
ಪಾಣಿಪತ್ (ಹರಿಯಾಣ) – ಸಂತಶ್ರೀ ಪ.ಪೂ. ಆಸಾರಾಮ್ ಬಾಪು ಅವರ ಪ್ರಕರಣದ ಮುಖ್ಯ ಸಾಕ್ಷಿದಾರ ಮಹೇಂದ್ರ ಚಾವ್ಲಾನನ್ನು ವಂಚನೆಯ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಅವನ ಸಹೋದರ ಮತ್ತು ಸೋದರಳಿಯನನ್ನೂ ಬಂಧಿಸಲಾಗಿದೆ. ಮಹೇಂದ್ರ ಚಾವ್ಲಾ ಸರಪಂಚನೊಬ್ಬನನ್ನು ಬ್ಲ್ಯಾಕ್‌ಮೇಲ್ ಮಾಡಿ ೭೦ ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದನು ಮತ್ತು ಆನಂತರ ಮತ್ತೆ ೮೦ ಲಕ್ಷ ರೂಪಾಯಿಗಳಿಗೆ ಬೇಡಿಕೆಯಿಡುತ್ತಿದ್ದನು. ದೂರು ಸಿಕ್ಕ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ೨೦೧೩ ರಲ್ಲಿ ಪೂ. ಬಾಪು ಅವರ ಮೇಲೆ ಅಪ್ರಾಪ್ತ ಬಾಲಕಿಯ ಲೈಂಗಿಕ ಶೋಷಣೆಯ ಆರೋಪಗಳು ಬಂದಾಗ, ಈ ಪ್ರಕರಣದಲ್ಲಿ ಮಹೇಂದ್ರ ಚಾವ್ಲಾ ಅವರ ವಿರುದ್ಧ ಸಾಕ್ಷಿ ನೀಡಿದ್ದನು. ಅವನು ಕರ್ಣಾವತಿ ಮತ್ತು ಸೂರತ್‌ನಲ್ಲಿರುವ ಪೂ. ಬಾಪು ಅವರ ಆಶ್ರಮದಲ್ಲಿ ಕೆಲವು ವರ್ಷಗಳ ಕಾಲ ವಾಸವಾಗಿದ್ದನು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram