ರಾಮನಾಥಿಯ (ಗೋವಾ) ಸನಾತನ ಆಶ್ರಮದ ಧ್ಯಾನಮಂದಿರದಲ್ಲಿ ಮಾಡಲಾದ ಅಗ್ನಿಹೋತ್ರದ ವಿಷಯದಲ್ಲಿ ಮಾಡಿದ ಸಂಶೋಧನೆ !

ಅಗ್ನಿಹೋತ್ರದ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ 

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರಿ ರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಯ ಮಹಾನ್ ಸಮಷ್ಟಿ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಅಡ್ಡಿ ಆತಂಕಗಳನ್ನು ತಂದೊಡ್ಡಲು ದೊಡ್ಡ ದೊಡ್ಡ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ನಿರಂತರವಾಗಿ ಆಕ್ರಮಣಗಳನ್ನು ಮಾಡುತ್ತವೆ. ಕಳೆದ ೨೦ ವರ್ಷಗಳಿಂದ ನಡೆದಿರುವ ಈ ‘ದೇವಾಸುರರ ಯುದ್ಧ ಈಗ ಅಂತಿಮ ಹಂತವನ್ನು ತಲುಪಿದೆ. ನವೆಂಬರ್ ೨೦೧೯ ರಿಂದ ಸನಾತನದ ರಾಮನಾಥಿ ಆಶ್ರಮದ ಧ್ಯಾನ ಮಂದಿರದ ಮೇಲೆ ಈ ಸೂಕ್ಷ್ಮಯುದ್ಧದ ಕರಿನೆರಳು ಆವರಿಸಲು ಪ್ರಾರಂಭವಾಯಿತು. ಕೆಟ್ಟ ಶಕ್ತಿಗಳ ಸೂಕ್ಷ್ಮ ಆಕ್ರಮಣಗಳಿಂದ ಧ್ಯಾನಮಂದಿರದ ಮೇಲೆ ತೊಂದರೆದಾಯಕ ಶಕ್ತಿಯ ಆವರಣ ಬಂದಿರುವುದು ಗಮನಕ್ಕೆ ಬಂದಿತು. ಆಶ್ರಮದ ಧ್ಯಾನ ಮಂದಿರವು ಚೈತನ್ಯದ ಸ್ರೋತವಾಗಿದೆ. ಧ್ಯಾನಮಂದಿರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ನಾಶಪಡಿಸಲು ಮಹರ್ಷಿಗಳು, ಹಾಗೆಯೇ ಕೆಲವು ಸಂತರು ಆಗಾಗ ನಾಮಜಪಾದಿ ಉಪಾಯಗಳನ್ನು ಹೇಳುತ್ತಾರೆ.

ಜುಲೈ ೨೦೨೦ ರಲ್ಲಿ ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಧ್ಯಾನಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಅಗ್ನಿಹೋತ್ರವನ್ನು ಮಾಡಲು ಹೇಳಿದರು. ಅದರಂತೆ ಜುಲೈ ೨೦೨೦ ರಿಂದ ಸಪ್ಟೆಂಬರ್ ೨೦೨೦ ವರೆಗೆ ಧ್ಯಾನ ಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಅಗ್ನಿಹೋತ್ರವನ್ನು ಮಾಡಲಾಯಿತು. ಧ್ಯಾನಮಂದಿರದಲ್ಲಿ ಮಾಡಿದ ಅಗ್ನಿಹೋತ್ರದ ಸಂದರ್ಭದಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ಮಾಡಲು ೨೨.೭.೨೦೨೦ ರಂದು ‘ಯುನಿವರ್ಸಲ್ ಔರಾ ಸ್ಕ್ಯಾನರ್(ಯು.ಎ.ಎಸ್) ಉಪಕರಣದ ಮೂಲಕ ಪರೀಕ್ಷಣೆಯನ್ನು ನಡೆಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಸನಾತನದ ಶೇ. ೬೨ ರಷ್ಟು ಮಟ್ಟದ ಸಾಧಕಿಯು ಧ್ಯಾನಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಅಗ್ನಿಹೋತ್ರವನ್ನು ಮಾಡಲು ಪ್ರಾರಂಭಿಸಿದಳು. ೨೨.೭.೨೦೨೦ ರಂದು ಧ್ಯಾನ ಮಂದಿರದಲ್ಲಿ ಅಗ್ನಿಹೋತ್ರ ಮಾಡುವ ಮೊದಲು ಮತ್ತು ಅಗ್ನಿಹೋತ್ರವನ್ನು ಮಾಡಿದ ಬಳಿಕ ಅಗ್ನಿಹೋತ್ರ ಮಾಡುವ ಸಾಧಕಿ, ಹಾಗೆಯೇ ಅಗ್ನಿಹೋತ್ರದ ಪಾತ್ರೆ ಮತ್ತು ಅದರಿಂದ ಹೊರಬರುವ ಧೂಮದ ಪರೀಕ್ಷಣೆಯನ್ನು ಮಾಡಲಾಯಿತು.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿಗಳ ಸಂದರ್ಭದಲ್ಲಿ ನಿರೀಕ್ಷಣೆಗಳ ವಿಶ್ಲೇಷಣೆ: ಆಶ್ರಮದ ಧ್ಯಾನಮಂದಿರದಲ್ಲಿ ಅಗ್ನಿಹೋತ್ರ ಮಾಡಿದ ಬಳಿಕ ಅಗ್ನಿಹೋತ್ರ ಮಾಡಿದ ಸಾಧಕಿ, ಹಾಗೆಯೇ ಅಗ್ನಿಹೋತ್ರ ಪಾತ್ರೆ ಮತ್ತು ಅದರಿಂದ ಹೊರ ಬರುವ ಹೊಗೆ ಇವುಗಳ ಮೇಲಾಗಿರುವ ಪರಿಣಾಮ

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

. ಅಗ್ನಿಹೋತ್ರ ಮಾಡಿದ ಬಳಿಕ ಸಾಧಕಿಯಲ್ಲಿನ ನಕಾರಾತ್ಮಕ ಶಕ್ತಿ ಇಲ್ಲವಾಗಿ, ಅವಳಲ್ಲಿದ್ದ ಸಕಾರಾತ್ಮಕ ಶಕ್ತಿಯಲ್ಲಿ ಬಹಳಷ್ಟು ಹೆಚ್ಚಳವಾಯಿತು.

೨. ಅಗ್ನಿಹೋತ್ರದ ಬಳಿಕ ಅಗ್ನಿಹೋತ್ರದ ಪಾತ್ರೆ ಮತ್ತು ಅದರಿಂದ ಹೊರಬರುವ ಧೂಮದಲ್ಲಿದ್ದ ಸಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಯಿತು.

. ಅಗ್ನಿಹೋತ್ರದ ಪಾತ್ರೆಯಲ್ಲಿರುವ ಅಗ್ನಿ ಆರಿದ ಬಳಿಕ ಅಗ್ನಿಹೋತ್ರದ ಪಾತ್ರೆ ಮತ್ತು ಅದರಿಂದ ಹೊರಬರುವ ಧೂಮದಲ್ಲಿ ಸಕಾರಾತ್ಮಕ ಶಕ್ತಿ ಕಡಿಮೆಯಾಗಿ, ಅದರಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಶಕ್ತಿ ನಿರ್ಮಾಣವಾಯಿತು.

. ಅಗ್ನಿಹೋತ್ರದ ಪಾತ್ರೆಯಲ್ಲಿನ ವಿಭೂತಿಯಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ ಕಂಡುಬಂದಿತು.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರಿಯ ವಿಶ್ಲೇಷಣೆ

೨ ಅ. ಅಗ್ನಿಹೋತ್ರ  ಮಾಡಿದ ಬಳಿಕ ಸಾಧಕಿಯಲ್ಲಿನ ನಕಾರಾತ್ಮಕ ಶಕ್ತಿಯು ಇಲ್ಲವಾಗಿ, ಅವಳಲ್ಲಿನ ಸಕಾರಾತ್ಮಕ ಶಕ್ತಿಯಲ್ಲಿ ಬಹಳಷ್ಟು ಹೆಚ್ಚಳವಾಗುವುದು : ಅಗ್ನಿಹೋತ್ರವು ಯಜ್ಞದ ಎಲ್ಲಕ್ಕಿಂತ ಮೊದಲಿನ, ಸರ್ವಾಂಗಪೂರ್ಣ ಸಹಜರೂಪವಾಗಿದೆ ಹಾಗೂ ಆಚರಿಸಲು ಸುಲಭವೂ ಆಗಿದೆ. ಅಗ್ನಿಹೋತ್ರದಿಂದ ವಾತಾವರಣದಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವನ್ನು ಶುದ್ಧ ಮತ್ತು ಚೈತನ್ಯ ಮಯವಾಗುತ್ತದೆ. ಅಲ್ಲದೇ ಅಗ್ನಿಹೋತ್ರ ಮಾಡುವ ವ್ಯಕ್ತಿಯ ಸುತ್ತಲೂ ಸಂರಕ್ಷಕ ಕವಚ ನಿರ್ಮಾಣವಾಗುತ್ತದೆ. ಸನಾತನದ ಶೇ. ೬೨ ರಷ್ಟು ಮಟ್ಟದ ಸಾಧಕಿಯು ಸನಾತನದ ರಾಮನಾಥಿ ಆಶ್ರಮದ ಧ್ಯಾನಮಂದಿರದಲ್ಲಿ ಅತ್ಯಂತ ಭಾವಪೂರ್ಣ ರೀತಿಯಲ್ಲಿ ಅಗ್ನಿಹೋತ್ರವನ್ನು ಮಾಡಿದಳು. ಅದರಿಂದ ಪ್ರಕ್ಷೇಪಿಸಿದ ಚೈತನ್ಯವನ್ನು ಅವಳು ಗ್ರಹಣ ಮಾಡಿದ್ದರಿಂದ ಅವಳ ಸುತ್ತಲಿನ ತೊಂದರೆದಾಯಕ ಸ್ಪಂದನಗಳ ಆವರಣನಷ್ಟವಾಗಿ ಅವಳ ಸುತ್ತಲೂ ಸಂರಕ್ಷಕ ಕವಚ ನಿರ್ಮಾಣವಾಯಿತು.

೨ ಆ. ಅಗ್ನಿಹೋತ್ರವನ್ನು ಮಾಡಿದ ಬಳಿಕ ಅಗ್ನಿಹೋತ್ರ ಪಾತ್ರೆ ಮತ್ತು ಅದರಿಂದ ಹೊರ ಬರುವ ಹೊಗೆಯಲ್ಲಿನ ಸಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಗುವುದು : ಅಗ್ನಿಹೋತ್ರ ಪಾತ್ರೆಯಲ್ಲಿ ಗೋಮಯದ (ಹಸುವಿನ ಸೆಗಣಿಯ) ಬೆರಣಿಗಳ ಚಿಕ್ಕ ತುಂಡುಗಳನ್ನು ಇಟ್ಟು ಅದರ ಮೇಲೆ ಸ್ವಲ್ಪ ಹಸುವಿನ ತುಪ್ಪವನ್ನು ಹಾಕಿ ಅಗ್ನಿಯನ್ನು ಪ್ರಜ್ವಲಿಸಲಾಗುತ್ತದೆ. ಅದರಲ್ಲಿ ಮಂತ್ರ ಪಠಿಸುತ್ತ ತುಪ್ಪ ಮಿಶ್ರಿತ ಚಿಟಿಕೆಯಷ್ಟು ಅಖಂಡ ಅಕ್ಕಿಯನ್ನು ೩ ಸಲ ಆಹುತಿ ಕೊಡಲಾಗುತ್ತದೆ. ಈ ಸಾತ್ವಿಕ ಘಟಕಗಳಲ್ಲಿ ದೇವತೆಗಳ ತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ಕ್ಷಮತೆಯಿದೆ. ಅಗ್ನಿಹೋತ್ರದಿಂದ ದೇವತೆಗಳ ತತ್ತ್ವ ಆಕರ್ಷಿಸಲ್ಪಟ್ಟು ಅದು ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತದೆ. ಅದರಿಂದ ವಾತಾವರಣ ಶುದ್ಧ ಮತ್ತು ಪವಿತ್ರವಾಗುತ್ತದೆ. ಧ್ಯಾನಮಂದಿರದಲ್ಲಿ ಮಾಡಿದ ಅಗ್ನಿಹೋತ್ರದಿಂದ ಪ್ರಕ್ಷೇಪಿಸಿದ ಚೈತನ್ಯದ ಸಕಾರಾತ್ಮಕ ಪರಿಣಾಮವು ಅಗ್ನಿಹೋತ್ರ ಪಾತ್ರೆ ಮತ್ತು ಅದರಿಂದ ಹೊರಬರುವ ಹೊಗೆಯ ಮೇಲೆ ಆಗಿ ಅವೂ ಚೈತನ್ಯದಿಂದ ತುಂಬಿಕೊಂಡವು.

ಸೌ. ಮಧುರಾ ಕರ್ವೆ

೨ ಇ ಅಗ್ನಿಹೋತ್ರದ ಪಾತ್ರೆಯಲ್ಲಿನ ಅಗ್ನಿ ಆರಿದ ಬಳಿಕ ಅಗ್ನಿಹೋತ್ರ ಪಾತ್ರೆ ಮತ್ತು ಅದರಿಂದ ಹೊರಬರುವ ಧೂಮದಲ್ಲಿನ ಸಕಾರಾತ್ಮಕ ಶಕ್ತಿ ಕಡಿಮೆಯಾಗಿ, ಅವುಗಳಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ ನಿರ್ಮಾಣವಾಗಿರುವುದರ ಕಾರಣ: ಸಾಮಾನ್ಯವಾಗಿ ಅಗ್ನಿಹೋತ್ರದ ಪರಿಣಾಮವು ಮುಂದೆ ಕೆಲವು ಗಂಟೆಗಳ ಕಾಲ  ಉಳಿಯುತ್ತದೆ. ಆಶ್ರಮದ ಧ್ಯಾನಮಂದಿರದಲ್ಲಿ ಅಗ್ನಿಹೋತ್ರ ಮಾಡಿದ ಬಳಿಕ (ಅಂದರೆ ಸುಮಾರು ೧೦ ನಿಮಿಷಗಳ ಬಳಿಕ) ಪರೀಕ್ಷಣೆಯನ್ನು ಮಾಡಿದಾಗ ಅಗ್ನಿಹೋತ್ರದ ಪಾತ್ರೆ ಮತ್ತು ಅದರಿಂದ ಹೊರಬರುವ ಧೂಮದ ಮೇಲೆ ಸಕಾರಾತ್ಮಕ ಪರಿಣಾಮವಾಗಿರುವುದು ಕಂಡು ಬಂದಿತು. ತದನಂತರ ಸುಮಾರು ೧೫-೨೦ ನಿಮಿಷಗಳ ನಂತರ (ಅಗ್ನಿಹೋತ್ರ ಪಾತ್ರೆಯಲ್ಲಿನ ಅಗ್ನಿ ಆರಿದ ಬಳಿಕ ಅಗ್ನಿಹೋತ್ರ ಪಾತ್ರೆ ಮತ್ತು ಅದರಿಂದ ಹೊರಬರುವ ಧೂಮ ಇವುಗಳ ಪುನಃ ಪರೀಕ್ಷಣೆಯನ್ನು ಮಾಡಲಾಯಿತು, ಆಗ ಮಾತ್ರ ಅವುಗಳಲ್ಲಿನ ಸಕಾರಾತ್ಮಕ ಶಕ್ತಿ ಬಹಳಷ್ಟು ಕಡಿಮೆಯಾಗಿ, ಅವುಗಳಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ ನಿರ್ಮಾಣವಾಗಿರುವುದು ಕಂಡು ಬಂದಿತು. ಇದರ ಕಾರಣವೆಂದರೆ, ಧ್ಯಾನಮಂದಿರದ ಮೇಲೆ ಬಂದಿದ್ದ ತೊಂದರೆದಾಯಕ ಶಕ್ತಿಯ ಆವರಣ ಬಹಳ ದಟ್ಟವಾಗಿದ್ದು ಅದರ ಪ್ರಭಾವವೂ ಅತ್ಯಧಿಕವಾಗಿತ್ತು. ಇದರಿಂದ ಅಗ್ನಿಹೋತ್ರದ ಪರಿಣಾಮ ಕೇವಲ ೧೦-೧೫ ನಿಮಿಷಗಳ ವರೆಗೆ ಮಾತ್ರ ಉಳಿಯಿತು. ತದನಂತರ ಧ್ಯಾನಮಂದಿರದ ಮೇಲಿನ ತೊಂದರೆದಾಯಕ ಸ್ಪಂದನಗಳ ಪ್ರಭಾವದಿಂದ ಅಗ್ನಿಹೋತ್ರ ಪಾತ್ರೆ ಮತ್ತು ಅದರಿಂದ ಹೊರಬರುವ ಧೂಮದಲ್ಲಿರುವ ಸಕಾರಾತ್ಮಕ ಸ್ಪಂದನಗಳು ಕಡಿಮೆಯಾಗಿ ಅವು ನಕಾರಾತ್ಮಕ ಸ್ಪಂದನಗಳಿಂದ ತುಂಬಿಕೊಂಡವು. (ಈ ಕಾಲಾವಧಿಯಲ್ಲಿ ಇತರ ದಿನಗಳಲ್ಲಿ ಮಾಡಿದ ಪರೀಕ್ಷಣೆಯಿಂದಲೂ ಇದೇ ಕಂಡು ಬಂದಿತು)

೨ ಈ. ಅಗ್ನಿಹೋತ್ರ ಪಾತ್ರೆಯಲ್ಲಿನ ವಿಭೂತಿಯಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ ಕಂಡು ಬಂದಿರುವುದರ ಕಾರಣ : ಸಾಧಾರಣ ಅಗ್ನಿಹೋತ್ರ ಮಾಡಿದ ಬಳಿಕ ಅದರ ವಿಭೂತಿ (ಬೂದಿ) ಚೈತನ್ಯದಿಂದ ತುಂಬಿಕೊಂಡಿರುವುದರಿಂದ, ಆ ಚೈತನ್ಯದ ಲಾಭವಾಗಲು ಅದನ್ನು ಹಣೆಗೆ ಹಚ್ಚಿಕೊಳ್ಳುವುದು, ವಾಸ್ತುಶುದ್ಧಿಗಾಗಿ ಮನೆಯಲ್ಲಿ ವಿಭೂತಿಯನ್ನು ಊದುವುದು, ಗಿಡಗಳಿಗೆ ವಿಭೂತಿ ಮಿಶ್ರಿತ ನೀರನ್ನು ಹಾಕುವುದು ಇತ್ಯಾದಿಗಳಿಗಾಗಿ ಉಪಯೋಗಿಸಲಾಗುತ್ತದೆ. ವಿಭೂತಿಯ ಮೇಲೆ ತೊಂದರೆದಾಯಕ ಸ್ಪಂದನಗಳ ಆವರಣ ಬರಬಾರದೆಂದು ಅದನ್ನು ಡಬ್ಬಿಯಲ್ಲಿ ತುಂಬಿ ಸಾತ್ತ್ವಿಕ ಸ್ಥಳದಲ್ಲಿ ಇಡುತ್ತಾರೆ. ಅಗ್ನಿಹೋತ್ರ ಮಾಡಿದ ಬಳಿಕ ಸಾಧಾರಣವಾಗಿ ೨ ದಿನಗಳಲ್ಲಿಯೇ ವಿಭೂತಿಯನ್ನು ಉಪಯೋಗಿಸಿ  ಅದನ್ನು ಮುಗಿಸುವುದು ಬಹಳ ಒಳ್ಳೆಯದು. ಆದರೆ, ಆಶ್ರಮದ ಧ್ಯಾನಮಂದಿರದಲ್ಲಿ ಅಗ್ನಿಹೋತ್ರ ಮಾಡಿದ ಸುಮಾರು ೩ ಗಂಟೆಗಳ ಬಳಿಕ ಅಗ್ನಿಹೋತ್ರ ಪಾತ್ರೆಯಲ್ಲಿದ್ದ ವಿಭೂತಿಯ ಪರೀಕ್ಷಣೆ ಮಾಡಿದಾಗ ಅದರಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ ಕಂಡು ಬಂದಿತು. ಇದರಿಂದ ಧ್ಯಾನಮಂದಿರದ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣ ಎಷ್ಟು ದಟ್ಟವಾಗಿದೆ ಮತ್ತು ಅದರ ಪ್ರಭಾವ ಕೂಡ ಎಷ್ಟು ತೀವ್ರವಾಗಿದೆಯೆನ್ನುವುದು ಅರಿವಾಗುತ್ತದೆ. (ಈ ಕಾಲಾವಧಿಯಲ್ಲಿ ಇತರ ದಿನಗಳಂದು ಮಾಡಿದ ಪರೀಕ್ಷಣೆಯಿಂದಲೂ ಇದೇ ಕಂಡು ಬಂದಿತು) ಸ್ವಲ್ಪದರಲ್ಲಿ ಆಶ್ರಮದ ಧ್ಯಾನಮಂದಿರವು ಚೈತನ್ಯದ ಸ್ರೋತ ವಾಗಿದೆ. ದೊಡ್ಡ ಕೆಟ್ಟ ಶಕ್ತಿಗಳು ಧ್ಯಾನಮಂದಿರದ ಮೇಲೆ ದೊಡ್ಡ ಪ್ರಮಾಣದಲ್ಲಿ ತೊಂದರೆದಾಯಕ ಸ್ಪಂದನಗಳ ಆವರಣವನ್ನು ತಂದು ಚೈತನ್ಯದ ಸ್ರೋತವನ್ನು ತಡೆಯಲು ಪ್ರಯತ್ನಿಸಿದವು. ಧ್ಯಾನ ಮಂದಿರದ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣ ನಷ್ಟವಾಗಲು ಮಹರ್ಷಿಗಳು ಮತ್ತು ಸಂತರು ಆಗಾಗ ಉಪಾಯಗಳನ್ನು ಹೇಳುತ್ತಾರೆ. ಅದಕ್ಕನುಸಾರ ಎಲ್ಲ ಉಪಾಯಗಳನ್ನು ಭಾವಪೂರ್ಣವಾಗಿ ಮಾಡಲಾಗುತ್ತದೆ. ಸನಾತನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೇಳಿದಂತೆ ಧ್ಯಾನಮಂದಿರದಲ್ಲಿ ಮಾಡಿದ ಅಗ್ನಿ ಹೋತ್ರದ ಸಂದರ್ಭದಲ್ಲಿ ಮಾಡಿದ ವೈಜ್ಞಾನಿಕ ಸಂಶೋಧನೆಯಿಂದ ‘ದೇವಾಸುರರ ಯುದ್ಧ ಹೇಗಿರುತ್ತದೆ ? ಅದರ ತೀವ್ರತೆ ಹೇಗಿರುತ್ತದೆ ?, ಎನ್ನುವುದು ಓದುಗರಿಗೆ ಸ್ವಲ್ಪಮಟ್ಟಿಗಾದರೂ ಕಲ್ಪನೆ ಬರಬೇಕೆಂದು ಈ ಲೇಖನ. – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೨.೧.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.