ಇಂತಹ ಘಟನೆಗಳನ್ನು ತಡೆಗಟ್ಟಲು ಸರಕಾರವು ರಾಷ್ಟ್ರೀಯ ಮಟ್ಟದಲ್ಲಿ ಜಿಹಾದ್ ವಿರೋಧಿ ಕಠಿಣ ಕಾನೂನುಗಳನ್ನು ಏಕೆ ಜಾರಿಗೊಳಿಸುತ್ತಿಲ್ಲ ?
ಉನ್ನಾವ್ (ಉತ್ತರ ಪ್ರದೇಶ) – ೨೨ ವರ್ಷದ ಹಿಂದೂ ಯುವತಿಗೆ ಆಮಿಷ ಒಡ್ಡಿ ಅವಳೊಂದಿಗೆ ‘ಕೋರ್ಟ್ ಮ್ಯಾರೇಜ್’ ಮಾಡಿಕೊಳ್ಳುವ ೨೬ ವರ್ಷದ ಮತಾಂಧನೊಬ್ಬನ ಸಂಚು ಭಜರಂಗದಳದ ಜಾಗರೂಕತೆಯಿಂದ ವಿಫಲವಾಯಿತು. ಮತಾಂಧನು ಸಂತ್ರಸ್ತೆಯ ಕುಟುಂಬವನ್ನು ಕತ್ತಲೆಯಲ್ಲಿರಿಸಿಕೊಂಡು ಮದುವೆಯಾಗಲು ಯೋಜನೆಯನ್ನು ರೂಪಿಸಿದ್ದನು. ಇದಕ್ಕಾಗಿ ಆತ ದಾಖಲೆಗಳನ್ನು ಸಹ ಸಿದ್ಧಪಡಿಸಿದನು. ಈ ಮಾಹಿತಿ ಸಿಕ್ಕಿದ ಕೂಡಲೇ ಭಜರಂಗದಳದ ಕಾರ್ಯಕರ್ತರು ಮತಾಂಧನನ್ನು ಹಿಡಿದು ಕೇಳಿದರು. ಆ ಸಮಯದಲ್ಲಿ, ಕಾರ್ಯಕರ್ತರು ಮತ್ತು ಮತಾಂಧ ಯುವಕರ ನಡುವೆ ಗಲಾಟೆ ನಡೆಯಿತು. ಘಟನೆಯ ಸ್ಥಳದಲ್ಲಿ ಯುವಕರ ತಾಯಿ ಕೂಡ ಉಪಸ್ಥಿತರಿದ್ದರು. ಆಕೆ ಕೂಗಾಡಿದಾಗ ಪೊಲೀಸರನ್ನು ಕರೆಸಲಾಯಿತು. ಪೊಲೀಸರು ಸ್ಥಳಕ್ಕೆ ಬಂದು ಮತಾಂಧ ಯುವಕನನ್ನು ಮತ್ತು ಹಿಂದೂ ಯುವತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಮತಾಂಧ ಯುವಕ ತನಗೆ ಆಮಿಷವೊಡ್ಡಿದ್ದಾನೆ ಎಂದು ಯುವತಿಯು ಪೊಲೀಸರಿಗೆ ತಿಳಿಸಿದ್ದಾಳೆ. ಈ ಪ್ರಕರಣದಲ್ಲಿ ಯುವತಿಯ ಚಿಕ್ಕಪ್ಪ ಮತಾಂಧ ಯುವಕನ ವಿರುದ್ಧ ದೂರು ದಾಖಲಿಸಿದ್ದು, ಯುವಕನ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.