(ಹರಾಮ್ ಅಂದರೆ ಇಸ್ಲಾಮ್ ಪ್ರಕಾರ ಅಯೋಗ್ಯ)

ಗುರುಗ್ರಾಮ (ಹರಿಯಾಣ) – ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಹರಿಯಾಣ ಪೊಲೀಸರು ಒಂದು ಜಂಟಿ ಕಾರ್ಯಾಚರಣೆಯಲ್ಲಿ ‘ಹೀರಾ ಗ್ರೂಪ್ ಆಫ್ ಕಂಪನೀಸ್’ನ ಸಂಸ್ಥಾಪಕಿ ನೌಹೇರಾ ಶೇಖ್ ಳನ್ನು ಇತ್ತೀಚೆಗೆ ಬಂಧಿಸಿದ್ದಾರೆ. ಷರಿಯತ್ ಕಾನೂನಿನ ಹೆಸರಿನಲ್ಲಿ ದೇಶಾದ್ಯಂತ ಲಕ್ಷಾಂತರ ಜನರಿಗೆ ವಂಚಿಸಿ ೩,೦೦೦ ಕೋಟಿ ರೂಪಾಯಿಗಳ ಬೃಹತ್ ಹಗರಣ ಮಾಡಿದ್ದ ನೌಹೇರಾ ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದಳು.
Gurugram (Haryana) – Heera group chief Nowhera Shaikh, who embezzled ₹3,000 crores by calling interest ‘Haram’, arrested by ED
This is an example showing that Muslim women are also at the forefront of crime.#CrimeNews pic.twitter.com/yHeRHzSyQJ
— Sanatan Prabhat (@SanatanPrabhat) May 26, 2026
೧. ಷರಿಯತ್ ಕಾನೂನಿನ ಪ್ರಕಾರ ಬಡ್ಡಿ ಗಳಿಕೆ ಮಾಡುವುದು ಅಥವಾ ನೀಡುವುದು ಸಂಪೂರ್ಣವಾಗಿ ‘ಹರಾಮ್’ ಎಂದು ಪರಿಗಣಿಸಲಾಗುತ್ತದೆ. ಈ ಧಾರ್ಮಿಕ ನಂಬಿಕೆಯಿಂದಾಗಿ ಅನೇಕ ಮುಸಲ್ಮಾನರು ಬ್ಯಾಂಕುಗಳಲ್ಲಿ ಹಣ ಜಮೆ ಮಾಡುವುದಿಲ್ಲ. ನೌಹೇರಾ ಇದರ ದುರ್ಲಾಭ ಪಡೆದುಕೊಂಡಳು ಮತ್ತು ಅತ್ಯಂತ ಚಾಲಾಕಿತನದಿಂದ ಹಣ ಹೂಡಿಕೆ ಮಾಡುವ ಒಂದು ಯೋಜನೆ ಸಿದ್ಧಪಡಿಸಿದಳು. ‘ಹೀರಾ ಗ್ರೂಪ್’ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿದಳು ಮತ್ತು ವಿಶೇಷವಾಗಿ ಮುಸಲ್ಮಾನರನ್ನು ಗುರಿಯಾಗಿಸಿದಳು.
೨. ಈ ಬೃಹತ್ ಹಗರಣದಲ್ಲಿ ಅಂದಾಜು ೧ ಲಕ್ಷ ೭೨ ಸಾವಿರಕ್ಕೂ ಅಧಿಕ ಹೂಡಿಕೆದಾರರ ೩,೦೦೦ ಕೋಟಿ ರೂಪಾಯಿಗಳು ಮುಳುಗಿವೆ.
೩. ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನು ತಿರಸ್ಕರಿಸಿದ ನಂತರ ಮತ್ತು ಖುದ್ದಾಗಿ ಶರಣಾಗಲು ಆದೇಶ ನೀಡಿದ ನಂತರವೂ ನೌಹೇರಾ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದಳು.
೪. ಸರ್ವೋಚ್ಚ ನ್ಯಾಯಾಲಯದ ಕಠಿಣ ನಿಲುವಿನ ನಂತರ ‘ಇ.ಡಿ.’ ಇದುವರೆಗೆ ನೌಹೇರಾ ಮತ್ತು ಆಕೆಯ ಸಂಬಂಧಿಕರ ೪೦೦ ಕೋಟಿ ರೂಪಾಯಿಗಳ ಆಸ್ತಿಯನ್ನು ಜಪ್ತಿ ಮಾಡಿದೆ.
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!