ಪಾಕಿಸ್ತಾನದಿಂದ ಬಂದ ಆರ್‌ಡಿಎಕ್ಸ್ ; ಹರಿಯಾಣದಲ್ಲಿ ಜಪ್ತಿ!

ರಾಜಸ್ಥಾನ, ದೆಹಲಿ ಸೇರಿದಂತೆ ವಿವಿಧೆಡೆ ಸ್ಫೋಟ ನಡೆಸಲು ಸಂಚು ರೂಪಿಸಲಾಗಿತ್ತು!

ಅಂಬಾಲಾ (ಹರಿಯಾಣ) – ಇಲ್ಲಿನ ವಿಶೇಷ ತನಿಖಾ ದಳವು (SIT) ಮೂವರು ಯುವಕರನ್ನು ಬಂಧಿಸಿ ಅವರಿಂದ 2 ಕಿಲೋ ಆರ್‌ಡಿಎಕ್ಸ್ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ‘ಈ ಸ್ಫೋಟಕಗಳನ್ನು ಪಾಕಿಸ್ತಾನದಿಂದ ಕಳುಹಿಸಲಾಗಿತ್ತು ಮತ್ತು ಇವುಗಳ ಮೂಲಕ ರಾಜಸ್ಥಾನ, ದೆಹಲಿ ಸೇರಿದಂತೆ ವಿವಿಧೆಡೆ ಬಾಂಬ್ ಸ್ಫೋಟ ನಡೆಸಲು ಯೋಜಿಸಲಾಗಿತ್ತು’ ಎಂಬ ಆಘಾತಕಾರಿ ಮಾಹಿತಿ ವಿಚಾರಣೆಯ ವೇಳೆ ಹೊರಬಂದಿದೆ. ಪಾಕಿಸ್ತಾನದ ಕುಖ್ಯಾತ ಗ್ಯಾಂಗ್‌ಸ್ಟರ್ ಮತ್ತು ಭಯೋತ್ಪಾದಕ ಶಹಜಾದ್ ಭಟ್ಟಿ ಸೂಚನೆಯ ಮೇರೆಗೆ ಡ್ರೋನ್ ಮೂಲಕ ಅಮೃತಸರಕ್ಕೆ ಆರ್‌ಡಿಎಕ್ಸ್ ಕಳುಹಿಸಲಾಗಿತ್ತು. (ಅಮೃತಸರದಲ್ಲಿ ಡ್ರೋನ್ ಮೂಲಕ ಬಂದಂತಹ ಆರ್‌ಡಿಎಕ್ಸ್ ಅನ್ನು ಪಡೆದು ಅದನ್ನು ಅಂಬಾಲಾಕ್ಕೆ ಸಾಗಿಸಿದವರೆಲ್ಲರನ್ನೂ ಬಂಧಿಸಿ ಅವರಿಗೂ ಮರಣದಂಡನೆ ನೀಡಬೇಕು! – ಸಂಪಾದಕರು)

ಬಂಧಿತರಾದ ಅಜ್ಮೀರ್‌ನ ಅಲಿ ಅಕ್ಬರ್, ಮೀರತ್‌ನ ಅನಸ್ ಮತ್ತು ಅಂಬಾಲಾದ ಜಂಗ್‌ವೀರ್ ವಿಚಾರಣೆಯ ವೇಳೆ ಮಾಹಿತಿ ನೀಡಿದ್ದು, ಮೊದಲ ಸ್ಫೋಟವನ್ನು ರಾಜಸ್ಥಾನದ ಹನುಮಾನ್‌ಗಢದಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ ಆರ್‌ಡಿಎಕ್ಸ್ ತಲುಪಲು ವಿಳಂಬವಾದ ಕಾರಣ ಯೋಜನೆಯನ್ನು ಮುಂದೂಡಲಾಗಿತ್ತು. ಆನಂತರ ಹೊಸ ಗುರಿಗಳನ್ನು ನಿಗದಿಪಡಿಸಲು ಹರಿಯಾಣ, ಪಂಜಾಬ್ ಮತ್ತು ದೆಹಲಿಯ ಹಲವು ಪ್ರದೇಶಗಳನ್ನು ಒಂದು ವಾರಗಳ ಕಾಲ ಪರಿಶೀಲಿಸಿ, ಅದರ ವಿಡಿಯೋಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು ಎಂದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

ಸ್ಫೋಟ ನಡೆಸಲು ಯತ್ನಿಸುವವರನ್ನು ಜೈಲಿನಲ್ಲಿಟ್ಟು ಪೋಷಿಸುವ ಬದಲು, ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು!