ಸಾಧಕರಿಗೆ ಸೂಕ್ಷ್ಮ ಪರೀಕ್ಷಣೆ ಮಾಡಲು ಹೇಳಿ ಮನುಕುಲಕ್ಕಾಗಿ ಜ್ಞಾನವನ್ನು ತೆರೆಯುವ ಅದ್ವಿತೀಯ ಪರಾತ್ಪರ ಗುರು ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಸೂಕ್ಷ್ಮ ಜಗತ್ತಿನ ಬಗ್ಗೆ ಆದ ಅನುಭವವನ್ನು ಈ ಲೇಖನಮಾಲೆಯಲ್ಲಿ ನಾವು ನೋಡುತ್ತಿದ್ದೇವೆ. ಸಾಪ್ತಾಹಿಕ ಸಂಚಿಕೆ ೨೫/೫೦ರಲ್ಲಿ ಈ ಲೇಖನದ ಕೆಲವೊಂದು ಭಾಗವನ್ನು ನೋಡಿದೆವು, ಇಂದು ಮುಂದಿನ ಭಾಗವನ್ನು ನೋಡೋಣ. 

(ಭಾಗ ೧೨)

ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ :https://sanatanprabhat.org/kannada/123088.html
ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

೧. ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕಿಯರಿಗೆ ಯಮಲೋಕದ ಸೂಕ್ಷ್ಮ ಪರೀಕ್ಷಣೆ ಮಾಡಲು ಹೇಳುವುದು ಮತ್ತು ಆ ಸಮಯದಲ್ಲಿ ಸಾಧಕಿಯರಿಗೆ ಅರಿವಾದ ಅಂಶಗಳು

ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ಕೆಟ್ಟ ಶಕ್ತಿಗಳ ತೊಂದರೆಗಳ ಬಗ್ಗೆ ಹೊಸ ಹೊಸ ಜ್ಞಾನ ನೀಡಿದಂತೆ, ಅವರು ನಮಗೆ ಯಾರಾದರೊಬ್ಬ ವ್ಯಕ್ತಿಯ ಮೃತ್ಯುವಾದರೆ, ‘ಅವರ ಮೃತ್ಯುವಿನ ನಂತರದ ಚಲನೆ ಹೇಗಿರುತ್ತದೆ ?’, ಈ ಬಗ್ಗೆಯೂ ಸೂಕ್ಷ್ಮದಿಂದ ತಿಳಿದುಕೊಳ್ಳಲು ಹೇಳಿದರು.

ಒಂದು ಸಲ ನಾನು ಮತ್ತು ಸುಶ್ರೀ (ಕು.) ಕವಿತಾ ರಾಠಿವಡೆಕರ (ಈಗಿನ ಸೌ. ಕವಿತಾ ಅನಿಲ ಕಡಣೆ) (ಆಧ್ಯಾತ್ಮಿಕ ಮಟ್ಟ ಶೇ. ೬೬) ಫೋಂಡಾ (ಗೋವಾ)ದ ‘ಸುಖಸಾಗರ’ದಲ್ಲಿ ಸೇವೆಯನ್ನು ಮಾಡುತ್ತಿರುವಾಗ ಗುರುದೇವರು ನಮ್ಮನ್ನು ಕರೆದರು ಮತ್ತು ಯಮಲೋಕದ ಸೂಕ್ಷ್ಮ ಪರೀಕ್ಷಣೆ ಮಾಡಲು ಹೇಳಿದರು. ನಾವಿಬ್ಬರೂ ದೇವರಲ್ಲಿ ಪ್ರಾರ್ಥನೆ ಮಾಡಿ ಪರೀಕ್ಷಣೆ ಮಾಡಲು ಕುಳಿತೆವು. ಆ ಸಮಯದಲ್ಲಿ ನಮಗೆ ಕೆಳಗಿನ ಅಂಶಗಳು ಗಮನಕ್ಕೆ ಬಂದವು.

ಅ. ಮೊದಲು ನಮ್ಮ ಕಣ್ಣುಗಳು ಬಹಳ ಜಡವಾದವು. ನಮ್ಮ ತಲೆ ತಿರುಗಿದಂತಾಯಿತು. ಯಮಲೋಕದಲ್ಲಿ ಮೃತ್ಯುವಿನ ವಿಷಯದ ತಮೋಗುಣಿ ಸ್ಪಂದನಗಳಿರುವುದರಿಂದ ಹೀಗಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿತು.

ಆ. ಸ್ವಲ್ಪ ಸಮಯದ ನಂತರ ನಮಗೆ ಮಸುಕಾಗಿ ಏನೋ ಕಾಣಿಸತೊಡಗಿತು.

ಇ. ಅಲ್ಲಿನ ವಾತಾವರಣದಲ್ಲಿ ಒಂದು ರೀತಿಯ ಉಸಿರುಗಟ್ಟಿಸುವ ಒತ್ತಡವಿತ್ತು. ಆ ಸಮಯದಲ್ಲಿ ನಮ್ಮ ಗಮನಕ್ಕೆ ಬಂದುದೇನೆಂದರೆ, ಮಾನವನ ಉಸಿರಾಟ ಸ್ತಬ್ಧವಾದ ಬಳಿಕವೇ ಅವನು ಅಲ್ಲಿಗೆ ಹೋಗುತ್ತಾನೆ; ಹಾಗಾಗಿ ನಮಗೆ ಉಸಿರುಗಟ್ಟಿದಂತಾಗುತ್ತಿತ್ತು.

ಈ. ಸ್ವಲ್ಪ ಸಮಯದ ನಂತರ ಪರಾತ್ಪರ ಗುರು ಡಾಕ್ಟರರು ನಾವು ಕುಳಿತಲ್ಲಿಗೆ ಬಂದರು ಮತ್ತು ಅವರು ನಮಗೆ ‘ಕಣ್ಣುಗಳ ಮೇಲೆ ಕಪ್ಪು ಬಟ್ಟೆಯ ಪಟ್ಟಿಯನ್ನು ಕಟ್ಟಿಕೊಂಡು ಪರೀಕ್ಷಣೆ ಮಾಡಿ’, ಎಂದು ಹೇಳಿದರು. ಕಣ್ಣುಗಳ ಮೇಲೆ ಕಪ್ಪುಬಟ್ಟೆಯ ಪಟ್ಟಿಯನ್ನು ಕಟ್ಟಿಕೊಂಡ ನಂತರ ಎಲ್ಲ ತಮೋಗುಣಿ ಸ್ಪಂದನಗಳು ಈ ಕಪ್ಪು ಬಟ್ಟೆಯ ಪಟ್ಟಿಯ ಕಡೆಗೆ ಆಕರ್ಷಿತವಾದುದರಿಂದ ನಮಗೆ ಯಮಲೋಕದ ತಮೋಗುಣಿ ಸ್ಪಂದನಗಳೊಂದಿಗೆ ಏಕರೂಪವಾಗಲು ಸಾಧ್ಯವಾಗತೊಡಗಿತು.

ಉ. ಆ ಸಮಯದಲ್ಲಿ ಸುಶ್ರೀ (ಕು.) ಕವಿತಾ ರಾಠೀವಡೇಕರ  (ಈಗಿನ ಸೌ. ಕವಿತಾ ಅನಿಲ ಕಡಣೆ) (ಆಧ್ಯಾತ್ಮಿಕ ಮಟ್ಟ ಶೇ. ೬೬) ಇವರು ತಮಗೆ ಕಾಣಿಸಿದ ಯಮಲೋಕದ ಬಗ್ಗೆ ಬಹಳ ಚೆನ್ನಾಗಿ ವರ್ಣಿಸಿದರು. ಅವರಿಗೆ ಮೊದಲು ಯಮದೇವರು ಕಾಣಿಸತೊಡಗಿದರು. ಸ್ವಲ್ಪ ಸಮಯದ ನಂತರ ಅವರಿಗೆ ಯಮದೇವರ ಕೋಣದ ಒಂದೇ ಒಂದು ಕೋಡು ಮಸುಕಾಗಿ ಕಾಣಿಸತೊಡಗಿತು. ನನಗೂ ಆ ಸ್ಪಂದನಗಳನ್ನು ಅದೇ ಪದ್ಧತಿಯಲ್ಲಿ ಅನುಭವಿಸಲು ಸಾಧ್ಯವಾಯಿತು.

ಊ. ನಮಗೆ ಬಹಳ ಸಮಯದ ವರೆಗೆ ಯಮಲೋಕದ ಪರೀಕ್ಷಣೆಯನ್ನು ಮಾಡಲು ಸಾಧ್ಯವಾಗಲಿಲ್ಲ; ಏಕೆಂದರೆ ನಮ್ಮ ದೇಹಕ್ಕೆ ಎಷ್ಟು ಜಡತ್ವ ಬಂದಿತ್ತು ಎಂದರೆ, ನಮಗೆ ಬಹಳ ಹೊತ್ತು ಪರೀಕ್ಷಣೆ ಮಾಡಲು ಸಾಧ್ಯವಾಗಲಿಲ್ಲ; ಹಾಗಾಗಿ ನಾವು ಪರೀಕ್ಷಣೆಯನ್ನು ನಿಲ್ಲಿಸಿದೆವು.

೨. ಪರಾತ್ಪರ ಗುರು ಡಾಕ್ಟರರು ಸಾಧಕಿಯರಿಗೆ ಸಪ್ತಲೋಕ ಮತ್ತು ಸಪ್ತಪಾತಾಳಗಳ ಪರೀಕ್ಷಣೆ ಮಾಡಲು ಹೇಳುವುದು

ಈ ರೀತಿ ಗುರುದೇವರು ನಮ್ಮಿಂದ ಸೂಕ್ಷ್ಮ ಲೋಕಗಳ ಬಗ್ಗೆ ತಿಳಿದುಕೊಳ್ಳುವ ವಿಷಯದಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿಸಿಕೊಂಡರು. ಅವರು, ”ನಿಧಾನವಾಗಿ ನಮಗೆ ಸಪ್ತಲೋಕ ಮತ್ತು ಸಪ್ತಪಾತಾಳಗಳಲ್ಲಿರುವ ವಾತಾವರಣದ ಬಗ್ಗೆ ವಿವರವಾಗಿ ಹೇಳಲು ಸಾಧ್ಯವಾಗಬೇಕು. ಮನುಕುಲಕ್ಕೆ ಈ ವಿಷಯ ಗೊತ್ತಿಲ್ಲ”, ಎಂದು ಹೇಳುತ್ತಿದ್ದರು. ಸಪ್ತಪಾತಾಳಗಳ ಪರೀಕ್ಷಣೆಯನ್ನು ಮಾಡುವಾಗ ನಮಗೆ ಬಹಳ ತೊಂದರೆಯಾಗುತ್ತಿತ್ತು.

೩. ಪರಾತ್ಪರ ಗುರು ಡಾಕ್ಟರರು ‘ಸೂಕ್ಷ್ಮ ಲೋಕಗಳ ಘಟನೆ, ಅವುಗಳ ಕಾರ್ಯಕಾರಣಭಾವ’ ಇತ್ಯಾದಿಗಳ ಬಗೆಗಿನ ಜ್ಞಾನವನ್ನು ಬರವಣಿಗೆ ಮೂಲಕ ತೆರೆದಿಡುವುದು

ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮವನ್ನು ತಿಳಿಯಬಲ್ಲ ಸಾಧಕರು ಮಾಡಿದ ಸೂಕ್ಷ್ಮ ಲೋಕಗಳ ಅನೇಕ ಪರೀಕ್ಷಣೆಗಳ ಬರವಣಿಗೆಯ ಮೂಲಕ ಮನುಕುಲದ ಎದುರು ‘ಆ ಲೋಕಗಳಲ್ಲಿನ ಅನೇಕ ಘಟನೆಗಳು, ಅವುಗಳ ಕಾರ್ಯಕಾರಣಭಾವ,  ಕೆಟ್ಟ ಶಕ್ತಿ ಮತ್ತು ದೈವೀ ಶಕ್ತಿಗಳೊಂದಿಗೆ ಅವುಗಳಿಗಿರುವ ಸಂಬಂಧ’ ತೆರೆದಿಡಲು ಆರಂಭಿಸಿದರು. ಇವುಗಳ ಬಗ್ಗೆ ಕೆಲವು ಗ್ರಂಥಗಳನ್ನು ರಚಿಸಬಹುದಾದಷ್ಟು ಬರವಣಿಗೆ ಸನಾತನ ಸಂಸ್ಥೆಯಲ್ಲಿ ಸಂಗ್ರಹಿಸಲಾಗಿದೆ. ಯೋಗ್ಯ ಸಮಯದ ಬಂದಾಗ ಈ ಗ್ರಂಥಗಳೂ ತಮ್ಮ ಹೊಸ ರೂಪದೊಂದಿಗೆ ಸಮಾಜದ ಮುಂದೆ ಬರಲಿವೆ. ಆಗ ಈ ಮಾಹಿತಿಯು ಸಮಾಜಕ್ಕೆ ಸಂಪೂರ್ಣವಾಗಿ ಹೊಸದಾಗಿರುತ್ತದೆ. ‘ಇದರಿಂದ ಅನೇಕ ಜಿಜ್ಞಾಸುಗಳು ಸೃಷ್ಟಿಯಾಗುವರು ಮತ್ತು ಸಾಧನೆ ಮಾಡಲು ಪ್ರವೃತ್ತರಾಗುವರು’, ಎಂಬುದರಲ್ಲಿ ಸಂದೇಹವಿಲ್ಲ.’

(ಮುಂದುವರಿಯುವುದು)

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳನಾಡು. (೮.೨.೨೦೨೨)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.