ಬಡ್ಡಿಯನ್ನು ‘ಹರಾಮ್’ ಎಂದು ಕರೆದು ೩,೦೦೦ ಕೋಟಿ ಲಪಟಾಯಿಸಿದ ನೌಹೇರಾ ಶೇಖ್ ಬಂಧನ !

ಅಪರಾಧದಲ್ಲಿ ಮುಸಲ್ಮಾನ ಮಹಿಳೆಯರೂ ಮುಂದಿರುತ್ತಾರೆ, ಎಂಬುದಕ್ಕೆ ಇದೊಂದು ಉದಾಹರಣೆ !

ಪಂಚಕುಲ (ಹರಿಯಾಣ) ದಲ್ಲಿ ಮಂಜುಗಡ್ಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಅದರ ಮಾರಾಟ!

ಇಲ್ಲಿ ಮೋಲು ಖಾನ್ ಎಂಬ ವ್ಯಕ್ತಿಯು ಮಂಜುಗಡ್ಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಅದನ್ನು ಮಾರಾಟ ಮಾಡುತ್ತಿದ್ದನು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಹಿಂದೂ ಸಂಘಟನೆಗಳ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಂಜುಗಡ್ಡೆಯ ಮಾದರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗೇಮಿಂಗ್ ಆಪ್ ಮೂಲಕ ‘ಲವ್ ಜಿಹಾದ್’!

ಜಮೀರ್ ಕಾಜಿ ಹಿಂದೂ ಬಾಲಕಿಯನ್ನು ಮರುಳು ಮಾಡಲು ‘ಬಾದ್‌ಶಾ’ ಎಂಬ ಹೆಸರಿನ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿದ್ದನು. ಆತ ಬಾಲಕಿಯನ್ನು ಪುಸಲಾಯಿಸಿ ಅಕೋಲಾಗೆ ಕರೆತಂದು 5 ದಿನಗಳ ಕಾಲ ತನ್ನ ಮನೆಯಲ್ಲಿ ಬಂಧಿಸಿಟ್ಟಿದ್ದನು.

ಸಂತಶ್ರೀ ಪ.ಪೂ. ಆಸಾರಾಮ್ ಬಾಪು ಅವರ ಪ್ರಕರಣದ ಪ್ರಮುಖ ಸಾಕ್ಷಿದಾರ ಮಹೇಂದ್ರ ಚಾವ್ಲಾ ವಂಚನೆಯ ಆರೋಪದಡಿ ಬಂಧನ

ಸಂತಶ್ರೀ ಪ.ಪೂ. ಆಸಾರಾಮ್ ಬಾಪು ಅವರ ಪ್ರಕರಣದ ಮುಖ್ಯ ಸಾಕ್ಷಿದಾರ ಮಹೇಂದ್ರ ಚಾವ್ಲಾನನ್ನು ವಂಚನೆಯ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಅವನ ಸಹೋದರ ಮತ್ತು ಸೋದರಳಿಯನನ್ನೂ ಬಂಧಿಸಲಾಗಿದೆ.

ಸೇನಾಪಡೆಯಲ್ಲಿ ಮೇಜರ್ ಎಂದು ಹೇಳಿಕೊಂಡು ಹಿಂದೂ ಯುವತಿಯರನ್ನು ವಂಚಿಸುತ್ತಿದ್ದ ಜಿಹಾದಿ ಬಂಧನ!

ಧರ್ಮವನ್ನು ಮರೆಮಾಚಿ, ಮದುವೆಯ ಆಮಿಷವೊಡ್ಡಿ ಹಿಂದೂ ಯುವತಿಯರಿಂದ ಹಣ ಲೂಟಿ ಮಾಡಿದ ಆರೋಪ ಆತನ ಮೇಲಿದೆ. ಪ್ರಸ್ತುತ ಹಿಸಾರಿನ ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಅಪರಾಧದಲ್ಲಿ ಆತನೊಂದಿಗೆ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ.

ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಂದ ಉತ್ತರ ಕೇಳಿದ ಸುಪ್ರೀಂ ಕೋರ್ಟ್! Haryana Minor Rape Case

ಹರಿಯಾಣದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿ, ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ಹಾಜರಾಗುವಂತೆ ಆದೇಶಿಸಿದೆ.

ಫರೀದಾಬಾದ (ಹರಿಯಾಣ) ಇಲ್ಲಿ ಪಾಕಿಸ್ತಾನದ ಗೂಢಚಾರನ ಬಂಧನ

ದೇಶದಲ್ಲಿ ನಿರಂತರವಾಗಿ ಭಯೋತ್ಪಾದಕರು, ಅವರ ಸಹಚರರು ಮತ್ತು ಗೂಢಚಾರರನ್ನು ಬಂಧಿಸಲಾಗುತ್ತಿದೆ. ಇದರಿಂದ ದೇಶದ್ರೋಹಿ ಶಕ್ತಿಗಳು ದೇಶವನ್ನು ಎಷ್ಟು ಪ್ರಮಾಣದಲ್ಲಿ ಆವರಿಸಿಕೊಂಡಿವೆ ಎಂಬುದು ತಿಳಿಯುತ್ತದೆ! ಸರಕಾರವು ಇಂತವರಿಗೆ ತಕ್ಷಣವೇ ಗಲ್ಲು ಶಿಕ್ಷೆ ವಿಧಿಸಿದರೆ ಮಾತ್ರ ಇಂತಹ ಪ್ರಕರಣಗಳು ನಿಲ್ಲಲು ಸಾಧ್ಯ!

ಪಾಕಿಸ್ತಾನದಿಂದ ಬಂದ ಆರ್‌ಡಿಎಕ್ಸ್ ; ಹರಿಯಾಣದಲ್ಲಿ ಜಪ್ತಿ!

ಬಂಧಿತರಾದ ಅಜ್ಮೀರ್‌ನ ಅಲಿ ಅಕ್ಬರ್, ಮೀರತ್‌ನ ಅನಸ್ ಮತ್ತು ಅಂಬಾಲಾದ ಜಂಗ್‌ವೀರ್ ವಿಚಾರಣೆಯ ವೇಳೆ ಮಾಹಿತಿ ನೀಡಿದ್ದು, ಮೊದಲ ಸ್ಫೋಟವನ್ನು ರಾಜಸ್ಥಾನದ ಹನುಮಾನ್‌ಗಢದಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ಆರ್‌ಡಿಎಕ್ಸ್ ತಲುಪಲು ವಿಳಂಬವಾದ ಕಾರಣ ಯೋಜನೆಯನ್ನು ಮುಂದೂಡಲಾಗಿತ್ತು.

ಅಂಬಾಲಾ(ಹರಿಯಾಣ): ಎರಡು ಕೆಜಿ ಆರ್‌ಡಿಎಕ್ಸ್ ವಶ

ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ಈ ಪ್ರಕರಣದ ತನಿಖೆ ನಡೆಸುತ್ತಿವೆ. ಆರೋಪಿಗಳ ಮೊಬೈಲ್ ಫೋನ್, ಸಂಪರ್ಕಗಳು ಮತ್ತು ಹಳೆಯ ಇತಿಹಾಸವನ್ನು ಸಹ ಪರಿಶೀಲಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಇನ್ನು ಹಲವು ಪ್ರಮುಖ ವಿಷಯಗಳು ಬಯಲಾಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

Mob Attacks Nuh Police : ನೂಹ್ (ಹರಿಯಾಣ): ಕಳ್ಳ ರಾಹುಲ್ ಖಾನ್‌ನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಪೊಲೀಸರ ಮೇಲೆ ಮುಸ್ಲಿಂ ಗುಂಪಿನಿಂದ ದಾಳಿ

ಹಲವು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಪೊಲೀಸರು ಮುಸ್ಲಿಂ ಆರೋಪಿಯನ್ನು ಬಂಧಿಸಲು ಹೋದಾಗ, ಪೊಲೀಸರ ಮೇಲೆ ದಾಳಿ ನಡೆಸುವ ಘಟನೆಗಳು ಪದೇ-ಪದೇ ನಡೆಯುತ್ತಿವೆ.