ಚಿತ್ರಕೂಟ್ (ಉತ್ತರ ಪ್ರದೇಶ) ದ ಜೈಲಿನಲ್ಲಿ ಬಂಧಿತ ಗೂಂಡಾನಿಂದಾದ ಗುಂಡು ಹಾರಾಟದಲ್ಲಿ ಇಬ್ಬರು ಗೂಂಡಾಗಳ ಸಾವು

ಪೊಲೀಸರಿಂದ ಗುಂಡು ಹಾರಾಟ ಮಾಡಿದ ಗುಂಡಾನ ಮೃತ್ಯು

* ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಹದಗೆಟ್ಟಿದೆ, ಅದರಲ್ಲಿ ಈಗ ಜೈಲಿನಲ್ಲಿಯೂ ಅದೇ ಸ್ಥಿತಿ ಇದು ಪೊಲೀಸರಿಗೆ ನಾಚಿಕೆಯ ಸಂಗತಿಯಾಗಿದೆ !

* ಬಂದೂಕುಗಳು ಕಾರಾಗೃಹಗಳಿಗೆ ಹೇಗೆ ತಲುಪುತ್ತವೆ ? ಜೈಲಿನಲ್ಲಿರುವ ಪೊಲೀಸರು ನಿದ್ದೆ ಮಾಡುತ್ತಿದ್ದಾರೆಯೇ ಅಥವಾ ಅವರ ರಹಸ್ಯ ಬೆಂಬಲದಿಂದಲೇ ಶಸ್ತ್ರಾಸ್ತ್ರಗಳು ತಲುಪುತ್ತದೆಯೇ, ಎಂಬ ಬಗ್ಗೆ ತನಿಖೆ ನಡೆಸಬೇಕು !

ಚಿತ್ರಕೂಟ್ (ಉತ್ತರ ಪ್ರದೇಶ) – ಇಲ್ಲಿನ ಜೈಲಿನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಗೂಂಡಾ ಕೈದಿಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ ಕುಖ್ಯಾತ ಗೂಂಡಾನು ಶಾಸಕ ಮುಖ್ತಾರ್ ಅನ್ಸಾರಿ ಅವರಿಗೆ ನಿಕಟವಾಗಿದ್ದರು. ಈ ಸಮಯದಲ್ಲಿ ಪೊಲೀಸರು ಗುಂಡು ಹಾರಾಟ ಮಾಡುವವನನ್ನು ಗುಂಡಿಕ್ಕಿ ಕೊಂದಿದ್ದಾರೆ.

( ಸೌಜನ್ಯ: IndiaTV News)

ಇತ್ತೀಚೆಗೆ ಸುಲ್ತಾನಪುರ ಜೈಲಿನಿಂದ ಚಿತ್ರಕೂಟ ಜೈಲಿಗೆ ಸ್ಥಳಾಂತರಗೊಂಡಿದ್ದ ಅಂಶು ದೀಕ್ಷಿತ ಎಂಬ ಗೂಂಡಾನು ಗುಂಡು ಹಾರಾಟ ನಡೆಸಿದನು ಇದರಲ್ಲಿ ಮುಕಿಮ ಕಾಲಾ ಮತ್ತು ಮೆರಾಜ ಎಂಬ ಇಬ್ಬರು ಗೂಂಡಾಗಳು ಸಾವನ್ನಪ್ಪಿದರು. ಮೆರಾಜ್ ಕುಖ್ಯಾತ ಗೂಂಡಾ ಅನ್ಸಾರಿಗೆ ನಿಕಟವರ್ತಿಯಾಗಿದ್ದನು. ಅಂಶು ಇಬ್ಬರನ್ನು ಕೊಂದ ನಂತರ ಆತ ೫ ಕೈದಿಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದನು. ಆತನನ್ನು ಬಿಡುಗಡೆ ಮಾಡಲು ಪೊಲೀಸರು ಮನವಿ ಮಾಡಿದರೂ ಅವರನ್ನು ಬಿಡುಗಡೆ ಮಾಡದ ಕಾರಣ ಪೊಲೀಸ್ ನಡೆಸಿದ ಗುಂಡಿನ ದಾಳಿಯಲ್ಲಿ ಅಂಶುನನ್ನು ಕೊಲ್ಲಲಾಯಿತು.