ಕಾಶಿ ವಿಶ್ವನಾಥ ದೇವಸ್ಥಾನ ಕಕ್ಷಿದಾರ ಹರಿಹರ ಪಾಂಡೆಯ ಇವರಿಗೆ ಮತಾಂಧರಿಂದ ಜೀವಬೆದರಿಕೆ !

ದೇವಾಲಯವನ್ನು ಅತಿಕ್ರಮಿಸಿದ ನಂತರವೂ ಮತಾಂಧರು ಹಿಂದೂಗಳನ್ನು ಬೆದರಿಸುತ್ತಾರೆ, ಇದರಿಂದ ಅವರ ಉದ್ಧಟತನ ಕಂಡು ಬರುತ್ತದೆ !

ವಾರಣಾಸಿ (ಉತ್ತರಪ್ರದೇಶ) – ಇಲ್ಲಿನ ಕಾಶಿ ವಿಶ್ವನಾಥ ದೇವಾಲಯದ ಮುಂಭಾಗದಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆ ಮತ್ತು ಉತ್ಖನನ ಮಾಡಲು ನ್ಯಾಯಾಲಯ ಆದೇಶಿಸಿದ ನಂತರ ದೇವಾಲಯದ ಕಕ್ಷಿದಾರ ಹರಿಹರ ಪಾಂಡ್ಯೆಯ ಇವರಿಗೆ ಯಾಸೀನ್ ಎಂಬ ಮತಾಂಧನು ಜೀವಬೆದರಿಕೆಯೊಡ್ಡಿದ್ದಾನೆ. ಯಾಸೀನ ಬೆದರಿಕೆಯೊಡ್ಡುತ್ತಾ ‘ಪಾಂಡೆಯಜೀ ನೀವು ಪ್ರಕರಣದಲ್ಲಿ ಗೆದ್ದರೂ, ಪುರಾತತ್ವ ಇಲಾಖೆಯು ಉತ್ಖನನಕ್ಕೆ ಆದೇಶಿಸಿದ ಪ್ರದೇಶವನ್ನು ಪ್ರವೇಶಿಸಲು ಸಾಧ್ಯವಿಲ್ಲ. ನೀವು ಮತ್ತು ನಿಮ್ಮ ಸಹಚರರನ್ನು ಕೊಲ್ಲಲಾಗುವುದು’ ಎಂದು ದೂರವಾಣಿಯಲ್ಲಿ ಬೆದರಿಕೆಯೊಡ್ಡಿದ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ನಂತರ ಪಾಂಡೆಯ ಇವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಪೊಲೀಸರು ಬೆದರಿಕೆ ಹಾಕುವವರನ್ನು ಪತ್ತೆ ಹಚ್ಚುತ್ತಿದ್ದಾರೆ.