ಆರೋಪಿಯನ್ನು ಬಂಧಿಸಲು ಬಂಗಾಲಕ್ಕೆ ಹೋದ ಬಿಹಾರದ ಪೊಲೀಸ್ ಅಧಿಕಾರಿಯನ್ನೇ ಹತ್ಯೆಗೈದ ಜನರಗುಂಪು!

ಮೊದಲೇ ಬಂಗಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ; ಆದರೆ, ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ನಿರ್ಲಕ್ಷಿಸಿವೆ ಮತ್ತು ಕೇಂದ್ರ ಸರಕಾರವು ರಾಷ್ಟ್ರಪತಿಗಳ ಆಡಳಿತವನ್ನು ಹೇರದ ಕಾರಣ ಓರ್ವ ಪೊಲೀಸ್ ಅಧಿಕಾರಿಯ ಹತ್ಯೆಯಾಯಿತು, ಇದು ರಾಜಕೀಯ ಪಕ್ಷಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ.

ನವ ದೆಹಲಿ : ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಬಿಹಾರದ ಕಿಶನಗಂಜ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಅಶ್ವಿನಿ ಕುಮಾರ ಇವರು ಪೊಲೀಸ್ ತಂಡದೊಂದಿಗೆ ಬಂಗಾಲಕ್ಕೆ ತೆರಳಿದ್ದರು. ಈ ಸಮಯದಲ್ಲಿ ದಿನಾಜಪುರ ಜಿಲ್ಲೆಯ ಪಂಜಿಪಾಡಾ ಪೊಲೀಸ್ ಪ್ರದೇಶದ ಪನತಾಪಾಡಾ ಗ್ರಾಮದಲ್ಲಿ, ಆರೋಪಿಗಳನ್ನು ರಕ್ಷಿಸಲು ಜನಸಮೂಹವು ಅಶ್ವಿನಿ ಕುಮಾರ ತಂಡದ ಮೇಲೆ ಹಲ್ಲೆ ನಡೆಸಿತು. ಇದರಲ್ಲಿ ತಂಡದ ಇತರ ಪೊಲೀಸರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಅಶ್ವಿನಿ ಕುಮಾರ ಜನಸಮೂಹದ ಕೈಗೆ ಸಿಲುಕಿದರು. ನಂತರ ಅವರನ್ನು ಅಮಾನವೀಯವಾಗಿ ಥಳಿಸಲಾಯಿತು. ಕತ್ತು ಹಿಸುಕಿದುದರಿಂದ ಅವರು ಮರಣ ಹೊಂದಿದರು. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

. ಬಿಹಾರದ ಪೊಲೀಸ್ ಮಹಾನಿರ್ದೇಶಕರು, ತಾವು ಈ ಘಟನೆಯ ಬಗ್ಗೆ ಬಂಗಾಲದ ಪೊಲೀಸ್ ಮಹಾನಿರ್ದೆಶಕರೊಂದಿಗೆ ಚರ್ಚಿಸಿದ್ದೇವೆ. ಆಗ ಘಟನೆಯ ಬಗ್ಗೆ ಅವರು ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಹುತಾತ್ಮರಾದ ಪೊಲೀಸ್ ಅಧಿಕಾರಿಗಳ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

೨. ಅಶ್ವಿನಿ ಕುಮಾರ್ ಅವರ ಕುಟುಂಬಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ತಲಾ ೧ ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಬಿಹಾರ ಪೊಲೀಸ್ ಸಂಘದ ಅಧ್ಯಕ್ಷ ಮೃತ್ಯುಂಜಯ ಕುಮಾರ ಸಿಂಗ್ ಒತ್ತಾಯಿಸಿದ್ದಾರೆ.