ಗೃಹರಾಜ್ಯಮಂತ್ರಿ ಯೋಗೇಶ ಕದಮ್ ಅವರಿಂದ ಹಿಂದೂ ಜನಜಾಗೃತಿ ಸಮಿತಿಗೆ ಭರವಸೆ !
ಶೀಘ್ರದಲ್ಲೇ ಜಂಟಿ ಸಭೆ ಕರೆಯಲಾಗುವುದು !

ಮುಂಬಯಿ, 25 ಜೂನ್ (ಸುದ್ದಿ) – ಮುಂಬಯಿಯ ಜೀವನಾಡಿಯಾಗಿರುವ ಉಪನಗರ ಲೋಕಲ್ ಟ್ರೈನ್ ಗಳಲ್ಲಿ ನಡೆಯುತ್ತಿರುವ ಕ್ರಿಶ್ಚಿಯನ್ ಮಿಷನರಿಗಳ ರಹಸ್ಯ ಮತಾಂತರದ ಷಡ್ಯಂತ್ರ ಮತ್ತು ಮೂಢನಂಬಿಕೆ ಹರಡುವ ಡೋಂಗಿ ಬಾಬಾಗಳ ಜಾಹೀರಾತುಗಳಿಗೆ ಕಾಯಂ ಆಗಿ ತಡೆ ಒಡ್ಡಲು ಸರಕಾರವು ವಿಶೇಷ ನಿಯಮಾವಳಿಯನ್ನು (ಎಸ್.ಓ.ಪಿ) ಸಿದ್ಧಪಡಿಸಲಿದೆ ಎಂದು ರಾಜ್ಯದ ಗೃಹರಾಜ್ಯಮಂತ್ರಿ ಯೋಗೇಶ ಕದಮ್ ಅವರು ಹಿಂದೂ ಜನಜಾಗೃತಿ ಸಮಿತಿಯ ನಿಯೋಗಕ್ಕೆ ಭರವಸೆ ನೀಡಿದರು. ಈ ಧರ್ಮದ್ರೋಹಿ ಕುತಂತ್ರಕ್ಕೆ ಪರಿಹಾರ ಕಂಡುಕೊಳ್ಳಲು ಶೀಘ್ರದಲ್ಲೇ ಮುಂಬಯಿ ಪೊಲೀಸ್ ಆಯುಕ್ತರು ಮತ್ತು ರೈಲ್ವೆ ಆಡಳಿತ ಮಂಡಳಿಯ ಜಂಟಿ ಸಭೆ ಕರೆಯಲಾಗುವುದು.
ಲೋಕಲ್ ರೈಲುಗಳು ಕ್ರಿಶ್ಚಿಯನ್ ಮಿಷನರಿಗಳು ಮತ್ತು ಡೋಂಗಿ ಬಾಬಾಗಳ ಕೇಂದ್ರಗಳಾಗಿವೆ !
ಪನವೇಲ್-ಸಿ.ಎಸ್.ಎಮ್.ಟಿ (ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್) ಮಾರ್ಗದ ಹವಾನಿಯಂತ್ರಿತ ಲೋಕಲ್ ಸೇರಿದಂತೆ ಇತರ ರೈಲು ಗಾಡಿಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಂದ ‘ಜೀವನರೇಖೆ ಬೇಕೇ?’ ಅಥವಾ ‘ಯೇಸುವೇ ಏಕೈಕ ದೇವರು’ ಎಂಬಂತಹ ಕರಪತ್ರಗಳನ್ನು ಹಂಚಲಾಗುತ್ತಿದೆ. ಈ ಮೂಲಕ ಹಿಂದೂ ಪ್ರಯಾಣಿಕರ ಮನಃಪರಿವರ್ತನೆಗೊಳಿಸಿ ಅವರನ್ನು ಮತಾಂತರಗೊಳಿಸುವ ದೊಡ್ಡ ಜಾಲ ನೆಡೆಯುತ್ತಿದೆ. ಇದರೊಂದಿಗೆ ಮಧ್ಯ, ಪಶ್ಚಿಮ ಮತ್ತು ಹಾರ್ಬರ್ ಮಾರ್ಗಗಳ ಲೋಕಲ್ ರೈಲುಗಳಲ್ಲಿ ಕೇವಲ ಪ್ರಾರ್ಥನೆಯಿಂದಲೇ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳನ್ನು ಗುಣಪಡಿಸುವುದಾಗಿ ಸುಳ್ಳು ಭರವಸೆ ನೀಡುವ ಕರಪತ್ರಗಳು, ಹಾಗೂ ‘ಬಂಗಾಳಿ ಬಾಬಾ’, ‘ಶೇ.100% ರಷ್ಟು ವಶೀಕರಣ’ ಎಂಬ ವಂಚನೆಯ ಮತ್ತು ಸಮಾಜವನ್ನು ಮೂಢನಂಬಿಕೆಯ ಕೂಪಕ್ಕೆ ತಳ್ಳುವ ಜಾಹೀರಾತುಗಳನ್ನು ಅಂಟಿಸಿರುವುದರಿಂದ ಮುಗ್ಧ ಪ್ರಯಾಣಿಕರ ಭಾರೀ ಆರ್ಥಿಕ ಮತ್ತು ಮಾನಸಿಕ ಲೂಟಿ ನಡೆಯುತ್ತಿದೆ. ಈ ಸಮಾಜ ವಿರೋಧಿ ಹಾಗೂ ಧರ್ಮದ್ರೋಹಿ ಕುತಂತ್ರವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಹಿಂದೂ ಜನಜಾಗೃತಿ ಸಮಿತಿ ಮನವಿ ಸಲ್ಲಿಸಿ ಇದರ ಮುಖ್ಯ ಸೂತ್ರಧಾರರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿತು. ಮುಂದಿನ 15 ದಿನಗಳಲ್ಲಿ ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ತೀವ್ರ ಜನಆಂದೋಲನ ಮಾಡುವುದಾಗಿ ಸಮಿತಿ ಎಚ್ಚರಿಕೆ ನೀಡಿತು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”