11 ವರ್ಷದ ಹಿಂದೂ ಬಾಲಕಿಯನ್ನು ತನ್ನ ಬಲೆಗೆ ಬೀಳಿಸಿದ ವಿವಾಹಿತ ಜಮೀರ್ ಕಾಜಿ!
(ಗೇಮಿಂಗ್ ಆಪ್ ಎಂದರೆ ಆನ್‌ಲೈನ್ ಆಟಗಳನ್ನು ಆಡುವ ಅಪ್ಲಿಕೇಶನ್)

ಹರಿಯಾಣ – ‘ಗೇಮಿಂಗ್ ಆಪ್’ ಮೂಲಕ ಹರಿಯಾಣದ 11 ವರ್ಷದ ಹಿಂದೂ ಬಾಲಕಿಯನ್ನು ಬಲೆಗೆ ಬೀಳಿಸಿ, ಆಕೆಯನ್ನು 5 ದಿನಗಳ ಕಾಲ ತನ್ನ ಮನೆಯಲ್ಲಿ ಕೂಡಿಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀರ್ ಕಾಜಿ ಎಂಬ ಮುಸ್ಲಿಂ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಆಜ್ ತಕ್’ ವರದಿಯ ಪ್ರಕಾರ, ಜಮೀರ್ ವಿವಾಹಿತನಾಗಿದ್ದು, ಆತನಿಗೆ ಒಬ್ಬ ಮಗ ಕೂಡ ಇದ್ದಾನೆ.
‘Love Jihad’ through a gaming app
Zameer Qazi, a father of one child, lured an 11-year-old Hindu girl from Haryana into his trap
Such incidents will continue unless strict punishment is enforced.
Take strict action against the accused! – Demand from citizens#Save_Hindu_Girls… pic.twitter.com/b45juMJnlP
— Sanatan Prabhat (@SanatanPrabhat) April 30, 2026
ಜಮೀರ್ ಕಾಜಿ ಹಿಂದೂ ಬಾಲಕಿಯನ್ನು ಮರುಳು ಮಾಡಲು ‘ಬಾದ್‌ಶಾ’ ಎಂಬ ಹೆಸರಿನ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿದ್ದನು. ಆತ ಬಾಲಕಿಯನ್ನು ಪುಸಲಾಯಿಸಿ ಅಕೋಲಾಗೆ ಕರೆತಂದು 5 ದಿನಗಳ ಕಾಲ ತನ್ನ ಮನೆಯಲ್ಲಿ ಬಂಧಿಸಿಟ್ಟಿದ್ದನು. ಬಾಲಕಿ ನಾಪತ್ತೆಯಾದ ವಿಷಯ ತಿಳಿದ ನಂತರ ಆಕೆಯ ಕುಟುಂಬದವರು ಹರಿಯಾಣ ಪೊಲೀಸರಿಗೆ ದೂರು ನೀಡಿದ್ದರು. ತದನಂತರ ಬಾಲಕಿಯ ಸಹೋದರ ಆಕೆಯನ್ನು ಹುಡುಕುತ್ತಾ ಹೋಗಿ ಆಕೆ ಅಕೋಲಾದಲ್ಲಿದ್ದಾಳೆ ಎಂದು ಪತ್ತೆಹಚ್ಚಿದನು ಮತ್ತು ಪೊಲೀಸರ ಸಹಾಯದಿಂದ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾದನು. ಪೊಲೀಸರು ಆರೋಪಿ ಜಮೀರ್ ಕಾಜಿಯನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯನ್ನು ಸದ್ಯ ಸರಕಾರಿ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಪೊಲೀಸರು ಈ ಪ್ರಕರಣವನ್ನು ‘ಲವ್ ಜಿಹಾದ್’ ಮತ್ತು ವಂಚನೆ ಸೇರಿದಂತೆ ಎಲ್ಲಾ ಸಂಭಾವ್ಯ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ! – ಸಾರ್ವಜನಿಕರ ಆಗ್ರಹ
ಈ ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ಸಂಘಟನೆಗಳು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. (ಇಂತಹ ಬೇಡಿಕೆಯನ್ನು ಯಾಕೆ ಮಾಡಬೇಕಾಗುತ್ತದೆ? ಪೊಲೀಸರು ಸ್ವಯಂಪ್ರೇರಿತರಾಗಿ ಕ್ರಮ ಕೈಗೊಳ್ಳುವುದಿಲ್ಲವೇ? – ಸಂಪಾದಕರು). ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಯು ತನ್ನ ನಿಜವಾದ ಗುರುತನ್ನು ಮರೆಮಾಚಲು ಮತ್ತು ಅಪ್ರಾಪ್ತ ಬಾಲಕಿಯರನ್ನು ಗುರಿಯಾಗಿಸಲು ‘ಗೇಮಿಂಗ್ ಆಪ್‌ಗಳನ್ನು’ ಬಳಸುತ್ತಿದ್ದನು.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!