕೆಗಳನ್ನು ನೀಡಿದರೂ, ಹಿಂದೂಗಳು ಮಮತಾ (ಬಾನೊ) ಅವರ ನಕಲಿ ಜಾತ್ಯತೀತತೆಯನ್ನು ಗುರುತಿಸಿದ್ದಾರೆ !
ಕೋಲಕಾತಾ (ಬಂಗಾಲ) – ಚುನಾವಣಾ ಆಯೋಗವು ನನಗೆ ೧೦ ನೋಟಿಸ್ ಕಳುಹಿಸಬಹುದು; ಆದರೆ ಉತ್ತರ ಒಂದೇ ಆಗಿರುತ್ತದೆ. ಹಿಂದೂ ಮತ್ತು ಮುಸಲ್ಮಾನರ ಮತಗಳ ವಿಭಜನೆಯ ವಿರುದ್ಧ ನಾನು ಯಾವಾಗಲೂ ಧ್ವನಿ ಎತ್ತಲಿದ್ದೇನೆ. ನಾನು ಧರ್ಮದ ಆಧಾರದ ಮೇಲೆ ಮತದಾರರನ್ನು ವಿಂಗಡಿಸುವುದನ್ನು ವಿರೋಧಿಸುತ್ತೇನೆ ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ನೋಟಿಸ್‍ನ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು. (ಸತತವಾಗಿ ಮುಸಲ್ಮಾನರನ್ನು ಓಲೈಸುವ ಹಾಗೂ ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಾಡುವ ಮಮತಾ ಬ್ಯಾನರ್ಜಿಯವರ ಹೇಳಿಕೆಯನ್ನು ಯಾರು ನಂಬುತ್ತಾರೆ ? – ಸಂಪಾದಕರು) ‘ಮುಸಲ್ಮಾನ ಮತದಾರರು ತೃಣಮೂಲ ಕಾಂಗ್ರೇಸ್‍ಗೆ ಮತ ನೀಡಬೇಕು’, ಎಂದು ಮಮತಾ ಬ್ಯಾನರ್ಜಿಯವರಯ ಹೇಳಿಕೆ ನೀಡಿದ್ದರು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅವರಿಗೆ ನೋಟಿಸ್ ಕಳುಹಿಸಿತ್ತು.
Doesn’t matter even if I get 10 EC notices: Mamata Banerjee https://t.co/NHf9VSne0Y
— Hindustan Times (@HindustanTimes) April 8, 2021
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಹಿಂದೂ ಮತ್ತು ಮುಸಲ್ಮಾನ ಮತಗಟ್ಟೆಗಳ ಬಗ್ಗೆ ಉಲ್ಲೇಖಿಸುತ್ತಾರೆ. ಆ ಸಮಯದಲ್ಲಿ ಅವರ ವಿರುದ್ಧ ಏಕೆ ದೂರು ದಾಖಲಾಗುವುದಿಲ್ಲ? ಎಂಬ ಪ್ರಶ್ನೆಯನ್ನು ಮಮತಾ ಬ್ಯಾನರ್ಜಿ ಮುಂದಿಟ್ಟಿದ್ದಾರೆ. ನಂದಿಗ್ರಾಮದಲ್ಲಿ ನಡೆದ ಚುನಾವಣೆಯ ಸಮಯದಲ್ಲಿ, ಕೆಲವು ನಾಯಕರು ‘ಮಿನಿ ಪಾಕಿಸ್ತಾನ’ ಎಂಬ ಪದವನ್ನು ಬಳಸಿದ್ದರು. ಅವರ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ ? ಎಂಬ ಪ್ರಶ್ನೆಯನ್ನು ಅವರು ಆಯೋಗಕ್ಕೆ ಕೇಳಿದರು. (‘ಮಿನಿ ಪಾಕಿಸ್ತಾನ’ ಎಂಬ ಪದವು ಮಮತಾ ಬ್ಯಾನರ್ಜಿಯವರಿಗೆ ಏಕೆ ವೇದನೆ ಆಗುತ್ತದೆ ? ಸತ್ಯ ಸಂಗತಿಯನ್ನು ಬಹಿರಂಗವಾಗಿ ಹೇಳಿದರೆ, ಅದರಲ್ಲಿ ಏನು ತಪ್ಪಿದೆ ? – ಸಂಪಾದಕರು)