ಆಗ್ರಾ (ಉತ್ತರ ಪ್ರದೇಶ)ದ ಇಬ್ಬರು ಸಹೋದರಿಯರ ಮತಾಂತರ ಪ್ರಕರಣ
ಭಾರತದ ವಿವಿಧ ರಾಜ್ಯಗಳಲ್ಲಿ ಯುವತಿಯರನ್ನು ಪ್ರೀತಿಯ ಜಾಲಕ್ಕೆ ಬೀಳಿಸಲಾಗುತ್ತಿತ್ತು
ಇಸ್ಲಾಮಿಕ್ ಸ್ಟೇಟ್ (IS) ಜೊತೆಯೂ ನಂಟು

ಆಗ್ರಾ (ಉತ್ತರ ಪ್ರದೇಶ) – ಇಲ್ಲಿನ ಸದರ್ ಪ್ರದೇಶದ ಇಬ್ಬರು ಹಿಂದೂ ಸಹೋದರಿಯರ ಮತಾಂತರ ಪ್ರಕರಣದಲ್ಲಿ ಬಂಧಿತರಾಗಿರುವ 14 ಆರೋಪಿಗಳ ವಿರುದ್ಧ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಜ್ಯೋತ್ಸ್ನಾ ಸಿಂಗ್ ಅವರು ಅಪಹರಣ, ಮತಾಂತರ ಮತ್ತು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವಂತಹ ಗಂಭೀರ ದೋಷಾರೋಪಗಳನ್ನು ಹೊರಿಸಿದ್ದಾರೆ. ಆರೋಪಿಗಳು ಈ ಆರೋಪಗಳನ್ನು ನಿರಾಕರಿಸಿದ್ದು, ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಈ ಪ್ರಕರಣದಲ್ಲಿ ಈಗ ಜುಲೈ 7 ರಿಂದ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಏನಿದು ಪ್ರಕರಣ?
2025ರ ಮಾರ್ಚ್ 24 ರಂದು ಇಬ್ಬರು ಹಿಂದೂ ಸಹೋದರಿಯರು ಮನೆಯಿಂದ ನಾಪತ್ತೆಯಾಗಿದ್ದರು. ಅವರಿಬ್ಬರನ್ನು ಕೋಲಕಾತಾಗೆ ಕರೆದೊಯ್ದು ಮತಾಂತರ ಮಾಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಪೊಲೀಸ್ ತಂಡಗಳು 6 ರಾಜ್ಯಗಳಿಂದ ಇಬ್ಬರು ಯುವತಿಯರು ಸೇರಿದಂತೆ 14 ಆರೋಪಿಗಳನ್ನು ವಶಕ್ಕೆ ಪಡೆದವು. ತನಿಖೆಯಿಂದ ಈ ಮತಾಂತರ ಜಾಲದ ಬೇರುಗಳು ಅಮೆರಿಕ, ಕೆನಡಾ ಸೇರಿದಂತೆ ಹಲವು ದೇಶಗಳಿಗೆ ಹರಡಿರುವುದು ಬೆಳಕಿಗೆ ಬಂದಿದೆ.
‘ಎಕೆ-47’ ರೈಫಲ್‌ನೊಂದಿಗೆ ಸಂತ್ರಸ್ತೆಯ ಫೋಟೋ ಬಹಿರಂಗ!
ಈ ಜಾಲಕ್ಕೆ ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಇರುವುದಕ್ಕೆ ಪೊಲೀಸರಿಗೆ ಪುರಾವೆಗಳು ಸಿಕ್ಕಿವೆ. ಆರೋಪಿಗಳು ಭಾರತದ ವಿವಿಧ ರಾಜ್ಯಗಳಲ್ಲಿ ಕಡಿಮೆ ವಯಸ್ಸಿನ ಹುಡುಗಿಯರನ್ನು ಪ್ರೀತಿಯ ಜಾಲಕ್ಕೆ ಎಳೆದು, ಲವ್ ಜಿಹಾದ್ ಮತ್ತು ಇತರ ಮಾರ್ಗಗಳ ಮೂಲಕ ಪ್ರಭಾವ ಬೀರಲು ಪ್ರಯತ್ನಿಸಿ ಅವರನ್ನು ಮತಾಂತರ ಮಾಡುತ್ತಿದ್ದರು. ಬಂಧಿತ ಆರೋಪಿಗಳಲ್ಲಿ ಶಾಮೀಲಾಗಿರುವ ಒಬ್ಬ ಸಂತ್ರಸ್ತೆಯ ಫೋಟೋ ಮುನ್ನೆಲೆಗೆ ಬಂದಿದ್ದು, ಅದರಲ್ಲಿ ಅವಳು ಮತಾಂತರದ ನಂತರ ‘ಎಕೆ-47’ ರೈಫಲ್‌ನೊಂದಿಗೆ ಕಾಣಿಸಿಕೊಂಡಿದ್ದಾಳೆ.
ಈ 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ!
ಎಸ್.ಬಿ. ಕೃಷ್ಣ ಉರ್ಫ್ ಆಯಿಷಾ, ರಿತ್ ಬನಿಕ್ ಉರ್ಫ್ ಮೊಹಮ್ಮದ್ ಇಬ್ರಾಹಿಂ, ಉಶಾವಾ ಖಾನ್, ಶೇಖರ್ ರಾಯ್ ಉರ್ಫ್ ಹಸನ್ ಅಲಿ, ಜುನೈದ್ ಖುರೇಷಿ, ಅಬು ತಾಲಿಬ್, ಮೊಹಮ್ಮದ್ ರೆಹಮಾನ್ ಖುರೇಷಿ, ಅಬ್ದುರ್ ರೆಹಮಾನ್, ಮೊಹಮ್ಮದ್ ಅಲಿ ಉರ್ಫ್ ಪಿಯೂಷ್ ಪವಾರ್, ಮನೋಜ್ ಕನೋಜಿಯಾ ಉರ್ಫ್ ಮುಸ್ತಫಾ, ಅಬ್ದುಲ್ ರೆಹಮಾನ್ ಉರ್ಫ್ ಮಹೇಂದ್ರ ಪಾಲ್ ಸಿಂಗ್, ಜುನೈದ್ ಖುರೇಷಿ (ದ್ವಿತೀಯ), ಅಬ್ದುಲ್ ರಹೀಮ್ ಮತ್ತು ಅಬ್ದುಲ್ಲಾ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ