ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ ದಿವ್ಯ ಬ್ರಹ್ಮೋತ್ಸವವನ್ನು ಮತ್ತೊಮ್ಮೆ ಅನುಭವಿಸಲು ದೈವೀ ಬಾಲಕರ ಸತ್ಸಂಗದಲ್ಲಿ ತೆಗೆದುಕೊಂಡ ಭಾವಪ್ರಯೋಗಗಳು !

ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ

ದಿನಾಂಕ ೧೧.೫.೨೦೨೩ ರಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವವು ಜರುಗಿತು ತದನಂತರ ‘ದೈವೀ ಬಾಲಕರು ಮತ್ತು ಯುವ ಸಾಧಕರ ಸತ್ಸಂಗದಲ್ಲಿನ ಸಾಧಕರಿಗೆ ಮತ್ತೊಮ್ಮೆ ಆ ದಿವ್ಯ ಬ್ರಹ್ಮೋತ್ಸವವನ್ನು ಸೂಕ್ಷ್ಮದಿಂದ ಅನುಭವಿಸಲು ಆಗಬೇಕು’, ಎಂದು ಪರಾತ್ಪರ ಗುರುದೇವರ ಕೃಪೆಯಿಂದ ಕೆಲವು ದಿನಗಳ ಹಿಂದೆ ಸತ್ಸಂಗದಲ್ಲಿ ಬ್ರಹ್ಮೋತ್ಸವಕ್ಕೆ ಸಂಬಂಧಿಸಿದ ಭಾವಪ್ರಯೋಗಗಳನ್ನು ತೆಗೆದುಕೊಳ್ಳಲಾಯಿತು. ಇದರಿಂದ ದೈವೀ ಸತ್ಸಂಗದಲ್ಲಿದ್ದ ಸಾಧಕರು ಮತ್ತೊಮ್ಮೆ ಅವರ್ಣನೀಯ ಭಾವಾವಸ್ಥೆಯನ್ನು ಅನುಭವಿಸಿದರು ಮತ್ತು ಕೃತಿಯ ಸ್ತರದಲ್ಲಿ ವಿವಿಧ ಭಾವಪ್ರಯತ್ನಗಳನ್ನೂ ಮಾಡಿದರು. ಅವುಗಳನ್ನು ಮುಂದೆ ನೀಡಲಾಗಿದೆ.

ಕು. ಅಪಾಲಾ ಔಂಧಕರ
ಕು. ಪ್ರಾರ್ಥನಾ ಪಾಠಕ

೧. ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ ಬ್ರಹ್ಮೋತ್ಸವವನ್ನು ಆಚರಿಸಲಾದ ‘ಫರ್ಮಾಗುಡಿ, ಫೋಂಡಾ, ಗೋವಾದ ಮೈದಾನರೂಪೀ ಪುಣ್ಯಭೂಮಿಯೆಂದರೆ ನಾವೇ ಆಗಿದ್ದೇವೆ’, ಎನ್ನುವ ಭಾವವನ್ನಿಟ್ಟುಕೊಂಡು ಶ್ರೀಮನ್ನಾರಾಯಣಸ್ವರೂಪ ಗುರುದೇವರ ಕೋಮಲ ಚರಣಸ್ಪರ್ಶವನ್ನು ಅನುಭವಿಸೋಣ !

‘ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬ್ರಹ್ಮೋತ್ಸವ ನಡೆದ ಮೈದಾನ ಮತ್ತು ಆ ಭೂಮಿ ನಿಜಕ್ಕೂ ಪುಣ್ಯಭೂಮಿಯೇ ಆಗಿವೆ. ಆ ಭೂಮಿಗೆ ಸಾಕ್ಷಾತ್‌ ಶ್ರೀಮನ್ನಾರಾಯಣ ‘ಶ್ರೀಜಯಂತ’ ಅವತಾರದ ಚರಣಸ್ಪರ್ಶವಾಗಿದೆ. ಆ ಭೂಮಿಯು ನಾವೇ ಆಗಿದ್ದೇವೆ’, ಎನ್ನುವ ಭಾವವಿಡೋಣ ಮತ್ತು ನಾವೂ ನಾರಾಯಣನ ದಿವ್ಯ ಚರಣಗಳ ಸ್ಪರ್ಶವನ್ನು ಅನುಭವಿಸೋಣ. ಆ ಭೂಮಿಯೂ ಎಷ್ಣುದು ಆತುರದಿಂದಿರಬಹುದು ಅಲ್ಲವೇ ?’

‘ಯಾವಾಗ ನಾನು ನಾರಾಯಣನ ಚರಣಸ್ಪರ್ಶವನ್ನು  ಅನುಭವಿಸುವೆನು’, ಎಂದು ಅದಕ್ಕೆ ಅನಿಸಿರಬಹುದು. ಅದೇ ರೀತಿ ನಾವೂ ನಮ್ಮ ಹೃದಯಮಂದಿರದಲ್ಲಿ ಆ ಆತುರತೆಯನ್ನು ಅನುಭವಿಸೋಣ. ಸಾಕ್ಷಾತ್‌ ತ್ರಿಭುವನ ಪಾಲನಕರ್ತನ ಪಾದಗಳಿಂದ ಈ ಭೂಮಿಯು ವೈಯಕ್ತಿಕವಾಗಿ ಸ್ಪರ್ಶಿಸಲ್ಪಟ್ಟಿದ್ದು, ಶ್ರೀವಿಷ್ಣುವು ಈ ಹೃದಯರೂಪಿ ಮೈದಾನಕ್ಕೆ ಬರಲಿದ್ದಾನೆ. ನಮ್ಮ ಆರ್ತತೆ ಈಗ ಇನ್ನಷ್ಟು ಹೆಚ್ಚಾಗುತ್ತಿದೆ. ನಾವು ಆ ಭೂಮಿಯಾಗಿದ್ದೇವೆ ಮತ್ತು ನಾರಾಯಣಸ್ವರೂಪ ಗುರುದೇವರು ನಮ್ಮ ಹೃದಯಮಂದಿರಕ್ಕೆ ಬರುವವರಿದ್ದಾರೆ. ಇದರಿಂದಾಗಿ ನಮ್ಮ ಈ ಮನಮಂದಿರ ಈಗ ಪವಿತ್ರವಾಗತೊಡಗಿದೆ. ಯಾವ ಕ್ಷಣದಲ್ಲಿ ನಮ್ಮ ಮನರೂಪಿ ಮೈದಾನಕ್ಕೆ ಗುರುದೇವರ ಚರಣಸ್ಪರ್ಶವಾಯಿತೋ, ಆ ಕ್ಷಣದಲ್ಲಿ ನಮ್ಮ ಆನಂದಕ್ಕೆ ಮಿತಿಯೇ ಇಲ್ಲದಂತಾಯಿತು. ನಮ್ಮ ಮನಮಂದಿರದಲ್ಲಿ ಸಾಕ್ಷಾತ್‌ ಭಗವಂತನು ಬಂದಿದ್ದಾನೆ. ನಾವು ಅವರನ್ನು ನಿರಂತರವಾಗಿ ಅನುಭವಿಸೋಣ. ನಾವು ಶ್ರೀಮನ್ನಾರಾಯಣನ ಚರಣಗಳಿಗೆ ಕೋಟಿಶಃ ಕೃತಜ್ಞತೆಗಳನ್ನು ವ್ಯಕ್ತಪಡಿಸೋಣ.’

೨. ನಮ್ಮ ಅಂತರ್ಮನಸ್ಸೆಂದರೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ದಿವ್ಯ ರಥವಾಗಿದೆ, ಈ ಅಂತರ್ಮನರೂಪಿ ರಥವನ್ನು ಸುಂದರಗೊಳಿಸಲು ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯನ್ನು ಮಾಡಿ ಅದರ ಮೇಲೆ ಭಗವಂತನ ಬಗೆಗಿನ ಭಾವದಿಂದ ಸುಂದರ ಕುಸುರಿ ಕೆತ್ತನೆಗಳನ್ನು ಮಾಡೋಣ ಮತ್ತು  ಅದರ ಮೇಲೆ ವಿವಿಧ ಭಾವಭಕ್ತಿಯ ಬಣ್ಣಗಳನ್ನು ನೀಡೋಣ.

‘ಈಗ ‘ನಮ್ಮ ಅಂತರ್ಮನವೆಂದರೆ ಸಾಕ್ಷಾತ್‌ ಗುರುದೇವರ ದಿವ್ಯ ಸುವರ್ಣರಥವಾಗಿದೆ ಮತ್ತು ಆ ಮನರೂಪಿ ರಥದಲ್ಲಿ ನಮ್ಮ ಪ್ರಾಣಪ್ರಿಯ ಮೂವರು ಗುರುಗಳು (ಟಿಪ್ಪಣಿ) ವಿರಾಜಮಾನರಾಗಿದ್ದಾರೆ’ ಎನ್ನುವ ಭಾವವನ್ನು ಇಟ್ಟುಕೊಳ್ಳೋಣ.

ದಿವ್ಯ ಸುವರ್ಣರಥವನ್ನು ತಯಾರಿಸುವಾಗ ಎಷ್ಟು ಕಷ್ಟುಳನ್ನು ಅನುಭವಿಸಬೇಕಾಯಿತು. ರಥಕ್ಕಾಗಿ ಹಲಗೆಗಳನ್ನು ಹುಡುಕುವುದು, ಆ ಹಲಗೆಗಳನ್ನು ಕತ್ತರಿಸಿ, ಅದಕ್ಕೆ ಸುಂದರ ಆಕಾರ ನೀಡುವುದು, ಅದರ ಮೇಲೆ ಸುಂದರ ಕುಸುರಿ ಕೆತ್ತನೆಗಳನ್ನು ಮಾಡುವುದು, ಅದಕ್ಕೆ ಬಣ್ಣ ಬಳಿಯುವುದು ಇತ್ಯಾದಿ. ಈ ಎಲ್ಲ ಕೆಲಸಗಳನ್ನು ಮಾಡಿದ ಬಳಿಕ ಅತ್ಯಂತ ಸುಂದರ ಮತ್ತು ಪ್ರಕಾಶಮಾನವಾದ ದಿವ್ಯ ರಥ ಸಿದ್ಧವಾಯಿತು ಮತ್ತು ಆ ರಥದಲ್ಲಿ ಪ್ರತ್ಯಕ್ಷ ಪರಮೇಶ್ವರನ ಆಗಮನವಾಯಿತು. ಅದೇ ರೀತಿ ನಮ್ಮ ಮನಸ್ಸೆಂದರೆ ‘ದಿವ್ಯ ರಥ’ವಾಗಿದೆ. ಆ ಮನರೂಪಿ ದಿವ್ಯ ರಥದಲ್ಲಿ ಪರಮೇಶ್ವರನ ಆಗಮನವಾಗಲು ನಮಗೂ ಕಷ್ಟು ಪಡಬೇಕಾಗುವುದು. ಮನರೂಪಿ  ರಥವನ್ನು ಸುಂದರವಾಗಿ ಸಿದ್ಧಪಡಿಸಲು ‘ಸ್ವಭಾವದೋ ಮತ್ತು ಅಹಂ ನಿರ್ಮೂಲನೆ’ಯ ಪ್ರಕ್ರಿಯೆಯನ್ನು ಮಾಡಬೇಕಾಗಿದೆ. ನಮಗೆ ‘ಅಹಂ’ನ್ನು ನಷ್ಟುಗೊಳಿಸಬೇಕಾಗಿದೆ. ಆಧ್ಯಾತ್ಮಿಕ ವಿಚಾರಗಳಿಂದ ಮನಸ್ಸಿಗೆ ಆಕಾರ ನೀಡಬೇಕಾಗಿದೆ. ಅದರ ಮೇಲೆ ಭಗವಂತನ ಪ್ರಾಪ್ತಿಯ ಭಾವದಿಂದ ಸುಂದರ ಕುಸುರಿ ಕೆತ್ತನೆ ಕೆಲಸಗಳನ್ನು ಮಾಡಬೇಕಾಗಿದೆ ಮತ್ತು ಭಾವಭಕ್ತಿಯ ವಿವಿಧ ಬಣ್ಣಗಳನ್ನು ಬಳಿಯಬೇಕಾಗಿದೆ. ತದನಂತರವೇ ನಮ್ಮ ಗುರುದೇವರು ಆ ರಥದಲ್ಲಿ ವಿರಾಜಮಾನರಾಗುವರು. ಯಾವಾಗ ಗುರುದೇವರು ನಮ್ಮ ರಥರೂಪಿ ಮನಮಂದಿರದಲ್ಲಿ ವಿರಾಜಮಾನರಾಗುತ್ತಾರೆಯೋ, ಆಗ ಆ ರಥರೂಪಿ ಮನಮಂದಿರದ ಯಾವುದೇ ಅಸ್ತಿತ್ವ ಉಳಿಯದೇ ನಾವು ಗುರುದೇವಮಯರಾಗಿದ್ದೇವೆ. ಆ ರಥದಲ್ಲಿ ಗುರುದೇವರಿದ್ದಾರೆ, ಅಂದರೆ ನಮ್ಮ ಮನಸ್ಸು ಅವರ ಇಚ್ಛೆಯಿಂದಲೇ ಮುಂದಕ್ಕೆ ಹೋಗುತ್ತಿದೆ’.

(ಟಿಪ್ಪಣಿ : ೩ ಜನ ಗುರುಗಳೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆ, ಶ್ರೀಸತ್‌ಶಕ್ತಿ(ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ)

೩. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬ್ರಹ್ಮೋತ್ಸವದ ಮೆರವಣಿಗೆಯಲ್ಲಿನ ‘ತಾಳ ಪಡೆ’ ಮತ್ತು ‘ಧ್ವಜಪಡೆ’ಯ ಸಾಧಕರಾಗಿ ಅವರ ಭಾವವನ್ನು ಅನುಭವಿಸೋಣ.

‘ನಾವೆಲ್ಲರೂ ಈಗ ಗುರುದೇವರ ರಥೋತ್ಸವದ ಮೆರವಣಿಗೆಯ ತಾಳ ಪಡೆ ಮತ್ತು ಧ್ವಜ ಪಡೆಯ ಸಾಧಕರಾಗೋಣ. ಸಾಕ್ಷಾತ್‌ ಆದಿನಾರಾಯಣನ ನಾಮಸಂಕೀರ್ತನೆಯನ್ನು ಹಾಡುತ್ತಾ, ಈಗ ನಾವು ಕೈಗಳಲ್ಲಿ ತಾಳ ಮತ್ತು ಧ್ವಜವನ್ನು ಹಿಡಿದುಕೊಂಡು ‘ಶ್ರೀಮನ್ನಾರಾಯಣ ನಾರಾಯಣ ಹರಿ ಹರಿ’ ಎಂದು ಹೇಳುತ್ತಾ ಮುಂದೆ ಮುಂದೆ ಹೋಗುತ್ತಿದ್ದೇವೆ. ನಾವು ಅಖಂಡವಾಗಿ ಗುರುದೇವರ ನಾಮದಲ್ಲಿ ಮುಳುಗಿದ್ದೇವೆ. ಹೇ ನಾರಾಯಣಾ, ನಿನ್ನನ್ನು ನಾವು ಭಜಿಸುತ್ತಿದ್ದೇವೆ. ಹೇ ಲಕ್ಷ್ಮೀನಾರಾಯಣಾ, ನಿನ್ನ ನೇತ್ರಗಳು ಕಮಲದಂತೆ ಸುಂದರವಾಗಿವೆ. ನೀನು ನಮ್ಮಂತಹ ಪಾಮರರ ಸಂಕಟಗಳನ್ನು ದೂರಗೊಳಿಸುತ್ತೀಯಾ, ನಮ್ಮಲ್ಲಿರುವ ಅಜ್ಞಾನರೂಪಿ ಅಂಧಕಾರವನ್ನು ದೂರಗೊಳಿಸಿ ನಮಗೆ ನಿನ್ನ ಅಸ್ತಿತ್ವದ ಶುದ್ಧ ಜ್ಞಾನಧಾರೆಯಲ್ಲಿ ಸಂಪೂರ್ಣವಾಗಿ ನೆನೆಯುವಂತೆ ಮಾಡುತ್ತೀಯಾ. ನಾವು ನಿನ್ನ ಚರಣಗಳಿಗೆ ಕೃತಜ್ಞರಾಗಿದ್ದೇವೆ. ತದನಂತರ ನಾವು ಹೇಳುತ್ತೇವೆ, ‘ಹೇ ಅಚ್ಯುತಾ, ನಿನಗೆ ಅನಂತ ಕೋಟಿ ನಮಸ್ಕಾರಗಳು. ಹೇ ಜನಾರ್ಧನಾ ನಿನಗೆ ನಮ್ಮ ಭಾವಪೂರ್ಣ ನಮಸ್ಕಾರ’ ! ನಾವು ಈಗ ‘ಸ್ವ’ದ ಅಸ್ತಿತ್ವವನ್ನೇ ಮರೆತಿದ್ದೇವೆ; ಅಲ್ಲದೇ ಈಗ ನಾವು ಭೂಮಿಯ ಮೇಲೆಯೂ ಉಳಿದಿಲ್ಲ. ನಿಮ್ಮ ಈ ದಿವ್ಯ ಮೆರವಣಿಗೆಯು ಸಾಕ್ಷಾತ್‌ ವೈಕುಂಠದ ಒಂದು ರಮ್ಯ ಮೈದಾನದಲ್ಲಿ ಪ್ರಾರಂಭವಾಗಿದೆ. ಅಲ್ಲಿ ಅನೇಕ ದೇವ-ದೇವತೆಗಳು ಪುಷ್ಪವೃಷ್ಟಿ ಮಾಡುತ್ತಿದ್ದಾರೆ. ಕೆಲವು ಸಾಧಕರ ಹಿಂದೆ ನಾರಾಯಣಸ್ವರೂಪ ಗುರುದೇವರ ರಥವಿದೆ. ಇನ್ನೂ ಕೆಲವು ಸಾಧಕರ ಮುಂದೆ ಆ ರಥವಿದೆ. ಇದರ ಭಾವಾರ್ಥವೇನು ? ಅಂದರೆ ‘ಗುರುದೇವರು ನಮ್ಮ ಮುಂದೆ ಮತ್ತು ಹಿಂದೆ ಯಾವಾಗಲೂ ಇದ್ದಾರೆ’ ಎಂದಾಗುತ್ತದೆ. ನಾವು ಸಮಷ್ಟಿ ಸೇವೆಯನ್ನು ಮಾಡುವಾಗ ಅವರು ನಮ್ಮ ಹಿಂದೆ ಇದ್ದು, ನಮಗೆ ಊರ್ಜೆಯನ್ನು ನೀಡಿ, ಅವರೇ ಸೇವೆಯನ್ನು  ಮಾಡಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ನಮ್ಮ ಮುಂದೆ ಇದ್ದು ಸಾಧನೆಯ ಸೂಕ್ತ ಮಾರ್ಗದಲ್ಲಿ ಮುಂದುವರಿಯುವಂತೆ ಮಾಡುತ್ತಿದ್ದಾರೆ. ಎಷ್ಟು ಸಶಕ್ತವಾಗಿದೆ ನಮ್ಮ ಈ ಸಂಬಂಧ. ಸಾಕ್ಷಾತ್‌ ಶ್ರೀಮನ್ನಾರಾಯಣನೇ ನಮ್ಮ ಮುಂದೆ, ಹಿಂದೆ ಯಾವಾಗಲೂ ಮತ್ತು ಚಿರಂತನವೂ ಇರುತ್ತಾರೆ’ ಎಂದೆನಿಸಿ, ನಾವು ‘ಹೇ ಶ್ರೀಹರಿ, ನೀನು ಎಷ್ಟು ಸುಂದರನಾಗಿದ್ದೀಯಾ. ನೀನು ಮುಕುಂದನಾಗಿದ್ದೀಯಾ ಮತ್ತು ನೀನೇ ಅಂತರ್ಯಾಮಿಯ ನಾರಾಯಣನಾಗಿದ್ದೀಯಾ’, ಎಂದು ಅನುಭವಿಸುತ್ತಿದ್ದೇವೆ. ನಮ್ಮ ಮನಸ್ಸು ಈಗ ಸಂಪೂರ್ಣವಾಗಿ ಶ್ರೀಹರಿಮಯವಾಗಿದೆ. ನಮ್ಮ ಕೃತಜ್ಞತಾಭಾವ ಜಾಗೃತವಾಗಿದೆ’.

೪. ಬ್ರಹ್ಮೋತ್ಸವ ಮುಗಿದ ಬಳಿಕ ಗುರುದೇವರು ಪುನಃ ಆಶ್ರಮಕ್ಕೆ ಯಾವ ವಾಹನದಿಂದ ಬಂದರೋ ‘ಈ ವಾಹನ ನಾವಾಗಿದ್ದೇವೆ’ ಎನ್ನುವ ಭಾವವಿಡೋಣ

‘ನಮ್ಮ ಜೀವನವೆಂದರೆ ವಾಹನವೇ ಆಗಿದೆ ಮತ್ತು ಅದರ ‘ಸ್ಟೇರಿಂಗ್’ (ನಾಲ್ಕು ಚಕ್ರದ ದಿಕ್ಕನ್ನು ಬದಲಾಯಿಸಲು ಬಳಸುವ ಚಕ್ರ) ಪರಾತ್ಪರ ಗುರುದೇವರ ಕೈಯಲ್ಲಿದೆ ಮತ್ತು ಅವರು ನಮ್ಮನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುತ್ತಾರೆ. ನಾವು ತಪ್ಪಿದಾಗ, ‘ಬ್ರೇಕ್’ (ವಾಹನದ ವೇಗವನ್ನು ಕಡಿಮೆ ಮಾಡಲು ಬಳಸುವ ಸ್ವಿಚ್) ಹಾಕಿ, ನಮ್ಮನ್ನು ತಪ್ಪು ಮಾಡುವುದರಿಂದ ತಡೆಯುತ್ತಾರೆ. ನಾವು ಮಾಡುತ್ತಿರುವ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನವನ್ನು ನೋಡಿ, ಅವರು ‘ಆಕ್ಸಿಲೇಟರ’ನ್ನು (ವಾಹನದ ವೇಗವನ್ನು ಹೆಚ್ಚಿಸಲು ಇರುವ ಕಾಲಿನಿಂದ ಒತ್ತುವ ಪ್ಲೇಟ್) ಒತ್ತಿ ನಮ್ಮನ್ನು ವೇಗವಾಗಿ ಸಾಧನೆಯಲ್ಲಿ ಮುಂದಕ್ಕೆ ಕರೆದುಕೊಂಡು ಹೋಗಲಿದ್ದಾರೆ. ಈಗ ನಾವು ಆ ಭಕ್ತಿವಿಶ್ವವನ್ನು ಅನುಭವಿಸೋಣ. ನಮ್ಮ ಕಿವಿಗಳಿಗೆ ‘ಎಲ್ಲೆಡೆ ಗೋವಿಂದನ ನಾಮ ಸಂಕೀರ್ತನಮ್‌ ! ಗೋವಿಂದಾ ! ಗೋವಿಂದಾ !’ ಈ ಅತ್ಯಂತ ಭಕ್ತಿಮಯ ಜಯಘೋಷ ಕೇಳಿಸುತ್ತಿದೆ. ನಮ್ಮ ಮನಸ್ಸು ಶ್ರೀಹರಿಯ ದರ್ಶನಕ್ಕಾಗಿ ಅತ್ಯಂತ ಆತುರವಾಗಿದೆ. ಈಗ ಸಚ್ಚಿದಾನಂದ ಗುರುದೇವರು ತಮ್ಮ ಆಸನದಿಂದ ಎದ್ದು ಆ ಶ್ವೇತವರ್ಣದ ವಾಹನದ ದಿಕ್ಕಿನಲ್ಲಿ ಹೋಗುತ್ತಿದ್ದಾರೆ. ಆ ಸಮಯದಲ್ಲಿ ನಮ್ಮ ಮನಸ್ಸು ಅತ್ಯಂತ ವ್ಯಾಕುಲವಾಗಿದೆ. ಅವರು ಅವರ ಕಿರೀಟವನ್ನು ನಿಧಾನವಾಗಿ ತೆಗೆದು ಸಾಧಕರ ಕೈಗೆ ಕೊಟ್ಟಿದ್ದಾರೆ. ಅವರು ನಿಧಾನವಾಗಿ ವಾಹನದಲ್ಲಿ ಪ್ರವೇಶಿಸುತ್ತಿದ್ದಾರೆ. ಆ ವಾಹನವು ಧನ್ಯತೆಯ ಭಾವ ಹೊಂದಿದ್ದು, ಅದರ ಭಾವಜಾಗೃತಿಯಾಗುತ್ತಿದೆ. ವಾಹನವು ಗುರುಚರಣಗಳ ಸ್ಪರ್ಶವಾಗಲು ಅತ್ಯಂತ ಆತುರಗೊಂಡಿದೆ’.

೫. ಪ್ರಾರ್ಥನೆ ಮತ್ತು ಕೃತಜ್ಞತೆ 

ಹೇ ಜಗನ್ನಾಥ, ಹೇ ಕೃಪಾಳು, ಹೇ ಸಚ್ಚಿದಾನಂದ ಗುರುದೇವಾ, ನಿಮ್ಮ ಅಪಾರ ಕೃಪೆಯಿಂದ ನಮಗೆ ದೈವೀ ಸತ್ಸಂಗದ ಮಾಧ್ಯಮದಿಂದ ಮತ್ತೊಮ್ಮೆ ನಿಮ್ಮ’ನ ಭೂತೊ ನ ಭವಿಷ್ಯ’ (ಈ ಹಿಂದೆ ಎಂದಿಗೂ ಆಗದಿರುವ ಮತ್ತು ಭವಿಷ್ಯದಲ್ಲಿ ಎಂದಿಗೂ ಆಗದಿರುವ) ಆಗಿರುವ ಬ್ರಹ್ಮೋತ್ಸವವನ್ನು ಅನುಭವಿಸಲು ಸಿಕ್ಕಿತು. ಈ ದೈವೀ ಸತ್ಸಂಗದಲ್ಲಿ ಅನುಭವಿಸಿದ ಈ ಭಾವಾವಸ್ಥೆ  ಬೇರೆಯೇ ಆಗಿತ್ತು. ಹೇ ಗುರುದೇವಾ, ನಿಮ್ಮ ಸುಕೋಮಲ ಚರಣಗಳಿಗೆ ಕೋಟಿಶಃ ಕೃತಜ್ಞತೆ’.

– ಗುರುಚರಣಿ

ಕು. ಅಪಾಲಾ ಔಂಧಕರ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೧೭ ವರ್ಷ ) ಮತ್ತು ಕು. ಪ್ರಾರ್ಥನಾ ಪಾಠಕ (ಈಗಿನ ಆಧ್ಯಾತ್ಮಿಕ ಮಟ್ಟ ಶೇ. ೬೮ ವಯಸ್ಸು ೧೩ ವರ್ಷ ) ಸನಾತನ ಆಶ್ರಮ, ರಾಮನಾಥಿ, ಗೋವಾ( ೨೧.೬.೨೦೨೩)

(ಈ ಲೇಖನವನ್ನು ಸಂಕಲನ ಮಾಡುವಾಗ ನಾವು ಈ ಭಾವಪ್ರಯೋಗವನ್ನು ಮಾಡಿದೆವು. ನಮಗೂ ಪುನಃ ಬ್ರಹ್ಮೋತ್ಸವದ ಆ ಅವರ್ಣನೀಯ ಭಾವಾವಸ್ಥೆ ಅನುಭವಿಸಲು ಸಿಕ್ಕಿತು. ಈ ಲೇಖನದ ಸಂಕಲನ ಮಾಡುವಾಗ ಭಾವಜಾಗೃತಿಯಾಗುತ್ತಿತ್ತು.’ – ಸೌ. ವಿದ್ಯಾ ಪಾಟೀಲ ಮತ್ತು ಶ್ರೀಮತಿ ಸಾಳುಂಕೆ)