ಕಾರ್ಪೊರೇಟ್ ಜಿಹಾದ್ ಮತ್ತು ಮಹಿಳೆಯರ ದೌರ್ಜನ್ಯದ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆ!
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿರ್ದೇಶನ

ಮುಂಬಯಿ – ನಾಸಿಕ್‌ನ ಟಿ.ಸಿ.ಎಸ್. (TCS) ಸಂಸ್ಥೆಯಲ್ಲಿ ನಡೆದ ಮತಾಂತರ ಮತ್ತು ಜಿಹಾದ್ ಘಟನೆಯು ಕಣ್ಣು ತೆರೆಸುವಂತದ್ದಾಗಿದೆ. ಈ ಪ್ರಕರಣದಲ್ಲಿ ೯ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಒಂದು ನಿರ್ದಿಷ್ಟ ‘ಮೋಡಸ್ ಅಪರೆಂಡಿ’ (ಅಪರಾಧ ಮಾಡುವ ವಿಧಾನ) ಬಳಸಲಾಗುತ್ತದೆ. ಹಲವು ಕಾಯ್ದೆ-ಕಾನೂನುಗಳನ್ನು ರೂಪಿಸಲಾಗಿದೆ; ಆದರೆ ಅವುಗಳ ಪಾಲನೆಯಾಗುತ್ತಿಲ್ಲ. ವಿಧಾನಸಭಾ ಮತ್ತು ವಿಧಾನ ಪರಿಷತ್ ಎರಡೂ ಸದನಗಳ ಮಹಿಳಾ ಸದಸ್ಯರ ಸಮಿತಿಯನ್ನು ನೇಮಿಸಿ, ಇದುವರೆಗಿನ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಾಯ್ದೆಗಳನ್ನು ಅಧ್ಯಯನ ಮಾಡಬೇಕು ಮತ್ತು ಅವುಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪರಾಮರ್ಶೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿರ್ದೇಶನ ನೀಡಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ನಡೆದ ಪ್ರಶ್ನಾವಳಿಯಲ್ಲಿ, ನಾಸಿಕ್‌ನ ಟಿಸಿಎಸ್ ಕಾರ್ಪೊರೇಟ್ ಜಿಹಾದ್, ಹಾಗೂ ವಿವಿಧ ಸಂಸ್ಥೆಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ಕಿರುಕುಳ ಮತ್ತು ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪಚಾರಗಳ ಕುರಿತು ಚರ್ಚೆ ನಡೆಯಿತು. ಇದಕ್ಕೆ ಉತ್ತರಿಸುತ್ತಾ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಶಿವಸೇನೆಯ ಶಾಸಕಿ ಡಾ. ಮನೀಷಾ ಕಾಯಂದೆ, ಬಿಜೆಪಿ ಶಾಸಕಿ ಸೌ. ಚಿತ್ರಾ ವಾಘ್, ಶಾಸಕಿ ಉಮಾ ಖಾಪ್ರೆ ಮತ್ತು ಶಾಸಕಿ ಮಾಧವಿ ನಾಯ್ಕ್ ಅವರು ಪ್ರಶ್ನೆಗಳನ್ನೆತ್ತಿದ್ದರು.
ಮುಖ್ಯಮಂತ್ರಿಗಳು ಮುಂದುವರಿದು ಮಾತನಾಡುತ್ತಾ:
೧. ಟಿಸಿಎಸ್, ವಿಪ್ರೋ, ಐಟಿಐ ಸರಕಾರಿ ಸೋಲಾಪುರದಲ್ಲಿ ನಡೆದ ಜಿಹಾದ್ ಮತ್ತು ಮತಾಂತರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ದೂರುಗಳು ಬಂದಿವೆ. ಸೋಲಾಪುರದಲ್ಲಿ ೧೫೦ ಹುಡುಗಿಯರಿಗೆ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಪ್ರಕರಣದ ಕುರಿತು ತನಿಖೆ ನಡೆಸಿ ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
೨. ತಳೇಗಾಂವ್ ದಾಭಾಡೆಯಲ್ಲಿರುವ ಸ್ಪ್ಯಾನಿಷ್ ಸಂಸ್ಥೆಯೊಂದರಲ್ಲಿ ಕೂಡ ದೌರ್ಜನ್ಯ ನಡೆದಿದ್ದು, ಈ ಕುರಿತು ದೂರು ನೀಡಿದ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ೧೫ ದಿನಗಳ ಒಳಗಾಗಿ ಹಿರಿಯ ಅಧಿಕಾರಿಗಳಿಂದ ಈ ಪ್ರಕರಣದ ತನಿಖೆ ನಡೆಸಲಾಗುವುದು, ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಸಂತ್ರಸ್ತ ಮಹಿಳೆಗೆ ಅನ್ಯಾಯವಾಗಲು ಬಿಡುವುದಿಲ್ಲ.
೩. ವಿಪ್ರೋ ಸಂಸ್ಥೆಯಲ್ಲಿಯೂ ಕೂಡ ದೌರ್ಜನ್ಯ ನಡೆದ ಬಳಿಕ ಹಿಂದೂ ವಿಧವೆ ಮಹಿಳೆಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ಖಂಡಿತವಾಗಿಯೂ ಸೂಕ್ತ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”