ಹರಿಯಾಣದಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ

ಕೈಥಲ (ಹರಿಯಾಣಾ) – ತಾನು ಸೇನಾಪಡೆಯಲ್ಲಿ ಮೇಜರ್ ಎಂದು ಸುಳ್ಳು ಹೇಳಿ ಹಿಂದೂ ಯುವತಿಯರನ್ನು ಮದುವೆಯ ಜಾಲದಲ್ಲಿ ಸಿಲುಕಿಸಿ ವಂಚಿಸುತ್ತಿದ್ದ ಜಿಹಾದಿಯೊಬ್ಬನನ್ನು ಕೈಥಲ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಅನುಸಾರ, ಆರೋಪಿ ಮುಸ್ಲಿಂ ಯುವಕನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಯಾಗಿದ್ದಾನೆ. ಆತನಿಂದ ಸೇನಾ ಪಡೆಯ ಸಮವಸ್ತ್ರವನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಯುವಕನು ಆನ್‌ಲೈನ್ ವಿವಾಹ ವೆದಿಕೆಯ (ಮ್ಯಾಟ್ರಿಮೋನಿ) ವೆಬ್‌ಸೈಟ್‌ನಲ್ಲಿ ತನ್ನನ್ನು ಸೇನಾ ಪಡೆಯ ಮೇಜರ್ ‘ನಿಶಾಂತ್ ಸಹಾರನ’ ಎಂದು ಪರಿಚಯಿಸಿಕೊಂಡು ಹಿಂದೂ ಯುವತಿಯರನ್ನು ವಂಚಿಸುತ್ತಿದ್ದನು. ಇಂತಹದ್ದೇ ಒಂದು ವಂಚನೆಯ ಪ್ರಕರಣದಲ್ಲಿ ಆತನು ಹಿಸಾರಿನ ಹಿಂದೂ ಯುವತಿಯೊಬ್ಬಳನ್ನು ಭೇಟಿಯಾಗಲು ಹೋಗುತ್ತಿದ್ದಾಗ ಕೈಥಲನ ಪೊಲೀಸರು ಆತನ ಟ್ಯಾಕ್ಸಿಯನ್ನು ತಡೆದು ವಿಚಾರಣೆ ನಡೆಸಿದ್ದಾರೆ. ‘ಆರೋಪಿ ಯುವಕ ತಾನು ಮೇಜರ್ ಎಂದು ಸುಳ್ಳು ಹೇಳುತ್ತಿದ್ದಾನೆ’ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ. ವಿಚಾರಣೆಯ ವೇಳೆ ಆರೋಪಿ ಯುವಕ ನಿಶಾಂತ್ ಸಹಾರನ ಅಲ್ಲ, ಆತನ ನಿಜವಾದ ಹೆಸರು ‘ಮೆಹರಾಜುದ್ದೀನ ಆಝಮ’ ಎಂಬುದು ಬಹಿರಂಗವಾಗಿದೆ. ಹಿಸಾರಿನ ಹಿಂದೂ ಯುವತಿಯನ್ನು ಮದುವೆಯ ಜಾಲದಲ್ಲಿ ಸಿಲುಕಿಸುವ ಆತನ ಸಂಚು ಪೊಲೀಸರಿಗೆ ಅರಿವಾಗಿದೆ. ಈ ಪ್ರಕರಣ ಹಿಸಾರಿಗೆ ಸಂಬಂಧಿಸಿದ್ದಾದ್ದರಿಂದ ಕೈಥಲನ ಪೊಲೀಸರು ಆರೋಪಿಯನ್ನು ಅಲ್ಲಿನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
೧. ಹಿಸಾರಿನ ಪೊಲೀಸರು ಆರೋಪಿಯನ್ನು ವಿಚಾರಿಸಿದಾಗ ಅನೇಕ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಇದುವರೆಗೆ ಆತ ೧೦ ಕ್ಕೂ ಹೆಚ್ಚು ಹಿಂದೂ ಯುವತಿಯರಿಗೆ ತಾನು ಮೇಜರ್ ಎಂದು ಸುಳ್ಳು ಹೇಳಿ ವಂಚಿಸಿರುವುದು ಬಹಿರಂಗವಾಗಿದೆ. ಹಿಸಾರಿನ ಓರ್ವ ಹಿಂದೂ ಯುವತಿಯಿಂದ ಆತ ೩೦ ಸಾವಿರ ರೂಪಾಯಿಗಳನ್ನೂ ದೋಚಿದ್ದನು.
೨. ಮೆಹರಾಜುದ್ದೀನ ಆಝಮನು ನಕಲಿ ಮೇಜರ್ ಆಗಿ ‘ನಿಶಾಂತ್ ಸಹಾರನ’ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡಿದ್ದನು. ಆರೋಪಿ ಮೆಹರಾಜುದ್ದೀನ ಆಝಮನ ವಿರುದ್ಧ ಹಿಸಾರಿನ ಆಜಾದನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
೩. ಹಿಸಾರಿನ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಮೆಹರಾಜುದ್ದೀನನು, ತಾನು ‘ಶಾದಿ ಡಾಟ್ ಕಾಮ್’ (Shaadi.com) ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿರುವುದಾಗಿ ಹೇಳಿದ್ದಾನೆ. ಅದರಲ್ಲಿ ಆತ ತನ್ನ ಹೆಸರನ್ನು ನಿಶಾಂತ ಸಹಾರನ ಮತ್ತು ವೃತ್ತಿಯನ್ನು ‘ಆರ್ಮಿ ಮೇಜರ್’ ಎಂದು ನಮೂದಿಸಿದ್ದನು. ತನಗೆ ೧೨೦ ಎಕರೆ ಜಮೀನಿದೆ ಎಂದು ಹೇಳಿಕೊಂಡಿದ್ದನು. ಸೇನಾ ಸಮವಸ್ತ್ರದಲ್ಲಿದ್ದ ಕೆಲವು ಭಾವಚಿತ್ರಗಳನ್ನೂ ಆತ ಈ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದನು.
೪. ಧರ್ಮವನ್ನು ಮರೆಮಾಚಿ, ಮದುವೆಯ ಆಮಿಷವೊಡ್ಡಿ ಹಿಂದೂ ಯುವತಿಯರಿಂದ ಹಣ ಲೂಟಿ ಮಾಡಿದ ಆರೋಪ ಆತನ ಮೇಲಿದೆ. ಪ್ರಸ್ತುತ ಹಿಸಾರಿನ ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಅಪರಾಧದಲ್ಲಿ ಆತನೊಂದಿಗೆ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !