ಅನಾಥಾಶ್ರಮದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮತಾಂಧನ ಬಂಧನ

ಇಂತಹ ವಾಸನಾಂಧನನ್ನು ಶರಿಯತ್ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸುವಂತೆ ಯಾರಾದರು ಬೇಡಿಕೆ ಸಲ್ಲಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ!

ಉಸ್ತಾದ್ ಅಯೂಬ್ ಕೊಣಾಜೆ

ಮಂಗಳೂರು – ಮಂಗಳೂರಿನ ನೂರಾನಿಯಾ ಯತಿಮಖಾನಾ ದಾರುಲ್ ಮಸ್ಕಿನ್‍ನ ಅನಾಥಾಶ್ರಮದಲ್ಲಿ ಅಸಹಾಯಕ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಉಸ್ತಾದ್ ಅಯೂಬ್ ಕೊಣಾಜೆ (ವಯಸ್ಸು ೫೨) ಇವನನ್ನು ಬಂಧಿಸಲಾಗಿದೆ.

ಆತ ೧-೨ ತಿಂಗಳುಗಳಿಂದ ಅನಾಥಾಶ್ರಮದಲ್ಲಿ ಮಕ್ಕಳ ಮೇಲೆ ಲೈಂಗಿಕ ಅತ್ಯಚಾರ ನಡೆಸುತ್ತಿದ್ದನು. ಇಲ್ಲಿಯ ಅನಾಥ ಮಕ್ಕಳು ಮದರಸಾ ಮತ್ತು ಸ್ಥಳೀಯ ಶಾಲೆಗಳಿಗೆ ಕಲಿಯಲು ಹೋಗುತ್ತಾರೆ. ಆರೋಪಿಯು ಅಂತಹವರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದ್ದನು. ಪ್ರಸ್ತುತ ೪ ಮಕ್ಕಳು ಲೈಂಗಿಕ ಅತ್ಯಾಚಾರದ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.