
ಕೋಪನ್ ಹ್ಯಾಗನ್ (ಡೆನ್ಮಾರ್ಕ್) – ಯುರೋಪಿಯನ್ ದೇಶವಾದ ಡೆನ್ಮಾರ್ಕ್ ಶೀಘ್ರದಲ್ಲೇ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ಮತ್ತು ಅಜಾನ್ (ಮುಸಲ್ಮಾನರನ್ನು ದೊಡ್ಡ ಧ್ವನಿಯಲ್ಲಿ ನಮಾಜ್ ಗಾಗಿ ಆಹ್ವಾನಿಸುವುದು) ಕೂಗುವುದನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದೆ.
ಡೆನ್ಮಾರ್ಕ್ ಸಚಿವ ಮಾರ್ಟನ್ ಬೋಡಸ್ಕೋವ್ ಮಾತನಾಡಿ, ‘ರಸ್ತೆಗಳಲ್ಲಿ ನಮಾಜ್ ಮಾಡುವುದು ಮತ್ತು ಅಜಾನ್ ನಿಷೇಧಿಸಲು ಸಾಧ್ಯವೇ? ಎನ್ನುವುದರ ಕುರಿತು ಅಧಿಕಾರಿಗಳು ಕಾನೂನು ಚೌಕಟ್ಟನ್ನು ಮರುಪರಿಶೀಲಿಸಲು ಪ್ರಾರಂಭಿಸಲಿದ್ದಾರೆ. ಕೋಪನ್ ಹ್ಯಾಗನ್ ಸೇರಿದಂತೆ ಕೆಲವು ಭಾಗಗಳಲ್ಲಿ ಧ್ವನಿ ಮಾಲಿನ್ಯಕ್ಕೆ ಸಂಬಂಧಿಸಿದ ಕಟ್ಟುನಿಟ್ಟಿನ ನಿಯಮಗಳಿರುವುದರಿಂದ ಈಗಾಗಲೇ ಬಹಿರಂಗವಾಗಿ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ; ಆದರೆ ಈಗ ಡೆನ್ಮಾರ್ಕ್ ಸರಕಾರ ಇನ್ನಷ್ಟು ಕಠಿಣ ನಿಷೇಧ ಹೇರಲು ಯೋಚಿಸುತ್ತಿದೆ. ಡೆನ್ಮಾರ್ಕ್‌ನಲ್ಲಿ ಮಸೀದಿಗಳಿಂದ ದಿನಕ್ಕೆ 5 ಬಾರಿ ಅಜಾನ್ ಕೂಗಲು ಅವಕಾಶವಿಲ್ಲ. ಡೆನ್ಮಾರ್ಕ್‌ನ ಕಟ್ಟಡಗಳ ಮೇಲ್ಛಾವಣಿಯಿಂದ ಅಜಾನ್ ಧ್ವನಿ ಕೇಳಿಸಬಾರದು. ಡೆನ್ಮಾರ್ಕ್‌ನಲ್ಲಿ ಇದಕ್ಕೆ ಯಾವುದೇ ಸ್ಥಾನವಿಲ್ಲ ಮತ್ತು ನೀವು ಡೆನ್ಮಾರ್ಕ್‌ನಲ್ಲಿ ತಿರುಗಾಡುವಾಗ, ಇಸ್ಲಾಮಾಬಾದ್ ನ (ಪಾಕಿಸ್ತಾನದ ರಾಜಧಾನಿ) ಯಾವುದೋ ಒಂದು ಪ್ರದೇಶಕ್ಕೆ ಬಂದಿದ್ದೀರಾ ಎಂಬ ಅನುಮಾನ ನಿಮಗೆ ಬರಬಾರದು’ ಎಂದು ಹೇಳಿದ್ದಾರೆ.
ಡೆನ್ಮಾರ್ಕ್‌ನಲ್ಲಿ ಈ ಹಿಂದೆ 2020 ಮತ್ತು 2025 ರಲ್ಲೂ ಈ ಕುರಿತು ಚರ್ಚೆಗಳು ನಡೆದಿದ್ದವು; ಆದರೆ ದೇಶಾದ್ಯಂತ ನಿಷೇಧವನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ.
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಿಂದ ‘ಲವ್ ಜಿಹಾದ್’ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು
ಶ್ರೀರಾಮಮಂದಿರವನ್ನು ಬಾಂಬ್ನಿಂದ ಸ್ಫೋಟಿಸಲು ಸಂಚು ರೂಪಿಸಿದ್ದ ಸುಹೇಲ್ ದಾವಣಗೆರೆಯಿಂದ ಬಂಧನ
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ
ಹಿಂದೂಬಹುಸಂಖ್ಯಾತ ಭಾರತದಲ್ಲಿ ‘ಹಿಂದೂ’ ಆಗಿರುವುದಕ್ಕೆ ಎದುರಾದ ಆಘಾತಗಳು !