ಕದ್ದಿದ್ದ ದೇಗುಲದ ಘಂಟೆ ವಾಪಸ್ ಇಟ್ಟ ಕಳ್ಳರು

ದೇವಸ್ಥಾನದ ಸದಸ್ಯರು ಮಾಡಿದ ಸಾಮೂಹಿಕ ಪ್ರಾರ್ಥನೆಯ ಪರಿಣಾಮ

ಸಾಮೂಹಿಕ ಪ್ರಾರ್ಥನೆಯಲ್ಲಿ ಎಷ್ಟು ಶಕ್ತಿ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಬುದ್ಧಿಜೀವಿಗಳು, ನಾಸ್ತಕರು ಮತ್ತು ಪ್ರಗತಿ(ಆಧೋಗತಿ)ಪರರು ಇವರಿಗೆ ಪ್ರಾರ್ಥನೆಯ ಮಹತ್ವ ತಿಳಿಯುವುದೇ

ಸಾಂಧರ್ಭಿಕ ಚಿತ್ರ

ಶಿವಮೊಗ್ಗ : ಆನಂದಪುರ ಹೊಸಗುಂದದ ಶ್ರೀ ಕಂಚಿಕಾಳಮ್ಮ ದೇವಾಲಯದಲ್ಲಿ ಕಳವು ಮಾಡಿದ್ದ ಎರಡು ಘಂಟೆಗಳನ್ನು ಕಳ್ಳರು ೫೦೦ ರೂ. ತಪ್ಪೊಪ್ಪಿಗೆ ಕಾಣಿಕೆ ಸಹಿತ ಮಂಗಳವಾರ ವಾಪಸ್ ಇಟ್ಟು ಹೋಗಿದ್ದಾರೆ. ಮಾರ್ಚ್ ೨೪ ರಂದು ಸಂಜೆ ಅರ್ಚಕರು ದೇವಾಲಯದ ಪೂಜಿ ಮುಗಿಸಿ ಬೀಗ ಹಾಕಿ ಹೊರಡುವ ಸಮಯದಲ್ಲಿ ಪ್ರವೇಶದ್ವಾರದ ಬಳಿ ಇರುವ ದೊಡ್ಡ ೨ ಘಂಟೆಗಳನ್ನು ಬೈಕ್‌ನಲ್ಲಿ ಬಂದಿದ್ದ ಮೂವರು ಕದ್ದು ಪರಾರಿಯಾಗಿದ್ದರು. ದೇವಾಲಯ ಸಮಿತಿ ಸದಸ್ಯರೆಲ್ಲ ಸೇರಿ ವಿಶೇಷ ಪೂಜೆ ನಡೆಸಿ ಘಂಟೆ ವಾಪಸ್ ದೊರೆಯಲಿ. ಕಳ್ಳರಿಗೆ ತಕ್ಷ ಶಿಕ್ಷೆಯಾಗಲಿ’ ಎ೦ದು ಪ್ರಾರ್ಥಿಸಿದ್ದರು.