ಗಣಪತಿಗೆ ಗರಿಕೆಗಳನ್ನು ಏಕೆ ಅರ್ಪಿಸಲಾಗುತ್ತದೆ ?

ಅನಲಾಸುರ ಹೆಸರಿನ ಅಸುರನು ತಪಶ್ಚರ್ಯ ಮಾಡಿ ಭಗವಾನ ಶಂಕರನಿಂದ ಅಜೇಯನಾಗಲು ವರ ಬೇಡಿದನು. ಅವನು ಉಪದ್ರವ ಕೊಡಲು ಪ್ರಾರಂಭಿಸಿದನು. ಆ ಸಮಯದಲ್ಲಿ ಎಲ್ಲರೂ ತಮ್ಮ ರಕ್ಷಣೆಗಾಗಿ ಗಣಪತಿಯನ್ನು ಸ್ತುತಿಸತೊಡಗಿದರು. ಆಗ ಗಣಪತಿಯು ಪ್ರಕಟನಾಗಿ ಪ್ರಚಂಡ ಸ್ವರೂಪವನ್ನು ಧಾರಣೆ ಮಾಡಿ ಆ ಅಸುರನನ್ನು ನುಂಗಿದನು. ಆ ಸಮಯದಲ್ಲಿ ಎಲ್ಲರೂ ತಮ್ಮ ರಕ್ಷಣೆಗಾಗಿ ಗಣಪತಿಯನ್ನು ಸ್ತುತಿಸತೊಡಗಿದರು. ಆಗ ಗಣಪತಿಯು ಪ್ರಕಟನಾಗಿ ಪ್ರಚಂಡ ಸ್ವರೂಪವನ್ನು ಧಾರಣೆ ಮಾಡಿ ಆ ಅಸುರನನ್ನು ನುಂಗಿದನು. ಆ ದೈತ್ಯನ ಪ್ರಖರವಾದ ಅಗ್ನಿಯಂತಿರುವ ಪ್ರಚಂಡ ಶರೀರವು ಗಣಪತಿಯ ಹೊಟ್ಟೆಯೊಳಗೆ ಹೋಗಿ ಗಣಪತಿಯ ಶರೀರ ಉರಿಯತೊಡಗಿತು ಮತ್ತು ಆ ಉರಿಯು ಏನು ಮಾಡಿದರೂ ಶಾಂತವಾಗುತ್ತಿರಲಿಲ್ಲ. ಚಂದ್ರನು ತನ್ನ ಶೀತಲತೆ ಕೊಟ್ಟನು, ಆದರೂ ದಾಹ ಶಾಂತ ವಾಗುತ್ತಿರಲಿಲ್ಲ ಅಷ್ಟರಲ್ಲಿ ಅಲ್ಲಿ ಕೆಲವು ಋಷಿಗಳು ಗರಿಕೆಗಳನ್ನು ತಂದರು. ಅವರು ಗಣಪತಿಯನ್ನು ಸ್ತುತಿಸಿದರು ಮತ್ತು ಭಾವಪೂರ್ಣ ಅಂತಃಕರಣದಿಂದ ಆ ಗರಿಕೆಗಳನ್ನು ಗಣಪತಿಯ ಮಸ್ತಕದ ಮೇಲೆ ಅರ್ಪಿಸಿದರು ಆಗ ದಾಹ ಶಾಂತವಾಯಿತು. ಆಗ ಗಣಪತಿಯು ಎಲ್ಲ ದೇವತೆಗಳಿಗೆ, ”ನನಗೆ ಗರಿಕೆಗಳು ತುಂಬಾ ಇಷ್ಟವಾಗುತ್ತವೆ” ಎಂದು ಹೇಳಿದನು. ಅಂದಿನಿಂದ ಎಲ್ಲ ದೇವರು ಗರಿಕೆಗಳನ್ನು ಅರ್ಪಿಸಿ ಗಣಪತಿಯ ಪೂಜೆ ಮಾಡಲು ಪ್ರಾರಂಭಿಸಿದರು.