ಗಣಪತಿಗೆ ಗರಿಕೆಗಳನ್ನು ಏಕೆ ಅರ್ಪಿಸಲಾಗುತ್ತದೆ ?
ಅನಲಾಸುರ ಹೆಸರಿನ ಅಸುರನು ತಪಶ್ಚರ್ಯ ಮಾಡಿ ಭಗವಾನ ಶಂಕರನಿಂದ ಅಜೇಯನಾಗಲು ವರ ಬೇಡಿದನು. ಅವನು ಉಪದ್ರವ ಕೊಡಲು ಪ್ರಾರಂಭಿಸಿದನು. ಆ ಸಮಯದಲ್ಲಿ ಎಲ್ಲರೂ ತಮ್ಮ ರಕ್ಷಣೆಗಾಗಿ ಗಣಪತಿಯನ್ನು ಸ್ತುತಿಸತೊಡಗಿದರು. ಆಗ ಗಣಪತಿಯು ಪ್ರಕಟನಾಗಿ ಪ್ರಚಂಡ ಸ್ವರೂಪವನ್ನು ಧಾರಣೆ ಮಾಡಿ ಆ ಅಸುರನನ್ನು ನುಂಗಿದನು.