ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಯುನಿವರ್ಸಲ್ ಥರ್ಮೋಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
ಪರಾತ್ಪರ ಗುರು ಡಾ. ಆಠವಲೆಯವರ ಆರೋಗ್ಯ ಚೆನ್ನಾಗಿರಬೇಕೆಂದು, ಆಗಾಗ ಅವರಿಗೆ ವೈದ್ಯಕೀಯ ಚಿಕಿತ್ಸೆಗಳನ್ನು (ಉಪಚಾರಗಳನ್ನು) ನೀಡಲಾಗುತ್ತದೆ. ಎಪ್ರಿಲ್ ೨೦೨೦ ರಲ್ಲಿ ಅವರ ಬೆನ್ನಿನ ಮೇಲೆ ಹಾಟ್ ಕಪಿಂಗ್ (ಉಷ್ಣ ಘಂಟಿಯಂತ್ರ ಚಿಕಿತ್ಸೆ) ಎಂಬ ಆಯುರ್ವೇದೀಯ ಚಿಕಿತ್ಸೆಯನ್ನು (ಟಿಪ್ಪಣಿ) ಮಾಡಲಾಯಿತು. ಈ ಚಿಕಿತ್ಸೆಯನ್ನು ಆಶ್ರಮದ ಇಬ್ಬರು ತರಬೇತಿ ಪಡೆದ ಸಾಧಕರು ಮಾಡಿದರು. ಸಂತರ ದೇಹದಿಂದ ವಾತಾವರಣದಲ್ಲಿ ಸತತವಾಗಿ ಚೈತನ್ಯ ಪ್ರಕ್ಷೇಪಿಸುತ್ತಿರುತ್ತದೆ. ಸಂತರಲ್ಲಿನ ಚೈತನ್ಯದಿಂದ ಅವರು ಸ್ಪರ್ಶಿಸಿದ ವಸ್ತುಗಳು, ಅವರ ನಿವಾಸಸ್ಥಾನ (ಕೋಣೆ). ಅವರ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಮತ್ತು ಸುತ್ತಮುತ್ತಲಿನ ವಾತಾವರಣ ಮುಂತಾದವುಗಳು ಚೈತನ್ಯದಿಂದ ತುಂಬಿಕೊಳ್ಳುತ್ತವೆ. ವೈದ್ಯಕೀಯ ಚಿಕಿತ್ಸೆಯ ಸಮಯದಲ್ಲಿ ಉಪಯೋಗಿಸಲಾದ ವಸ್ತುಗಳು ಮತ್ತು ಚಿಕಿತ್ಸೆಯನ್ನು ಮಾಡುವ ಸಾಧಕರ ಮೇಲೆ ಸಂತರಲ್ಲಿನ (ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ) ಚೈತನ್ಯದಿಂದಾದ ಪರಿಣಾಮಗಳೇನು ?, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
ಟಿಪ್ಪಣಿ – ಹಾಟ್ ಕಪಿಂಗ್ (ಉಷ್ಣ ಘಟಿಯಂತ್ರ ಚಿಕಿತ್ಸೆ) ಆಯುರ್ವೇದಿಕ ಚಿಕಿತ್ಸಾಪದ್ಧತಿ : ಇದು ಪ್ರಾಚೀನ ಭಾರತೀಯ ಆಯುರ್ವೇದಿಯ ಚಿಕಿತ್ಸಾ ಪದ್ಧತಿಯಾಗಿದೆ. ಕಾಲಾಂತರದಲ್ಲಿ ಈ ಚಿಕಿತ್ಸಾ ಪದ್ಧತಿಯು ಚೀನಾ ದೇಶಕ್ಕೆ ತಲುಪಿತು. ಅಲ್ಲಿ ಅದು ವಿಕಸಿತಗೊಂಡು ಚೀನಾ ಉಪಚಾರಪದ್ಧತಿ ಎಂದು ಪ್ರಚಲಿತವಾಯಿತು. ಈ ಆಯುರ್ವೇದಿಯ ಚಿಕಿತ್ಸೆಯಿಂದ ರೋಗಿಯ ರಕ್ತಪರಿಚಲನೆ (Blood Circulation ಸುಧಾರಿಸುತ್ತದೆ, ಅವಯವಗಳಲ್ಲಾಗುವ ವೇದನೆಗಳು ದೂರವಾಗುತ್ತವೆ, ಸ್ನಾಯುಗಳ ಬಿಗಿತವು (Muscle Stiffness) ದೂರವಾಗುತ್ತದೆ, ಹಾಗೆಯೇ ಸ್ನಾಯುಗಳ ಸುತ್ತಲಿರುವ ಆವರಣವು (fascia) ದೂರವಾಗಿ ಸ್ನಾಯುಗಳ ಗುಣಮಟ್ಟವು ಹೆಚ್ಚಾಗುತ್ತದೆ ಮತ್ತು ಸ್ನಾಯುಗಳು ಕಾರ್ಯನಿರತವಾಗಿರಲು ಸಹಾಯವಾಗುತ್ತದೆ. ಹಾಟ್ ಕಪಿಂಗ್ ಆಯುರ್ವೇದಿಯ ಚಿಕಿತ್ಸೆಯ ಕುರಿತಾದ ವಿಸ್ತಾರ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಮುಂದಿನ ಘಟಕಗಳ ಹಾಟ್ ಕಪಿಂಗ್ ಚಿಕಿತ್ಸೆಯ ಮೊದಲು ಮತ್ತು ಚಿಕಿತ್ಸೆಯ ನಂತರ ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು.
ಅ. ಮಹಾನಾರಾಯಣ ತೈಲ (ಎಣ್ಣೆ) : ಚಿಕಿತ್ಸೆಯನ್ನು ಮಾಡುವ ಮೊದಲು ಪರಾತ್ಪರ ಗುರು ಡಾಕ್ಟರರ ಶರೀರಕ್ಕೆ ಈ ಎಣ್ಣೆಯನ್ನು ಹಚ್ಚಲಾಗುತ್ತದೆ.
ಆ. ಹಾಟ್ ಕಪಿಂಗ್ನ ಚಿಕಿತ್ಸೆಗಾಗಿ ಉಪಯೋಗಿಸಲಾದ ವಸ್ತುಗಳು : ಕಡ್ಡಿಪೆಟ್ಟಿಗೆ, ಗಾಜಿನ ಕಪ್ (ಟಿಪ್ಪಣಿ ೧.) ಹತ್ತಿಯ ಉಂಡೆಯನ್ನು ಅಂಟಿಸಿದ ತಂತಿ, ಹತ್ತಿ (ಟಿಪ್ಪಣಿ ೨) ಮತ್ತು ಸ್ಪಿರಿಟ್ (Spirit)
ಟಿಪ್ಪಣಿ ೧ – ಚಿಕಿತ್ಸೆಗಳಿಗಾಗಿ ಗಾಜಿನ ಒಟ್ಟು ೯ ಕಪ್‌ಗಳನ್ನು ಬಳಸಲಾಯಿತು. ಈ ಎಲ್ಲ ಕಪ್‌ಗಳನ್ನು ಒಟ್ಟಿಗೆ ಇಟ್ಟು ಅವುಗಳ ಅಳತೆಯ ನೋಂದಣಿಯನ್ನು ಮಾಡಲಾಯಿತು.
ಟಿಪ್ಪಣಿ ೨ – ಚಿಕಿತ್ಸೆಯ ಮೊದಲು ಹತ್ತಿಯ ಅಳತೆಯ ನೋಂದಣಿಯನ್ನು ಮಾಡಲಾಯಿತು. ಹಾಟ್ ಕಪಿಂಗ್ ಚಿಕಿತ್ಸೆಯನ್ನು ಮಾಡುವಾಗ ಹತ್ತಿಯ ಮೇಲೆ ಅಗ್ನಿಯ ಸಂಸ್ಕಾರವಾಗುವುದರಿಂದ ಹತ್ತಿಯ ಕೆಲವು ಭಾಗವು ಸುಟ್ಟು ಕಪ್ಪಾಗುತ್ತದೆ. ಹತ್ತಿಯ ಸುಟ್ಟ ಕಪ್ಪು ಭಾಗವನ್ನು ತೆಗೆದು ಉಳಿದ ಹತ್ತಿಯನ್ನು ಪುನಃ ಬಳಸಲು ಬರುತ್ತದೆ. ಆದುದರಿಂದ ಪರೀಕ್ಷಣೆಯಲ್ಲಿ ಹತ್ತಿಯನ್ನು ಚಿಕಿತ್ಸೆಗಾಗಿ ಬಳಸಿದ ನಂತರ ಅದರ ಸುಟ್ಟ ಕಪ್ಪು ಭಾಗವನ್ನು ತೆಗೆದ ನಂತರದ ಹತ್ತಿಯ ಅಳತೆಯ ನೋಂದಣಿಯನ್ನು ಮಾಡಲಾಯಿತು.
ಇ. ಚಿಕಿತ್ಸೆ ಮಾಡುವ ಇಬ್ಬರು ಸಾಧಕರು : ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕ
೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳಿಗೆ ಸಂಬಂಧಿಸಿದ ನಿರೀಕ್ಷಣೆಗಳ ವಿಶ್ಲೇಷಣೆ
೧ ಅ ೧. ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಚಿಕಿತ್ಸೆ ಮಾಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿನ ಇನ್ಫ್ರಾರೆಡ್ ಮತ್ತು ಅಲ್ಟ್ರಾವೈಲೆಟ್ ಈ ಎರಡೂ ನಕಾರಾತ್ಮಕ ಊರ್ಜೆಗಳು ಇಲ್ಲವಾದವು : ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿ ಮೊದಲು (ಚಿಕಿತ್ಸೆಯ ಮೊದಲು) ಇನ್ಫ್ರಾರೆಡ್ ಮತ್ತು ಅಲ್ಟ್ರಾವೈಲೆಟ್ ಈ ಎರಡೂ ನಕಾರಾತ್ಮಕ ಊರ್ಜೆಗಳಿದ್ದವು ಮತ್ತು ಅವುಗಳ ಪ್ರಭಾವಲಯಗಳು ಅನುಕ್ರಮವಾಗಿ ೨.೪೨ ಮೀಟರ್ ಮತ್ತು ೧.೪೧ ಮೀಟರ್ ಇದ್ದವು. ಸಾಧಕನು ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಚಿಕಿತ್ಸೆ ಮಾಡಿದ ನಂತರ ಅವನಲ್ಲಿನ ಎರಡೂ ನಕಾರಾತ್ಮಕ ಊರ್ಜೆಗಳು ಇಲ್ಲವಾದವು.
೧ ಅ ೨. ಪರಾತ್ಪರ ಗುರು ಡಾ. ಆಠವಲೆಯವರ ಚಿಕಿತ್ಸೆಗಾಗಿ ಉಪಯೋಗಿಸಿದ ವಸ್ತುಗಳಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ.
೧ ಅ ೩. ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕನಲ್ಲಿ ನಕಾರಾತ್ಮಕ ಊರ್ಜೆಯು ಕಂಡು ಬರಲಿಲ್ಲ.
೧ ಅ ೪. ಪರಾತ್ಪರ ಗುರು ಡಾ. ಆಠವಲೆಯವರಿಗೆ ಚಿಕಿತ್ಸೆ ಮಾಡಿದ ನಂತರ ಚಿಕಿತ್ಸೆಗಾಗಿ ಉಪಯೋಗಿಸಿದ ವಸ್ತುಗಳು ಮತ್ತು ಉಪಚಾರ ಮಾಡುವ ಇಬ್ಬರೂ ಸಾಧಕರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು
೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೨ ಅ. ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಚಿಕಿತ್ಸೆ ಮಾಡಿದ ನಂತರ ಉಪಚಾರಕ್ಕಾಗಿ ಉಪಯೋಗಿಸಿದ ವಸ್ತುಗಳ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾದುದರ ಕಾರಣ : ಸಾಮಾನ್ಯ ವ್ಯಕ್ತಿ ಅನಾರೋಗ್ಯದಲ್ಲಿದ್ದಾಗ, ಅವನಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ. ಅವನ ದೇಹಬುದ್ಧಿ ಹೆಚ್ಚಿರುವುದರಿಂದ ಮತ್ತು ಅದು ಸತತವಾಗಿ ಜಾಗೃತವಾಗಿರುವುದರಿಂದ ನನಗೆ ಆರಾಮವಿಲ್ಲ, ನನಗೆ ಬಹಳ ವೇದನೆಗಳಾಗುತ್ತಿವೆ, ಇದರಿಂದ ನನಗೆ ಬಹಳ ತೊಂದರೆಗಳಾಗುತ್ತಿವೆ, ಎಂಬ ವಿಚಾರಗಳು ಅವನ ಮನಸ್ಸಿನಲ್ಲಿ ಸತತವಾಗಿ ಬರುತ್ತಿರುತ್ತವೆ. ಇದರಿಂದ ಅವನಿಗೆ ದುಃಖವಾಗುತ್ತದೆ. ಇದರಿಂದ ಅವನಿಂದ ವಾತಾವರಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ತದ್ವಿರುದ್ಧ ಸಂತರ ದೇಹಬುದ್ಧಿಯು ಅತ್ಯಲ್ಪವಾಗಿರುವುದರಿಂದ ಅವರು ತಮಗಾಗುವ ಶಾರೀರಿಕ ತೊಂದರೆಗಳ ಕಡೆಗೆ ಸಾಕ್ಷಿಭಾವದಿಂದ ನೋಡುತ್ತಾರೆ. ಅವರ ಮನೋಲಯವಾಗಿದ್ದರಿಂದ ಮತ್ತು ಅವರು ಸತತವಾಗಿ ಈಶ್ವರನ ಅನುಸಂಧಾನದಲ್ಲಿರುವುದರಿಂದ ಸಂತರು ಸತತವಾಗಿ ಆನಂದಾವಸ್ಥೆಯಲ್ಲಿರುತ್ತಾರೆ. ಆದುದರಿಂದ ಸಂತರಿಗೆ ಅನಾರೋಗ್ಯವಿದ್ದರೂ, ಅವರ ಆನಂದಾವಸ್ಥೆಯಿಂದ ಅವರಿಂದ ವಾತಾವರಣದಲ್ಲಿ ಚೈತನ್ಯ ಪ್ರಕ್ಷೇಪಿಸುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಪರಾತ್ಪರ ಗುರು ಪದವಿಯಲ್ಲಿನ ಸಮಷ್ಟಿ ಸಂತರಾಗಿದ್ದಾರೆ.
ಅವರಲ್ಲಿ ತುಂಬಾ ಚೈತನ್ಯವಿದೆ. ಅವರಿಂದ ವಾತಾವರಣದಲ್ಲಿ ಸತತವಾಗಿ ಚೈತನ್ಯ ಪ್ರಕ್ಷೇಪಿಸುತ್ತಿರುತ್ತದೆ. ಅವರಲ್ಲಿನ ಚೈತನ್ಯದಿಂದ ಅವರ ದೈನಂದಿನ ಬಳಕೆಯ ವಸ್ತುಗಳು, ಅವರು ಸ್ಪರ್ಶಿಸಿದ ವಸ್ತುಗಳು, ಅವರ ನಿವಾಸಸ್ಥಾನ (ಕೋಣೆ), ಅವರ ಸಂಪರ್ಕದಲ್ಲಿನ ವ್ಯಕ್ತಿಗಳು ಮತ್ತು ಸುತ್ತಮುತ್ತಲಿನ ವಾತಾವರಣ ಮುಂತಾದವುಗಳು ಚೈತನ್ಯದಿಂದ ತುಂಬಿಕೊಳ್ಳುತ್ತವೆ. ಪರಾತ್ಪರ ಗುರು ಡಾಕ್ಟರರ ಚಿಕಿತ್ಸೆಗಾಗಿ ಉಪಯೋಗಿಸಲಾದ ವಸ್ತಗಳಲ್ಲಿ ಅವರ ಚೈತನ್ಯಮಯ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯದ ಒಳ್ಳೆಯ ಪರಿಣಾಮವಾದುದರಿಂದ ಆ ವಸ್ತುಗಳ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.
೨ ಆ. ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಚಿಕಿತ್ಸೆಯನ್ನು ಮಾಡಿದ ಇಬ್ಬರೂ ಸಾಧಕರಿಗೆ ಆಧ್ಯಾತ್ಮಿಕ ಲಾಭವಾಯಿತು : ಸಂತರೆಂದರೆ ಈಶ್ವರನ ಸಗುಣ ರೂಪ ! ಸಂತರ ಸೇವೆಯನ್ನು ಮಾಡುವ ಅವಕಾಶ ಸಿಗುವುದು, ಸಾಧಕರ ಮಹಾಭಾಗ್ಯವಾಗಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಉಪಚಾರ ಮಾಡುವ ಇಬ್ಬರೂ ಸಾಧಕರು ಅನೇಕ ವರ್ಷಗಳಿಂದ ನಿಯಮಿತವಾಗಿ ಸಾಧನೆಯನ್ನು ಮಾಡುತ್ತಿದ್ದಾರೆ. ಪರಾತ್ಪರ ಗುರು ಡಾಕ್ಟರರ ಮೇಲೆ ಉಪಚಾರ ಮಾಡುವಾಗ ಇಬ್ಬರೂ ಸಾಧಕರ ಭಾವಜಾಗೃತವಾಗುತ್ತದೆ. ಅವರಲ್ಲಿನ ಸೇವಾಭಾವ ಮತ್ತು ಕೃತಜ್ಞತಾ ಭಾವದಿಂದ ಅವರು ಪರಾತ್ಪರ ಗುರು ಡಾಕ್ಟರರಿಂದ ಪ್ರಕ್ಷೇಪಿಸುವ ಚೈತನ್ಯವನ್ನು ತಮ್ಮ ಕ್ಷಮತೆಗನುಸಾರ ಗ್ರಹಣ ಮಾಡಿದರು. ಆದುದರಿಂದ ಅವರಿಗೆ ಮುಂದಿನ ಆಧ್ಯಾತ್ಮಿಕ ಲಾಭವಾದವು.
೧. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕ : ಸಾಧಕನಲ್ಲಿ ಮೊದಲು ನಕಾರಾತ್ಮಕ ಊರ್ಜೆಯಿತ್ತು, ಹಾಗೆಯೇ ಅವನಲ್ಲಿ ಸಕಾರಾತ್ಮಕ ಊರ್ಜೆಯೂ ಇತ್ತು. ಸಾಧಕನು ಪರಾತ್ಪರ ಗುರು ಡಾಕ್ಟರರ ಮೇಲೆ ಚಿಕಿತ್ಸೆ ಮಾಡಿದ ನಂತರ ಅವನಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವನಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.
೨. ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕ : ಸಾಧಕನಲ್ಲಿ ನಕಾರಾತ್ಮಕ ಊರ್ಜೆ ಇರಲಿಲ್ಲ, ಅವನಲ್ಲಿ ಸಕಾರಾತ್ಮಕ ಊರ್ಜೆ ಇತ್ತು. ಸಾಧಕನು ಪರಾತ್ಪರ ಗುರು ಡಾಕ್ಟರರ ಮೇಲೆ ಚಿಕಿತ್ಸೆಯನ್ನು ಮಾಡಿದ ನಂತರ ಅವನಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.
೨ ಇ. ಪರಾತ್ಪರ ಗುರು ಡಾ. ಆಠವಲೆಯವರ ವೈದ್ಯಕೀಯ ಉಪಚಾರಕ್ಕಾಗಿ ಉಪಯೋಗಿಸಿದ ವಸ್ತುಗಳು ಚೈತನ್ಯದಿಂದ ತುಂಬಿಕೊಂಡಿದ್ದರಿಂದ ಅವುಗಳಿಂದ ಆಧ್ಯಾತ್ಮಿಕ ಲಾಭವಾಗುವುದು : ಪರಾತ್ಪರ ಗುರು ಡಾಕ್ಟರರ ಮೇಲೆ ವೈದ್ಯಕೀಯ ಚಿಕಿತ್ಸೆಯನ್ನು ಮಾಡುವಾಗ ಆಶ್ರಮದಲ್ಲಿನ ಆಧುನಿಕ ವೈದ್ಯರಿಗೆ (ಡಾಕ್ಟರ್), ಆಯುರ್ವೇದಿಯ ವೈದ್ಯರಿಗೆ ಮತ್ತು ಅವರಿಗೆ ಸಹಾಯ ಮಾಡುವ ಇತರ ಸಾಧಕರಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ, ಎಂಬುದು ಅರಿವಾಗುತ್ತದೆ; ಹಾಗೆಯೇ ಸಂತರ ಸೇವೆಯನ್ನು ಮಾಡುವಾಗ ಅವರಿಗೆ ವಿವಿಧ ಅನುಭೂತಿಗಳು ಬರುತ್ತವೆ. ಪರಾತ್ಪರ ಗುರು ಡಾಕ್ಟರರ ಮಾತ್ರೆಗಳ ಖಾಲಿ ಹೊದಿಕೆಗಳು (ಸ್ಟ್ರಿಪ್ಸ್) ಅವರ ಔಷಧಿಗಳ ಖಾಲಿ ಡಬ್ಬಗಳು, ಅವರ ಚಿಕಿತ್ಸೆಗಾಗಿ ಉಪಯೋಗಿಸಿದ ಕಾಟನ್ ಗಾಜ್, ಬ್ಯಾಂಡೇಜ್ ಇತ್ಯಾದಿ ವಸ್ತುಗಳನ್ನು ಸಾಧಕರಿಗೆ ಆಧ್ಯಾತ್ಮಿಕ ಲಾಭಕ್ಕಾಗಿ ನೀಡಿದಾಗ ಅವುಗಳಿಂದ ಅವರಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ, ಎಂಬುದು ಅರಿವಾಗುತ್ತದೆ.
ಟಿಪ್ಪಣಿ – ಆಧ್ಯಾತ್ಮಿಕ ಲಾಭ : ಯಾವುದಾದರೊಂದು ವಿಶಿಷ್ಟ ಘಟಕದಲ್ಲಿನ ಸಾತ್ತ್ವಿಕತೆಯಿಂದ ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಯಲ್ಲಿನ ನಕಾರಾತ್ಮಕ ಸ್ಪಂದನಗಳು ಕಡಿಮೆ ಅಥವಾ ನಾಶವಾಗುವುದು ಮತ್ತು ಸಕಾರಾತ್ಮಕ ಸ್ಪಂದನಗಳಲ್ಲಿ ವೃದ್ಧಿಯಾಗುವುದಕ್ಕೆ ಆಧ್ಯಾತ್ಮಿಕ ಲಾಭವಾಗುವುದು, ಎಂದು ಹೇಳುತ್ತಾರೆ. ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಯು ಸಾಧನೆಯನ್ನು ಮಾಡುವವನಾಗಿದ್ದರೆ, ಅವನ ಸಂವೇದನಾಶೀಲತೆ ಹೆಚ್ಚಾಗಿರುತ್ತದೆ. ಆದುದರಿಂದ ಅವನಿಗೆ ಆಧ್ಯಾತ್ಮಿಕ ಲಾಭವಾಗುತ್ತಿದೆಯೋ ಇಲ್ಲವೋ ?, ಎಂಬುದು ಅರಿವಾಗುತ್ತದೆ. – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೬.೪.೨೦೨೦)
ವಿ-ಅಂಚೆ : [email protected]
* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.
* ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |