ಅಯೋಧ್ಯೆಯ ಹಿಂದೂ ಬಹುಸಂಖ್ಯಾತ ಗ್ರಾಮದಲ್ಲಿ ಸರಪಂಚನೆಂದು ವಿಜಯಿಯಾದ ಮುಸ್ಲಿಂ ಅಭ್ಯರ್ಥಿ

ಎಷ್ಟು ಮುಸಲ್ಮಾನ ಬಹುಸಂಖ್ಯಾತ ಗ್ರಾಮಗಳಲ್ಲಿ ಹಿಂದೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು ? ಹಿಂದೂಗಳು ಸಹಿಷ್ಣುಗಳು ಮತ್ತು ಸರ್ವಧರ್ಮ ಸಮಭಾವವನ್ನು ನಂಬುವುದರಿಂದ ಮಾತ್ರ ಹೀಗೆ ಸಾಧ್ಯವಾಗುತ್ತದೆ !

ಹಫೀಜ ಅಜೀಮುದ್ದೀನ್

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿಯ ರಾಜಾಪುರದ ಹಿಂದೂಬಹುಸಂಖ್ಯಾತ ಗ್ರಾಮದಲ್ಲಿ ಮುಸಲ್ಮಾನ ಅಭ್ಯರ್ಥಿಯನ್ನು ಸರಪಂಚನೆಂದುಆಯ್ಕೆ ಮಾಡಲಾಗಿದೆ. ಅವರ ಹೆಸರು ಹಫೀಜ ಅಜೀಮುದ್ದೀನ್ ಎಂದಾಗಿದೆ. ಈ ಗ್ರಾಮದಲ್ಲಿ ಕೇವಲ ೬೦೦ ಮತದಾರರು ಇದ್ದಾರೆ, ಅದರಲ್ಲಿ ೨೭ ಮಂದಿ ಮುಸಲ್ಮಾನರಿದ್ದಾರೆ.

೧. ‘ಈ ಚುನಾವಣೆಯಲ್ಲಿ ಗೆಲ್ಲುವುದು ನನಗೆ ಈದ್ ಉಡುಗೊರೆಯಂತೆ ಆಗಿದೆ’ ಗ್ರಾಮದಲ್ಲಿಯ ಹಿಂದೂ ಮತದಾರರು ನನ್ನನ್ನು ಆರಿಸಿದ್ದಾರೆ ಮತ್ತು ಈಗ ಅವರ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹಫೀಜ್ ಹೇಳಿದರು.

೨. ಗ್ರಾಮದ ರೈತ ಶೇಖರ್ ಸಾಹು ಅವರು, ‘ಜನರು ಧರ್ಮವಲ್ಲ, ಮನುಷ್ಯನನ್ನು ನೋಡಿ ಮತವನ್ನು ಚಲಾಯಿಸಿದ್ದಾರೆ. ನಾವೆಲ್ಲರೂ ಹಿಂದೂ ಧರ್ಮವನ್ನು ನಂಬುತ್ತೇವೆ; ಆದರೆ ಮುಸಲ್ಮಾನ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ, ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ ಎಂದು ತೋರಿಸಿ ಕೊಟ್ಟಿದ್ದೇವೆ ಎಂದು ಹೇಳಿದರು.