ಅಲಿ ಅಕ್ಬರ್, ಅಲಿ ಮತ್ತು ಜಂಗ್ಬೀರ್ ಎಂಬ ಮೂವರ ಬಂಧನ
(ಆರ್‌ಡಿಎಕ್ಸ್ ಎಂದರೆ ‘ರಾಯಲ್ ಡಿಮೋಲಿಷನ್ ಎಕ್ಸ್‌ಪ್ಲೋಸಿವ್’)

ಚಂಡೀಗಢ – ಹರಿಯಾಣದ ಅಂಬಾಲಾದಲ್ಲಿ ವಿಶೇಷ ಕಾರ್ಯಪಡೆ (STF) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಶಂಕಿತ ಯುವಕರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ಎರಡು ಕೆಜಿ ಶಂಕಿತ ಸ್ಫೋಟಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಆರ್‌ಡಿಎಕ್ಸ್ (RDX) ಇರಬಹುದೆಂದು ಶಂಕಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸ್ ಮತ್ತು ಗುಪ್ತಚರ ಇಲಾಖೆಗಳು ತನಿಖೆಯನ್ನು ಚುರುಕುಗೊಳಿಸಿವೆ.
ಈ ಪ್ರಕರಣದಲ್ಲಿ ಅಲಿ ಅಕ್ಬರ್, ಅಲಿ ಮತ್ತು ಜಂಗ್ಬೀರ್ ಎಂಬುವವರನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬ ರಾಜಸ್ಥಾನದ ಅಜ್ಮೀರ್‌ನವನು, ಎರಡನೆಯವನು ಉತ್ತರ ಪ್ರದೇಶದ ಮೀರತ್‌ನವನು ಮತ್ತು ಮೂರನೆಯವನು ಹರಿಯಾಣದ ಕಬಾನಾಸಾ ಗ್ರಾಮದವನಾಗಿದ್ದಾನೆ. ಈ ಮೂವರ ವಯಸ್ಸು ಸುಮಾರು 20 ರಿಂದ 25 ವರ್ಷಗಳಾಗಿವೆ.
1. ಮೂವರು ಯುವಕರು ಮೋಟಾರ್ ಸೈಕಲ್‌ನಲ್ಲಿ ಸ್ಫೋಟಕ ವಸ್ತುಗಳನ್ನು ಹೊತ್ತು ಬರಾದಾದಿಂದ ಸಢೌರಾ ಕಡೆಗೆ ಹೋಗುತ್ತಿದ್ದಾರೆಂಬ ರಹಸ್ಯ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಸಿಕ್ಕ ತಕ್ಷಣ, ಪೊಲೀಸರು ಮಾರ್ಚ್ 13 ರಂದು ಸಂಜೆ 4 ಗಂಟೆಗೆ ಬರಾದಾ-ಸಢೌರಾ ರಸ್ತೆಯಲ್ಲಿ ನಾಕಾಬಂದಿ ಹಾಕಿ ರಸ್ತೆಯನ್ನು ಬಂದ್ ಮಾಡಿದರು.
2. ಸ್ವಲ್ಪ ಸಮಯದ ನಂತರ ಶಂಕಿತ ಯುವಕರು ಮೋಟಾರ್ ಸೈಕಲ್‌ನಲ್ಲಿ ಅಲ್ಲಿಗೆ ತಲುಪಿದ ಕೂಡಲೇ ಪೊಲೀಸರು ಅವರನ್ನು ನಾಲ್ಕು ದಿಕ್ಕುಗಳಿಂದ ಸುತ್ತುವರಿದರು. ತಪಾಸಣೆ ನಡೆಸಿದಾಗ ಅವರ ಬಳಿ ಸ್ಫೋಟಕ ವಸ್ತು ಪತ್ತೆಯಾಗಿದೆ. ಪೊಲೀಸರು ತಕ್ಷಣವೇ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
3. ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಎಲ್ಲಿಂದ ತರಲಾಯಿತು ಮತ್ತು ಅದನ್ನು ಯಾವ ಉದ್ದೇಶಕ್ಕಾಗಿ ಬಳಸಲು ಯೋಜಿಸಲಾಗಿತ್ತು ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
4. 2 ಕೆಜಿ ಆರ್‌ಡಿಎಕ್ಸ್ ದೊಡ್ಡ ಮಟ್ಟದ ವಿನಾಶವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯವಾಗಿ ದೊಡ್ಡ ಭಯೋತ್ಪಾದನಾ ದಾಳಿಗಳಿಗಾಗಿ ಆರ್‌ಡಿಎಕ್ಸ್ ಬಳಸಲಾಗುತ್ತದೆ.
5. ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಜಂಟಿಯಾಗಿ ಈ ಪ್ರಕರಣದ ತನಿಖೆ ನಡೆಸುತ್ತಿವೆ. ಆರೋಪಿಗಳ ಮೊಬೈಲ್ ಫೋನ್, ಸಂಪರ್ಕಗಳು ಮತ್ತು ಹಳೆಯ ಇತಿಹಾಸವನ್ನು ಸಹ ಪರಿಶೀಲಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಇನ್ನು ಹಲವು ಪ್ರಮುಖ ವಿಷಯಗಳು ಬಯಲಾಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!