ಮೈಸೂರಿನಲ್ಲಿ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದುದರಿಂದ ಗೀತೆಯ ೩ ಸಾವಿರ ಪ್ರತಿಗಳು ಸುಟ್ಟುಕರಕಲು


ಮೈಸೂರು – ದುಷ್ಕರ್ಮಿಗಳು ಗ್ರಂಥಾಲಯಕ್ಕೆ ಹಚ್ಚಿದ್ದ ಬೆಂಕಿಯಲ್ಲಿ ಭಗವದ್ಗೀತೆಯ ೩ ಸಾವಿರ ಪ್ರತಿಗಳು ಮತ್ತು ಕುರಾನ್ ಮತ್ತು ಬೈಬಲ್‍ನ ೧ ಸಾವಿರ ಪ್ರತಿಗಳು ನಾಶವಾದವು. ಈ ಗ್ರಂಥಾಲಯವು ಸೈಯದ್ ಇಸಾಕ್ ಎಂಬ ವ್ಯಕ್ತಿಗೆ ಸೇರಿದೆ. ಇಲ್ಲಿ ಒಟ್ಟು ೧೧ ಸಾವಿರ ಪುಸ್ತಕಗಳು ಇದ್ದವು. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇಸಾಕ್ ಒಬ್ಬ ಕಾರ್ಮಿಕನಾಗಿದ್ದು ಕಡಿಮೆ ಶಿಕ್ಷಣ ಪಡೆದವನಾಗಿದ್ದರು. ಆದರೆ ಜನರಿಗೆ ಜ್ಞಾನ ಸಿಗಲಿ ಎಂದು ಅವರು ಈ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸಿದ್ದರು. ಇಲ್ಲಿಗೆ ಪ್ರತಿದಿನ ೧೦೦ ರಿಂದ ೧೫೦ ಜನರು ಬರುತ್ತಿದ್ದರು. ಈ ಗ್ರಂಥಾಲಯಕ್ಕಾಗಿ ಅವರು ತಿಂಗಳಿಗೆ ೬ ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದರು.