ಕಳೆದ 24 ಗಂಟೆಗಳಲ್ಲಿ ಬೆಳಕಿಗೆ ಬಂದ ಲವ್ ಜಿಹಾದ್ ನ 3 ಹಾಗೂ ಮತಾಂತರದ 1 ಘಟನೆ !
ಉತ್ತರಪ್ರದೇಶ
ಅಲಿಗಢ : ಇಲ್ಲಿ ದೆಹಲಿಯ ಹಿಂದೂ ಮಹಿಳೆಯೊಬ್ಬರು ಅನ್ಸಾರ್ ಅಲಿ ಎಂಬ ವ್ಯಕ್ತಿಯ ವಿರುದ್ಧ ವಂಚನೆ, ಬಲವಂತದ ವಿವಾಹ ಮತ್ತು ತೀವ್ರ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಅನ್ಸಾರ್ ಆರಂಭದಲ್ಲಿ ತನ್ನನ್ನು ‘ರಾಹುಲ್’ ಎಂದು ಸುಳ್ಳು ಗುರುತಿನೊಂದಿಗೆ ಪರಿಚಯಿಸಿಕೊಂಡು ಅವಳನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದನು. ಮದುವೆಯ ಭರವಸೆ ನೀಡಿ ಅವಳೊಂದಿಗೆ ದೇವಸ್ಥಾನವೊಂದರಲ್ಲಿ ವಿವಾಹವೂ ಆಗಿದ್ದನು. ವಿವಾಹದ ನಂತರ ಆಕೆಗೆ ಅವನ ನಿಜವಾದ ಹೆಸರು ತಿಳಿಯಿತು. ಇದರ ಬೆನ್ನಲ್ಲೇ ಅನ್ಸಾರ್ ಆಕೆಯ ಮೇಲೆ ನಿಕಾಹ್ (ಇಸ್ಲಾಮಿಕ್ ಪದ್ಧತಿಯಂತೆ ವಿವಾಹ) ಮಾಡಿಕೊಳ್ಳುವಂತೆ ಒತ್ತಡ ಹೇರಲು ಪ್ರಾರಂಭಿಸಿದನು. ತದನಂತರ ಆಕೆಗೆ ತಲಾಖ್ ನೀಡಲಾಯಿತು ಮತ್ತು ‘ಹಲಾಲಾ’ (ಇಸ್ಲಾಂನಲ್ಲಿ ಮುಸ್ಲಿಂ ವ್ಯಕ್ತಿಯು ಹೆಂಡತಿಗೆ ತಲಾಖ್ ನೀಡಿದ ನಂತರ, ಮತ್ತೆ ಅದೇ ಯುವತಿಯನ್ನು ಮದುವೆಯಾಗಬೇಕಾದರೆ ಆ ಮಹಿಳೆಯು ಮೊದಲು ಬೇರೊಬ್ಬ ಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿರಬೇಕಾದ ಪದ್ಧತಿ) ಮಾಡಲು ಬೇಡಿಕೆಯಿಡಲಾಯಿತು. ಆಕೆಗೆ ಮಾದಕ ಪದಾರ್ಥದ ಇಂಜೆಕ್ಷನ್ ನೀಡಿ ದೌರ್ಜನ್ಯ ಎಸಗಿದನು, ಆಕೆಯನ್ನು ಒತ್ತೆಯಾಳಾಗಿ ಇರಿಸಿದನು ಮತ್ತು ಆಕೆಯನ್ನು ಮಾರಾಟ ಮಾಡುವ ಹಂತದವರೆಗೂ ಅವನ ಕ್ರೌರ್ಯ ತಲುಪಿತ್ತು ಎಂದು ಸಂತ್ರಸ್ತ ಹಿಂದೂ ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹರದೋಯಿ : ಇಲ್ಲಿ ಸಲ್ಮಾನ್ ಎಂಬಾತನು 19 ವರ್ಷದ ಹಿಂದೂ ಯುವತಿಗೆ ಮದುವೆಯ ಆಮಿಷವೊಡ್ಡಿ ಅಪಹರಿಸಿದ್ದಾನೆ. ಯುವತಿಯ ಕುಟುಂಬಸ್ಥರು ಇದನ್ನು ವಿರೋಧಿಸಿದಾಗ ಅವರಿಗೆ ಬಂದೂಕು ತೋರಿಸಿ ಜೀವಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧ್ಯಪ್ರದೇಶ
ಇಂದೂರ : ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಾಜಸ್ಥಾನದ ನಿವಾಸಿ ಇರ್ಫಾನ್ ಖಾನ್ ಎಂಬಾತನನ್ನು ಬಸ್ಸಿನಲ್ಲಿ ಹಿಡಿದಿದ್ದಾರೆ. ಇರ್ಫಾನ್ ಬಿಹಾರದ ಹಿಂದೂ ಹುಡುಗಿಯನ್ನು ಬಲವಂತವಾಗಿ ಕೋಟಾಗೆ ಕರೆದೊಯ್ಯಲು ಯತ್ನಿಸುತ್ತಿದ್ದನು. ಇರ್ಫಾನ್ ತನ್ನನ್ನು ಇಂದೂರಗೆ ಕರೆಸಿಕೊಂಡಿದ್ದನು ಮತ್ತು ನನ್ನ ಇಚ್ಛೆಗೆ ವಿರುದ್ಧವಾಗಿ ಕೋಟಾಗೆ ಬರುವಂತೆ ಒತ್ತಡ ಹೇರುತ್ತಿದ್ದನು ಎಂದು ಆ ಹುಡುಗಿ ತಿಳಿಸಿದ್ದಾಳೆ. ಇರ್ಫಾನ್ ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಉತ್ತರಾಖಂಡದಿಂದ ಬೆಳಕಿಗೆ ಬಂದ ಮತಾಂತರ ಯತ್ನದ 1 ಘಟನೆ !
ಪಿಥೋರಾಗಢ ಜಿಲ್ಲೆಯ ಗಂಗೋಲಿಹಾಟ್ ನಲ್ಲಿ ವಿವೇಕ ಸಿಂಗ್ ಎಂಬ ಹಿಂದೂ ಯುವಕನು ದೆಹಲಿಯ ಯಾಸ್ಮಿನ್ ಎಂಬ ಮುಸ್ಲಿಂ ಮಹಿಳೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾನೆ. ವಿವೇಕ್, ‘ಪ್ರೇಮದ ನೆಪದಲ್ಲಿ ಈ ಮಹಿಳೆಯು ನನ್ನ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದಳು ಮತ್ತು ನಿರಾಕರಿಸಿದ್ದಕ್ಕೆ ಜೀವಬೆದರಿಕೆ ಹಾಕಿದಳು. ಅಲ್ಲದೆ ನನ್ನ ಮಗನಿಗೆ ಬಲವಂತವಾಗಿ ಸುನ್ನತಿ ಮಾಡಿಸಲಾಗಿದೆ’ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಯಾಸ್ಮಿನ್ ಮತ್ತು ಆಕೆಯ ಪೋಷಕರು ಹಾಗೂ ಇತರ ಸಂಬಂಧಿಕರು ಸೇರಿದಂತೆ ಒಟ್ಟು 4 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein