ಚಿತ್ರಕೂಟ (ಉತ್ತರ ಪ್ರದೇಶ)ದಲ್ಲಿ ಕೊರೋನಾ ಪೀಡಿತ ಡಾ. ಬಿಲಾಲ್ ಅಹಮದ್ ಇವರು ಮಾಸ್ಕ್ ಹಾಕದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದರು !

ಇಲ್ಲಿಯ ದ್ವಾರಕಾಪುರಿಯಲ್ಲಿ ವೈದ್ಯ ಬಿಲಾಲ್ ಅಹಮದ್ ಗೆ ಕೊರೋನಾ ಸೋಂಕು ತಗುಲಿತು. ಅದರ ನಂತರವೂ ಬಿಲಾಲ್ ಅಹಮದ್ ಚಿಕಿತ್ಸಾಲಯವನ್ನು ಮುಂದುವರೆಸಿದರು ಮತ್ತು ಮಾಸ್ಕ್ಅನ್ನು ಹಾಕದೆ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಅಷ್ಟೇ ಅಲ್ಲ, ಆಸ್ಪತ್ರೆಯ ಅದೇ ಕಟ್ಟಡದಲ್ಲಿ ನಡೆಯುತ್ತಿರುವ ಸಾಮೂಹಿಕ ನಮಾಜ್ ಪಠಣಕ್ಕೂ ಅವರು ಹಾಜರಿದ್ದರು.

ಕೊರೋನಾದ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದ ಗುಜರಾತ ಉಚ್ಚ ನ್ಯಾಯಾಲಯ!

ಕೊರೋನಾಗೆ ಸಂಬಂಧಿಸಿದಂತೆ ಸರಕಾರವು ಮಾಡಿದ ಪರಿಹಾರೋಪಾಯಗಳ ದಾವೆಗಳು ಮತ್ತು ವಾಸ್ತವ ಪರಿಸ್ಥಿತಿಯ ನಡುವೆ ದೊಡ್ಡ ವ್ಯತ್ಯಾಸವಿದೆ, ಎಂದು ಕಠೋರ ಮಾತುಗಳಲ್ಲಿ ಗುಜರಾತ ಉಚ್ಚ ನ್ಯಾಯಾಲಯವು ಕರೋನಾ ಪರಿಸ್ಥಿತಿಯ ಬಗ್ಗೆ ಗುಜರಾತ ಸರಕಾರಕ್ಕೆ ಛೀಮಾರಿ ಹಾಕಿದೆ.

ಮೈಸೂರಿನಲ್ಲಿ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದುದರಿಂದ ಗೀತೆಯ ೩ ಸಾವಿರ ಪ್ರತಿಗಳು ಸುಟ್ಟುಕರಕಲು

ದುಷ್ಕರ್ಮಿಗಳು ಗ್ರಂಥಾಲಯಕ್ಕೆ ಹಚ್ಚಿದ್ದ ಬೆಂಕಿಯಲ್ಲಿ ಭಗವದ್ಗೀತೆಯ ೩ ಸಾವಿರ ಪ್ರತಿಗಳು ಮತ್ತು ಕುರಾನ್ ಮತ್ತು ಬೈಬಲ್‍ನ ೧ ಸಾವಿರ ಪ್ರತಿಗಳು ನಾಶವಾದವು. ಈ ಗ್ರಂಥಾಲಯವು ಸೈಯದ್ ಇಸಾಕ್ ಎಂಬ ವ್ಯಕ್ತಿಗೆ ಸೇರಿದೆ. ಇಲ್ಲಿ ಒಟ್ಟು ೧೧ ಸಾವಿರ ಪುಸ್ತಕಗಳು ಇದ್ದವು.

ಚಬಡಾ (ರಾಜಸ್ಥಾನ)ದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮತಾಂಧರಿಂದ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ

ಇಲ್ಲಿನ ಚಬಡಾ ಪ್ರದೇಶದ ಧರನಾವದಾ ಚೌಕ್‍ನಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಮತಾಂಧರು ಹಿಂಸಾಚಾರವನ್ನು ನಡೆಸಿದ್ದಾರೆ. ಇದರಲ್ಲಿ ಅನೇಕ ಅಂಗಡಿಗಳನ್ನು ಸುಡುವುದರೊಂದಿಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ, ಪರಿಣಾಮವಾಗಿ ಪೊಲೀಸರು ಲಾಠಿಚಾರ್ಜ ಮಾಡಿದರು, ಅದೇರೀತಿ ಸೆಕ್ಷನ್ ೧೪೪ ಜಾರಿಗೊಳಿಸಿದರು.

ಕಾಶಿ ವಿಶ್ವನಾಥ ದೇವಸ್ಥಾನ ಕಕ್ಷಿದಾರ ಹರಿಹರ ಪಾಂಡೆಯ ಇವರಿಗೆ ಮತಾಂಧರಿಂದ ಜೀವಬೆದರಿಕೆ !

ಇಲ್ಲಿನ ಕಾಶಿ ವಿಶ್ವನಾಥ ದೇವಾಲಯದ ಮುಂಭಾಗದಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮತ್ತು ಉತ್ಖನನ ಮಾಡಲು ನ್ಯಾಯಾಲಯ ಆದೇಶಿಸಿದ ನಂತರ ದೇವಾಲಯದ ಕಕ್ಷಿದಾರ ಹರಿಹರ ಪಾಂಡ್ಯೆಯ ಇವರಿಗೆ ಯಾಸೀನ್ ಎಂಬ ಮತಾಂಧನು ಜೀವಬೆದರಿಕೆಯೊಡ್ಡಿದ್ದಾನೆ.

ಕದ್ದಿದ್ದ ದೇಗುಲದ ಘಂಟೆ ವಾಪಸ್ ಇಟ್ಟ ಕಳ್ಳರು

ಆನಂದಪುರ ಹೊಸಗುಂದದ ಶ್ರೀ ಕಂಚಿಕಾಳಮ್ಮ ದೇವಾಲಯದಲ್ಲಿ ಕಳವು ಮಾಡಿದ್ದ ಎರಡು ಘಂಟೆಗಳನ್ನು ಕಳ್ಳರು ೫೦೦ ರೂ. ತಪ್ಪೊಪ್ಪಿಗೆ ಕಾಣಿಕೆ ಸಹಿತ ಮಂಗಳವಾರ ವಾಪಸ್ ಇಟ್ಟು ಹೋಗಿದ್ದಾರೆ. ಮಾರ್ಚ್ ೨೪ ರಂದು ಸಂಜೆ ಅರ್ಚಕರು ದೇವಾಲಯದ ಪೂಜಿ ಮುಗಿಸಿ ಬೀಗ ಹಾಕಿ ಹೊರಡುವ ಸಮಯದಲ್ಲಿ ಪ್ರವೇಶದ್ವಾರದ ಬಳಿ ಇರುವ ದೊಡ್ಡ ೨ ಘಂಟೆಗಳನ್ನು ಬೈಕ್‌ನಲ್ಲಿ ಬಂದಿದ್ದ ಮೂವರು ಕದ್ದು ಪರಾರಿಯಾಗಿದ್ದರು.

ಅನಾಥಾಶ್ರಮದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮತಾಂಧನ ಬಂಧನ

ಮಂಗಳೂರಿನ ನೂರಾನಿಯಾ ಯತಿಮಖಾನಾ ದಾರುಲ್ ಮಸ್ಕಿನ್‍ನ ಅನಾಥಾಶ್ರಮದಲ್ಲಿ ಅಸಹಾಯಕ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಉಸ್ತಾದ್ ಅಯೂಬ್ ಕೊಣಾಜೆ (ವಯಸ್ಸು ೫೨) ಇವನನ್ನು ಬಂಧಿಸಲಾಗಿದೆ.

ಆರೋಪಿಯನ್ನು ಬಂಧಿಸಲು ಬಂಗಾಲಕ್ಕೆ ಹೋದ ಬಿಹಾರದ ಪೊಲೀಸ್ ಅಧಿಕಾರಿಯನ್ನೇ ಹತ್ಯೆಗೈದ ಜನರಗುಂಪು!

ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಬಿಹಾರದ ಕಿಶನಗಂಜ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಅಶ್ವಿನಿ ಕುಮಾರ ಇವರು ಪೊಲೀಸ್ ತಂಡದೊಂದಿಗೆ ಬಂಗಾಲಕ್ಕೆ ತೆರಳಿದ್ದರು. ಈ ಸಮಯದಲ್ಲಿ ದಿನಾಜಪುರ ಜಿಲ್ಲೆಯ ಪಂಜಿಪಾಡಾ ಪೊಲೀಸ್ ಪ್ರದೇಶದ ಪನತಾಪಾಡಾ ಗ್ರಾಮದಲ್ಲಿ, ಆರೋಪಿಗಳನ್ನು ರಕ್ಷಿಸಲು ಜನಸಮೂಹವು ಅಶ್ವಿನಿ ಕುಮಾರ ತಂಡದ ಮೇಲೆ ಹಲ್ಲೆ ನಡೆಸಿತು.

ಭಾಜಪವು ಹಿಂದುತ್ವದ ವಾತಾವರಣವನ್ನು ಸೃಷ್ಟಿಸಿರುವುದರಿಂದ ನಮಗೆ ಬಹುಶಃ ಮತ ಸಿಗದಿರಬಹುದು ! – ಅಶೋಕ ಗೆಹ್ಲೋತ, ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸತತವಾಗಿ ಹಿಂದೂ ವಿರೋಧಿ ನಿರ್ಧಾರಗಳನ್ನು ತೆಗೆದುಕೊಂಡಿತು. ಈ ಕಾರಣದಿಂದಾಗಿ ಹಿಂದೂಗಳು ಕಾಂಗ್ರೆಸ್ ಅನ್ನು ಉರುಳಿಸಿದರು. ಆದರೂ ಕಾಂಗ್ರೆಸ್ ಮುಸಲ್ಮಾನರ ಓಲೈಕೆ ಮಾಡುತ್ತಾ ಹಿಂದೂಗಳನ್ನು ಭಯೋತ್ಪಾದಕರು ಎಂದು ನಿರ್ಧರಿಸುವ ಪ್ರಯತ್ನವನ್ನು ಕೈಬಿಡುತ್ತಿಲ್ಲ. ಆದ್ದರಿಂದ, ಕಾಂಗ್ರೆಸ್ ಪತನ ನಿಶ್ಚಿತವಾಗಿದೆ !

‘ಹಿಂದೂಗಳ ಮತ್ತು ಮುಸಲ್ಮಾನರ ಮತಗಳ ವಿಭಜನೆಯನ್ನು ವಿರೋಧಿಸುವೆ!'(ಅಂತೆ) – ಮಮತಾ ಬ್ಯಾನರ್ಜಿಯ ನುಡಿಮುತ್ತು

ಚುನಾವಣಾ ಆಯೋಗವು ನನಗೆ ೧೦ ನೋಟಿಸ್ ಕಳುಹಿಸಬಹುದು; ಆದರೆ ಉತ್ತರ ಒಂದೇ ಆಗಿರುತ್ತದೆ. ಹಿಂದೂ ಮತ್ತು ಮುಸಲ್ಮಾನರ ಮತಗಳ ವಿಭಜನೆಯ ವಿರುದ್ಧ ನಾನು ಯಾವಾಗಲೂ ಧ್ವನಿ ಎತ್ತಲಿದ್ದೇನೆ.