ಪ್ರಯಾಗರಾಜನಲ್ಲಿ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಬಳಿ ಕೋಟ್ಯಂತರ ರೂಪಾಯಿ ಆಸ್ತಿ ಇದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತನ ಆರೋಪ

ಪ್ರಯಾಗರಾಜ ಜಿಲ್ಲೆಯ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಬಳಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆತನ ಬಳಿ ದುಬಾರಿ ಕಾರುಗಳು ಮತ್ತು ಫ್ಲ್ಯಾಟ್‌ಗಳು, ಜೊತೆಗೆ ಭೂಮಿಯೂ ಇದೆ. ಈ ಬಗ್ಗೆ ತನಿಖೆ ನಡೆಸಬೇಕು, ಎಂದು ಆರ್‌ಟಿಐ ಕಾರ್ಯಕರ್ತ ನೂತನ ಠಾಕೂರ ಅವರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಕಳುಹಿಸಿ ಒತ್ತಾಯಿಸಿದ್ದಾರೆ.

ಮುಸ್ಲಿಂ ಹುಡುಗಿಯು ಹಿಂದೂ ಯುವಕನನ್ನು ಮದುವೆಯಾದ ನಂತರ ಅವರಿಗೆ ಭದ್ರತೆ ಒದಗಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ಪೊಲೀಸರಿಗೆ ಆದೇಶ

ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಮತಾಂತರ ಮಾಡುತ್ತಿರುವ ಮತಾಂಧರ ವಿರುದ್ಧ ಹಿಂದೂ ಸಂಘಟನೆಗಳು ಧ್ವನಿ ಎತ್ತಿದಾಗ ಜಾತ್ಯತೀತವಾದಿಗಳು ಇದನ್ನು ವಿರೋಧಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಬಾರಾಬಂಕಿ (ಉತ್ತರ ಪ್ರದೇಶ)ಯ ಶ್ರೀ ಹನುಮಾನ ದೇವಾಲಯದ ಪ್ರದೇಶದಲ್ಲಿ ಹರಿತವಾದ ಶಸ್ತ್ರಗಳಿಂದ ೭೦ ವರ್ಷದ ಅರ್ಚಕನ ಹತ್ಯೆ !

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರಂತಹ ಪ್ರಖರ ಹಿಂದುತ್ವನಿಷ್ಠರು ಅಧಿಕಾರದಲ್ಲಿರುವಾಗ ಅಲ್ಲಿ ಸಾಧುಗಳು, ಸಂತ-ಮಹಂತ ಮತ್ತು ಪುರೋಹಿತರ ಹತ್ಯೆಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಎಲ್ಲರ ಸುರಕ್ಷತೆಗಾಗಿ ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಪೇಕ್ಷಿತವಿದೆ !

ಆಜಮ್‍ಗಡ್ (ಉತ್ತರ ಪ್ರದೇಶ) ಜಿಲ್ಲೆಯ ೩೦೦ ಮದರಸಾಗಳಲ್ಲಿ ಹಗರಣ !

ಇಂತಹ ಹಗರಣಗಳು ದೇಶದ ಬೇರೆಡೆ ನಡೆಯುತ್ತಿದ್ದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದರ ಬಗ್ಗೆ ತನಿಖೆಯನ್ನು ನಡೆಸಬೇಕು ! ಅನುದಾನ ನೀಡುವ ಮೊದಲು ಮದರಸಾಗಳ ಸರಿಯಾದ ಮಾಹಿತಿ ಮತ್ತು ಅದರ ಪರಿಶೀಲನೆಯು ಆಡಳಿತದಿಂದಾಗದಿರಲು ಏನು ಕಾರಣ ? ಅಥವಾ ಆಡಳಿತ ಅಧಿಕಾರಿಗಳೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ? ಇವುಗಳನ್ನು ಸಹ ಅನ್ವೇಷಿಸಬೇಕು !

ಕಾನಪುರ್ (ಉತ್ತರ ಪ್ರದೇಶ)ದ ದೇವಾಲಯಗಳ ಭೂಮಿಯನ್ನು ಆಕ್ರಮಿಸಿ ಅಲ್ಲಿ ಬಿರಿಯಾನಿ ಅಂಗಡಿಗಳನ್ನು ತೆರೆದಿರುವುದು ಬೆಳಕಿಗೆ ಬಂದಿದೆ !

‘ಅಂತಹವರನ್ನು ಸಂಕಟದ ಸಮಯದಲ್ಲಿ ದೇವರಾದರೂ ಏಕೆ ರಕ್ಷಿಸಬೇಕು ?’ ಎಂಬ ಪ್ರಶ್ನೆ ಯಾರ ಮನಸ್ಸಿಗೆ ಬಂದರೆ ಅದರಲ್ಲಿ ತಪ್ಪೇನಿದೆ ? ಇತರ ಪಂಥಗಳ ಶ್ರದ್ಧಾಸ್ಥಾನಗಳ ಸಂದರ್ಭದಲ್ಲಿ ಈ ರೀತಿ ಎಂದಾದರೂ ಸಂಭವಿಸುತ್ತವೆಯೇ ?

ಹಿಂದೂ ಹುಡುಗಿಗೆ ಆಮಿಷ ಒಡ್ಡಿ ಅವಳನ್ನು ಮದುವೆಯಾಗುವ ಮತಾಂಧನ ಪ್ರಯತ್ನ ಬಜರಂಗ ದಳದ ಜಾಗರೂಕತೆಯಿಂದ ವಿಫಲ !

೨೨ ವರ್ಷದ ಹಿಂದೂ ಯುವತಿಗೆ ಆಮಿಷ ಒಡ್ಡಿ ಅವಳೊಂದಿಗೆ ‘ಕೋರ್ಟ್ ಮ್ಯಾರೇಜ್’ ಮಾಡಿಕೊಳ್ಳುವ ೨೬ ವರ್ಷದ ಮತಾಂಧನೊಬ್ಬನ ಸಂಚು ಭಜರಂಗದಳದ ಜಾಗರೂಕತೆಯಿಂದ ವಿಫಲವಾಯಿತು. ಮತಾಂಧನು ಸಂತ್ರಸ್ತೆಯ ಕುಟುಂಬವನ್ನು ಕತ್ತಲೆಯಲ್ಲಿರಿಸಿಕೊಂಡು ಮದುವೆಯಾಗಲು ಯೋಜನೆಯನ್ನು ರೂಪಿಸಿದ್ದನು.

ಚಿತ್ರಕೂಟ್ (ಉತ್ತರ ಪ್ರದೇಶ) ದ ಜೈಲಿನಲ್ಲಿ ಬಂಧಿತ ಗೂಂಡಾನಿಂದಾದ ಗುಂಡು ಹಾರಾಟದಲ್ಲಿ ಇಬ್ಬರು ಗೂಂಡಾಗಳ ಸಾವು

ಬಂದೂಕುಗಳು ಕಾರಾಗೃಹಗಳಿಗೆ ಹೇಗೆ ತಲುಪುತ್ತವೆ ? ಜೈಲಿನಲ್ಲಿರುವ ಪೊಲೀಸರು ನಿದ್ದೆ ಮಾಡುತ್ತಿದ್ದಾರೆಯೇ ಅಥವಾ ಅವರ ರಹಸ್ಯ ಬೆಂಬಲದಿಂದಲೇ ಶಸ್ತ್ರಾಸ್ತ್ರಗಳು ತಲುಪುತ್ತದೆಯೇ, ಎಂಬ ಬಗ್ಗೆ ತನಿಖೆ ನಡೆಸಬೇಕು !

ಸಂಚಾರ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ಗೋರಖ್‌ಪುರದ (ಉತ್ತರ ಪ್ರದೇಶ) ಮಸೀದಿಯ ಇಮಾಮ್‌ನನ್ನು ಥಳಿಸಿದ ಪೊಲೀಸ್ ಅಧಿಕಾರಿ !

ಇಲ್ಲಿಯ ತುರ್ಕಮಾನಪುರದಲ್ಲಿ ಮಸೀದಿಯ ಹೊರಗೆ ಓರ್ವ ಈಮಾಮನನ್ನು ಪೊಲೀಸ ಅಧಿಕಾರಿಯು ಸಂಚಾರ ನಿಷೇಧವನ್ನು ಉಲ್ಲಂಘಿಸಿದಕ್ಕಾಗಿ ಥಳಿಸಿದ್ದರಿಂದ ಬಿಗುವಿನ ವಾತಾವರಣ ಮೂಡಿತು. ಮತಾಂಧರ ಗುಂಪು ಇಲ್ಲಿನ ಪೊಲೀಸ್ ಠಾಣೆಯ ಪೊಲೀಸರನ್ನು ಮುತ್ತಿಗೆ ಹಾಕಿದರು.

ಅಯೋಧ್ಯೆಯ ಹಿಂದೂ ಬಹುಸಂಖ್ಯಾತ ಗ್ರಾಮದಲ್ಲಿ ಸರಪಂಚನೆಂದು ವಿಜಯಿಯಾದ ಮುಸ್ಲಿಂ ಅಭ್ಯರ್ಥಿ

ಇಲ್ಲಿಯ ರಾಜಾಪುರದ ಹಿಂದೂಬಹುಸಂಖ್ಯಾತ ಗ್ರಾಮದಲ್ಲಿ ಮುಸಲ್ಮಾನ ಅಭ್ಯರ್ಥಿಯನ್ನು ಸರಪಂಚನೆಂದುಆಯ್ಕೆ ಮಾಡಲಾಗಿದೆ. ಅವರ ಹೆಸರು ಹಫೀಜ ಅಜೀಮುದ್ದೀನ್ ಎಂದಾಗಿದೆ. ಈ ಗ್ರಾಮದಲ್ಲಿ ಕೇವಲ ೬೦೦ ಮತದಾರರು ಇದ್ದಾರೆ, ಅದರಲ್ಲಿ ೨೭ ಮಂದಿ ಮುಸಲ್ಮಾನರಿದ್ದಾರೆ.

ಕೊರೊನಾಗ್ರಸ್ತ ಶವಗಳಿಂದ ಬಟ್ಟೆಗಳನ್ನು ಕದ್ದು ಅವುಗಳ ಮೇಲೆ ‘ಬ್ರಾಂಡೆಡ್’ ಸಂಸ್ಥೆಗಳ ಲೋಗೊಗಳನ್ನು ತಗಲಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ನ ಬಂಧನ.

ಸ್ಮಶಾನ ಭೂಮಿಯಲ್ಲಿ ಕೊರೊನಾ ಪೀಡಿತ ಮೃತಪಟ್ಟ ವ್ಯಕ್ತಿಗಳ ದೇಹಗಳ ಮೇಲೆ ಬಟ್ಟೆಯ ಮೇಲೆ ‘ಬ್ರಾಂಡೆಡ್’ ಸಂಸ್ಥೆಗಳ ಲೋಗೊಗಳನ್ನು ಹಾಕಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಏಳು ಜನರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.