ಸ್ವಾತಂತ್ರ್ಯಾನಂತರದಿಂದ ಇಲ್ಲಿಯವರೆಗಿನ ಆಡಳಿತಗಾರರಿಂದ ಸಮಾಜಕ್ಕೆ ಸಾಧನೆಯ ಪಾಠ ಕಲಿಸುವುದು ದೂರದ ಮಾತು; ಆದರೆ ಸರಳ ನೈತಿಕ ಮೌಲ್ಯಗಳನ್ನು ಸಹ ಕಲಿಸದೇ ಇದ್ದುದರ ಫಲಿತಾಂಶ ! ಸತ್ತವರ ನೆತ್ತಿಯ ಮೇಲಿನ ಬೆಣ್ಣೆ ತಿನ್ನುವಂತಹ ಇಂತಹ ವಿಕೃತ ಮಾನಸಿಕತೆಯವರನ್ನು ಸರಕಾರವು ಜೈಲಿಗೆ ತಳ್ಳಬೇಕು !
ಬಾಗಪತ (ಉತ್ತರ ಪ್ರದೇಶ) – ಸ್ಮಶಾನ ಭೂಮಿಯಲ್ಲಿ ಕೊರೊನಾ ಪೀಡಿತ ಮೃತಪಟ್ಟ ವ್ಯಕ್ತಿಗಳ ದೇಹಗಳ ಮೇಲೆ ಬಟ್ಟೆಯ ಮೇಲೆ ‘ಬ್ರಾಂಡೆಡ್’ ಸಂಸ್ಥೆಗಳ ಲೋಗೊಗಳನ್ನು ಹಾಕಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಏಳು ಜನರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಶ್ರೀಪಾಲ ಜೈನ್, ಆಶಿಶ ಜೈನ್, ರಾಮಮೋಹನ, ಅರವಿಂದ ಜೈನ್, ಈಶ್ವರ, ವೇದಪ್ರಕಾಶ ಮತ್ತು ಮೊಬಿನ ಎಂದು ಗುರುತಿಸಲಾಗಿದ್ದು, ಪೊಲೀಸರು ಅವರಿಂದ ದೊಡ್ಡ ಸಂಖ್ಯೆಯ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊರೋನಾದಿಂದ ಸಶ್ಮಾನ ಫುಲ್; ಹೆಣದ ಮೇಲಿನ ಬಟ್ಟೆ ಕದ್ದು ವ್ಯಾಪಾರ ಮಾಡುತ್ತಿದ್ದ ಗ್ಯಾಂಗ್ ಅರಸ್ಟ್!#CoronavirusIndia #UttarPradesh #Deadbody #Crematoria #Policehttps://t.co/xHxE5VNWrF
— Asianet Suvarna News (@AsianetNewsSN) May 9, 2021
ಬಾಡೌತ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜಯ ಶರ್ಮಾ ಅವರು ನೀಡಿದ ಮಾಹಿತಿಗನುಸಾರ, ಮೇ ೯ ರಂದು ಸಂಚಾರ ನಿಷೇಧದ ಸಮಯದಲ್ಲಿ ಪೊಲೀಸ್ ತನಿಖೆ ನಡೆಸುತ್ತಿರುವಾಗ, ಪೊಲೀಸರಿಗೆ ಒಂದು ವಾಹನದಲ್ಲಿ ‘ಬ್ರಾಂಡೆಡ್’ ಬಟ್ಟೆಗಳು ಪತ್ತೆಯಾಗಿದೆ. ಪೊಲೀಸರಿಗೆ ಈ ಬಗ್ಗೆ ಅನುಮಾನ ಮೂಡಿದಾಗ, ಅವರು ಈ ಬಟ್ಟೆಗಳನ್ನು ಖರೀದಿಗೆ ಸಂಬಂದಿತ ಬಿಲ್ ಹಾಗೂ ರಶೀದಿಯಂತಹ ದಾಖಲೆಗಳನ್ನು ಕೇಳಿದರು; ಆದರೆ, ವಾಹನವನ್ನು ತೆಗೆದುಕೊಂಡು ಹೋಗುವವನ ಬಳಿ ವಾಹನದಲ್ಲಿ ಸರಕುಗಳ ಬಗ್ಗೆ ಯಾವುದೇ ದಾಖಲೆಗಳು ಇರಲಿಲ್ಲ. ಆಗ ಪೊಲೀಸರು ಆತನನ್ನು ಪ್ರಶ್ನಿಸಿದಾಗ, ನಾವು ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ದೇಹದ ಮೇಲಿನ ಬಟ್ಟೆಗಳನ್ನು ಕದ್ದು ಮಾರಾಟ ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡರು. ಕಳೆದ ಎರಡು ವರ್ಷಗಳಿಂದ ಅವರ ವ್ಯವಹಾರ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.