ಚುನಾವಣೆಯ ಸಮಯದಲ್ಲಿ ಕೊರೋನಾ ಎಲ್ಲಿಗೆ ಹೋಗುತ್ತದೆ ? ಅದು ಕುಂಭಮೇಳಕ್ಕೆ ಮಾತ್ರ ಬರುತ್ತದೆಯೇ ? – ಶ್ರೀ ಪರಮೇಶ್ವರವದಾಸ ಮಹಾರಾಜರು, ಸಿದ್ಧಪೀಠ ಶಿವ ಸಾಯಿ ಶನಿಧಾಮ ಆಶ್ರಮ, ನೋಯ್ಡಾ

ಕೊರೋನಾ ಸಾಂಕ್ರಾಮಿಕ ರೋಗದ ಕಾರಣವನ್ನು ಮುಂದಿಟ್ಟು ಸರಕಾರವು ಕುಂಭಮೇಳದಲ್ಲಿ ಅನೇಕ ಸಮಸ್ಯೆಗಳನ್ನು ತಂದಿತು. ಆರಂಭದಲ್ಲಿ ಕುಂಭಮೇಳವೇ ಆಗದಂತೆ ತಡೆಯುವ ಪ್ರಯತ್ನಗಳಾದವು. ಸಾಧು-ಮಹಂತರು ಸಂಘಟಿತವಾಗಿ ವಿರೋಧಿಸಿದ ನಂತರ ಕುಂಭಮೇಳಕ್ಕೆ ಅವಕಾಶ ನೀಡಲಾಯಿತು.

ಭಯೋತ್ಪಾದನೆಯನ್ನು ತಡೆಗಟ್ಟಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿ ! – ಕೇರಳ ಶಾಸಕ ಪಿ.ಸಿ. ಜಾರ್ಜ್

೨೦೩೦ ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಕೇರಳದ ಆಡಳಿತಾರೂಢ ಡೆಮೊಕ್ರೆಟಿಕ ಫ್ರಂಟ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ವಿರೋಧಿ ಪಕ್ಷಗಳ ಸಂಯುಕ್ತ ಗುಂಪು) ಭಯೋತ್ಪಾದಕರೊಂದಿಗೆ ಕೆಲಸ ಮಾಡುತ್ತಿವೆ.

ನನ್ನ ಮತಕ್ಷೇತ್ರದ ೪೭ ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗಿದ್ದಾರೆ ! – ಶಾಸಕ ಪಿ.ಸಿ. ಜಾರ್ಜ್

ನನ್ನ ಮತಕ್ಷೇತ್ರದ ೪೭ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ೧೨ ಹಿಂದೂಗಳು ಮತ್ತು ೩೫ ಕ್ರೈಸ್ತರಿದ್ದಾರೆ. ಅವರನ್ನು ಇಸ್ಲಾಂನಲ್ಲಿ ಮತಾಂತರಿಸಲಾಗಿದೆಯೇ ಅಥವಾ ಎಲ್ಲಿ ಕರೆದುಕೊಂಡು ಹೋಗಲಾಗಿದೆ ಎಂಬುದು ಮಾತ್ರ ನನಗೆ ಗೊತ್ತಿಲ್ಲ.

ಶ್ರೀರಾಮನವಮಿ ದಿನದಂದು ಮನೆಯಲ್ಲಿಯೇ ಇದ್ದು ಪೂಜೆ-ಅರ್ಚನೆ ಮಾಡಿ ! – ಕೊರೋನಾದ ಹಿನ್ನೆಲೆಯಲ್ಲಿ ಅಯೋಧ್ಯೆಯ ಸಾಧು-ಸಂತರಿಂದ ಮನವಿ

ಹೆಚ್ಚುತ್ತಿರುವ ಕೊರೋನಾದ ಸೋಂಕಿನ ಹಿನ್ನೆಲೆಯಲ್ಲಿ, ಇಲ್ಲಿಯ ಸಾಧು ಹಾಗೂ ಸಂತರು ಶ್ರೀರಾಮನವಮಿ ದಿನದಂದು ಅಯೋಧ್ಯೆಗೆ ಬರುವ ಬದಲು ಮನೆಯಲ್ಲಿಯೇ ಇದ್ದು ಪೂಜೆ ಮತ್ತು ಅರ್ಚನೆ ಮಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ.

ಕುಂಭಮೇಳ ಸಾಂಕೇತಿಕವಾಗಿರಲಿ !

ಹರಿದ್ವಾರದ ಮಹಾಕುಂಭ ಮೇಳದಲ್ಲಿ ಹೆಚ್ಚುತ್ತಿರುವ ಕೊರೋನದ ಸಾಂಕ್ರಾಮಿಕವನ್ನು ನೋಡುತ್ತಾ ಕುಂಭಮೇಳವನ್ನು ಸಾಂಕೇತಿಕವಾಗಿರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಅವರು ಈ ಬಗ್ಗೆ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿಯವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು. ಈ ವಿಷಯದ ಮಾಹಿತಿಯನ್ನು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೋನಾ ಪೀಡಿತ ಮೃತದೇಹಗಳ ಅಂತ್ಯಕ್ರಿಯೆಗೆ ೩೫ ಸಾವಿರದಿಂದ ೪೦ ಸಾವಿರ ಹಣವನ್ನು ಅಕ್ರಮವಾಗಿ ತೆಗೆದುಕೊಳ್ಳಲಾಗುತ್ತಿದೆ !

ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕೊರೋನಾ ಪೀಡಿತ ರೋಗಿಗಳ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತಿಲ್ಲ, ಬದಲಾಗಿ ಆಂಬ್ಯುಲೆನ್ಸ್‌ನಿಂದ ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಪಿಸಿದ ವಿದ್ಯುತ್ ಶವಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಕುಂಭಮೇಳ ಏಪ್ರಿಲ್ ೧೭ ರಂದು ಕೊನೆಗೊಳ್ಳಲಿದೆ !

ಹೆಚ್ಚಾಗುತ್ತಿರುವ ಕೊರೋನಾದ ಸೋಂಕಿನ ಕಾರಣವನ್ನು ನೀಡುತ್ತಾ ಕುಂಭ ಮೇಳದಲ್ಲಿ ಭಾಗವಹಿಸಿದ ನಿರಂಜನಿ ಅಖಾಡದ ಸಚಿವ ಮಹಂತ ರವೀಂದ್ರ ಪುರಿ ಅವರು ಕುಂಭಮೇಳದ ಮುಕ್ತಾಯವನ್ನು ಘೋಷಿಸಿದ್ದಾರೆ. ಕುಂಭಮೇಳವು ಏಪ್ರಿಲ್ ೧೭ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿದರು.

ಪಾಟಲೀಪುತ್ರ (ಬಿಹಾರ) ದ ದೊಡ್ಡ ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಮ್ಲಜನಕದ ಬದಲು ಬಿಸ್ಲೇರಿ ನೀರನ್ನು ನೀಡಲಾಗುತ್ತಿದೆ !

ನಗರದ ಎರಡನೇ ಅತಿದೊಡ್ಡ ಆಸ್ಪತ್ರೆಯಾದ ಎನ್.ಎಂ.ಸಿ.ಎಚ್.ನಲ್ಲಿ ಅನೇಕ ಕೊರೋನಾ ರೋಗಿಗಳು ಸಾಯುತ್ತಿದ್ದಾರೆ. ಆಸ್ಪತ್ರೆಯ ಹೊರಗೆ ಆಂಬುಲೆನ್ಸ್‍ಗಳು ಸಾಲುಗಟ್ಟಿ ನಿಂತಿವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಇದ್ದುದರಿಂದ ಅನೇಕ ರೋಗಿಗಳು ಆಂಬ್ಯುಲೆನ್ಸ್‍ಗಳಲ್ಲಿಯೇ ಸಾಯುತ್ತಿದ್ದಾರೆ.

ಕೊರೋನಾವನ್ನು ತಡೆಯಲು ಮಠಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗ್ನಿಹೋತ್ರವನ್ನು ಮಾಡಲು ಆದೇಶ ನೀಡುವೆವು! – ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಘೋಷಣೆ

ಅನೇಕ ಮಠಗಳಲ್ಲಿ ಮತ್ತು ದೇವಾಲಯಗಳಲ್ಲಿ ಅಗ್ನಿಹೋತ್ರವನ್ನು ನಡೆಸಲಾಗುತ್ತಿದೆ. ಸರಕಾರವು ಸರಕಾರಿ ಮಟ್ಟದಲ್ಲಿ ನಾಗರಿಕರಿಗೆ ಹಾಗೂ ಎಲ್ಲಿ ಸಾಧ್ಯವೋ ಅಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿಹೋತ್ರ ಮಾಡುವಂತೆ ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಕೊರೋನಾದಿಂದ ಸಾವನ್ನಪ್ಪಿದ ಲಕ್ಷ್ಮಣಪುರಿಯ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಪತ್ನಿ

ಬಿಜೆಪಿಯ ಆಡಳಿತದಲ್ಲಿರುವ ರಾಜ್ಯದಲ್ಲಿ ಇಂತಹ ಘಟನೆ ಸಂಭವಿಸುವುದು ರಾಷ್ಟ್ರಪ್ರೇಮಿಗಳಿಗೆ ಅಪೇಕ್ಷಿತವಿಲ್ಲ. ಇಂತಹ ಘಟನೆಗಳನ್ನು ತಡೆಗಟ್ಟಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು !