ಸಂಚಾರ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ಗೋರಖ್‌ಪುರದ (ಉತ್ತರ ಪ್ರದೇಶ) ಮಸೀದಿಯ ಇಮಾಮ್‌ನನ್ನು ಥಳಿಸಿದ ಪೊಲೀಸ್ ಅಧಿಕಾರಿ !

ಮತಾಂಧರ ವಿರೋಧದ ನಂತರ ಪೊಲೀಸ ಅಧಿಕಾರಿ ಅಮಾನತು

ಗೋರಖಪುರ (ಉತ್ತರಪ್ರದೇಶ) – ಇಲ್ಲಿಯ ತುರ್ಕಮಾನಪುರದಲ್ಲಿ ಮಸೀದಿಯ ಹೊರಗೆ ಓರ್ವ ಈಮಾಮನನ್ನು ಪೊಲೀಸ ಅಧಿಕಾರಿಯು ಸಂಚಾರ ನಿಷೇಧವನ್ನು ಉಲ್ಲಂಘಿಸಿದಕ್ಕಾಗಿ ಥಳಿಸಿದ್ದರಿಂದ ಬಿಗುವಿನ ವಾತಾವರಣ ಮೂಡಿತು. ಮತಾಂಧರ ಗುಂಪು ಇಲ್ಲಿನ ಪೊಲೀಸ್ ಠಾಣೆಯ ಪೊಲೀಸರನ್ನು ಮುತ್ತಿಗೆ ಹಾಕಿದರು. ಪೊಲೀಸ್ ಠಾಣೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳಕ್ಕೆ ತಲುಪಿದರು. ಪ್ರಸ್ತುತ, ಸಧ್ಯ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಇಮಾಮ್ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಪೊಲೀಸ್ ಇನ್ಸ್ ಪೆಕ್ಟರ್‌ರು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾ ಥಳಿಸಿದ್ದಾರೆ ಮತ್ತು ಬಂದೂಕಿನಿಂದ ಬೆದರಿಕೆ ಹಾಕಿದ್ದಾರೆ ಎಂದು ಇಮಾಮ್ ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಮತಾಂಧರು ಅಧಿಕಾರಿಯನ್ನು ಅಮಾನತುಗೊಳಿಸಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಸಂಚಾರ ನಿಷೇಧ ನಿಯಮಗಳನ್ನು ಪಾಲಿಸಬೇಕೆಂದು ಜನರಿಗೆ ಹೇಳುತ್ತಿರುವಾಗ, ಇಮಾಮ್‌ರು ಸಮೂಹವನ್ನು ಪ್ರಚೋದಿಸಿದರು ಮತ್ತು ಜನಸಮೂಹವು ದಾಳಿ ಮಾಡಿತು ಎಂದು ಪೊಲೀಸ್ ಅಧಿಕಾರಿಯು ಹೇಳಿದರು.