ವನಸ್ಪತಿಗಳ ವಿಷಯದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಥರ್ಮೋಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
ಮಹರ್ಷಿಗಳು ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ರಾಮ ಮತ್ತು ಕೃಷ್ಣ ಈ ಎರಡೂ ತತ್ತ್ವಗಳಿವೆ, ಎಂದು ಹೇಳಿದ್ದಾರೆ. ‘ರಾಮ ಮತ್ತು ಕೃಷ್ಣ ಈ ಎರಡೂ ತತ್ತ್ವಗಳಿಂದ ಸನಾತನದ ಸಾಧಕರಿಗೆ ಲಾಭವಾಗಬೇಕೆಂದು, ಹಾಗೆಯೇ ಶ್ರೀಕೃಷ್ಣ ಮತ್ತು ಶ್ರೀರಾಮ ಈ ಅವತಾರಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯಕ್ಕೆ ಆಶೀರ್ವಾದ ಲಭಿಸಬೇಕು, ಎಂದು ಮಹರ್ಷಿಗಳು ರಾಮತುಳಸಿ ಮತ್ತು ಕೃಷ್ಣತುಳಸಿಯ ಸಸಿಗಳನ್ನು ಕುಂಡಗಳಲ್ಲಿ ವಿಧಿಪೂರ್ವಕ ನೆಡಲು ಹೇಳಿದ್ದರು. ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿದ ನಂತರ ರಾಮತುಳಸಿ ಮತ್ತು ಕೃಷ್ಣತುಳಸಿ ಇವುಗಳಿಗೆ ನೀರನ್ನು ಹಾಕಿ ಪ್ರದಕ್ಷಿಣೆಗಳನ್ನು ಹಾಕುತ್ತಾರೆ.
ಆಗಸ್ಟ್ ೨೦೨೦ ರಲ್ಲಿ ಕೃಷ್ಣತುಳಸಿಯ ಕುಂಡದಲ್ಲಿ ತಾನಾಗಿಯೇ ಔದುಂಬರದ ಸಸಿ ಚಿಗುರೊಡೆದಿರುವುದು ಗಮನಕ್ಕೆ ಬಂದಿತು. ೮.೧೦.೨೦೨೦ ರಂದು ಕೃಷ್ಣತುಳಸಿಯ ಕುಂಡದಿಂದ ಔದುಂಬರದ ಸಸಿಯನ್ನು ತೆಗೆದು ಆಶ್ರಮದ ಪರಿಸರದಲ್ಲಿ ನೆಡಲಾಯಿತು. ‘ಯು.ಎ.ಎಸ್ ಉಪಕರಣದ ಮೂಲಕ ಔದುಂಬರದ ಸಸಿ ಮತ್ತು ಎರಡೂ ತುಳಸಿಗಳ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಗಳ ನಿರೀಕ್ಷಣೆಯ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರಿಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ವಿಷಯದಲ್ಲಿ ನಿರೀಕ್ಷಣೆಯ ವಿಶ್ಲೇಷಣೆ : ಔದುಂಬರ, ಕೃಷ್ಣತುಳಸಿ ಮತ್ತು ರಾಮತುಳಸಿ ಇವುಗಳಿಂದ ಹೆಚ್ಚೆಚ್ಚು ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು
ಮೇಲಿನ ಕೋಷ್ಟಕದಿಂದ ಈ ಮುಂದಿನ ವಿಷಯಗಳು ಗಮನಕ್ಕೆ ಬರುತ್ತವೆ
೧. ಆಗಸ್ಟ್ ೨೦೨೦ ರಲ್ಲಿ ‘ಔದುಂಬರದೊಂದಿಗೆ ಕೃಷ್ಣತುಳಸಿ’ ಮತ್ತು ರಾಮತುಳಸಿ ಇವುಗಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆ ಇರುವುದು ಗಮನಕ್ಕೆ ಬಂದಿತು.
೨. ಅಕ್ಟೋಬರ್ ೨೦೨೦ ರಲ್ಲಿ ‘ಔದುಂಬರದೊಂದಿಗೆ ಕೃಷ್ಣತುಳಸಿ ಮತ್ತು ರಾಮತುಳಸಿ ಇವುಗಳಲ್ಲಿನ ಸಕಾರಾತ್ಮಕ ಊರ್ಜೆಯು ತುಂಬಾ ಹೆಚ್ಚಾಯಿತು.
೩. ೮.೧೦.೨೦೨೦ ರಂದು ಕೃಷ್ಣತುಳಸಿಯ ಕುಂಡದಿಂದ ಔದುಂಬರದ ಸಸಿಯನ್ನು ಬೇರ್ಪಡಿಸಿದ ನಂತರ ಔದುಂಬರದಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೧೫.೪೭ ಮೀಟರ್ ಮತ್ತು ಕೃಷ್ಣತುಳಸಿಯಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೨೦.೧೦ ಮೀಟರ್ ಇತ್ತು.
೪. ಔದುಂಬರ, ಕೃಷ್ಣತುಳಸಿ ಮತ್ತು ರಾಮತುಳಸಿ ಇವುಗಳಲ್ಲಿನ ಸಕಾರಾತ್ಮಕ ಊರ್ಜೆಯು ಉತ್ತರೋತ್ತರ ಹೆಚ್ಚಾಗಿದೆ.
೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೨ ಅ. ತುಳಸಿಯ ಮಹತ್ವ : ತುಳಸಿಯಲ್ಲಿ ಶ್ರೀವಿಷ್ಣುತತ್ತ್ವ ಇದೆ. ತುಳಸಿಯು ನಿರಂತರವಾಗಿ ದೇವತೆಯ ತತ್ತ್ವವನ್ನು ಪ್ರಕ್ಷೇಪಿಸುವುದರಿಂದ ಅದು ಸುತ್ತಮುತ್ತಲಿನ ವಾತಾವರಣವನ್ನು ಶುದ್ಧ ಮತ್ತು ಪವಿತ್ರಗೊಳಿಸುತ್ತದೆ. (ತುಳಸಿಯ ಗಿಡ ೨೪ ಗಂಟೆ ಪ್ರಾಣವಾಯುವನ್ನು ಹೊರ ಸೂಸುತ್ತದೆ’, ಎಂದು ವಿಜ್ಞಾನ ಕೂಡ ಹೇಳುತ್ತದೆ.) ವಾತಾವರಣದಲ್ಲಿರುವ ರಜ-ತಮದಿಂದ ಪ್ರತಿಯೊಂದು ವಸ್ತುವಿನ ಮೇಲೆ ಪರಿಣಾಮವಾಗುತ್ತಿರುತ್ತದೆ. ತುಳಸಿಯಿಂದ ಪ್ರಕ್ಷೇಪಿಸುವ ಸಾತ್ತ್ವಿಕ ಸ್ಪಂದನಗಳಿಂದ ವಾತಾವರಣದಲ್ಲಿನ ರಜ-ತಮಗಳು ನಾಶವಾಗುತ್ತವೆ. ಸ್ವಲ್ಪದರಲ್ಲಿ ತುಳಸಿಯು ಸಾತ್ತ್ವಿಕ ವನಸ್ಪತಿಯಾಗಿದ್ದು ಅದರಿಂದ ಸತತವಾಗಿ ವಾತಾವರಣದ ಶುದ್ಧಿಯಾಗುತ್ತದೆ. ಆದ್ದರಿಂದ ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯ ಪ್ರವೇಶದ್ವಾರದ ಸಮೀಪ ‘ತುಳಸಿ ವೃಂದಾವನ ಇರುತ್ತಿತ್ತು. ಮನೆಯಲ್ಲಿ ಸ್ತ್ರೀಯರು ಭಕ್ತಿಭಾವದಿಂದ ತುಳಸಿಯ ಪೂಜೆಯನ್ನು ಮಾಡಿ ಅದಕ್ಕೆ ನಮಸ್ಕಾರ ಮತ್ತು ಪ್ರಾರ್ಥನೆಯನ್ನು ಮಾಡುತ್ತಿದ್ದರು. ಹಾಗೆಯೇ ಸಾಯಂಕಾಲ ತುಳಸಿಯ ಎದುರು ದೀಪವನ್ನು ಹಚ್ಚುತ್ತಿದ್ದರು. ಇಂದಿನ ಈ ವಿಜ್ಞಾನ ಯುಗದಲ್ಲಿ ಗ್ರಾಮೀಣ ಭಾಗದಲ್ಲಿ ಈಗಲೂ ಈ ಪರಂಪರೆಯನ್ನು ಪಾಲಿಸಲಾಗುತ್ತದೆ.
೨ ಆ. ಔದುಂಬರದ ಮಹತ್ವ : ಭಾರತೀಯ ಸಂಸ್ಕೃತಿಯಲ್ಲಿ ಕೆಲವು ವೃಕ್ಷಗಳಿಗೆ ‘ದೇವವೃಕ್ಷ’ ಗಳೆಂದು ಹೇಳಲಾಗಿದೆ. ಅವುಗಳಲ್ಲಿನ ಒಂದು ವೃಕ್ಷವೆಂದರೆ ಔದುಂಬರ ! ಪ್ರಾಚೀನ ಧರ್ಮಗ್ರಂಥಗಳಲ್ಲಿ, ಔದುಂಬರದ ವೃಕ್ಷದಲ್ಲಿ ತ್ರಿಮೂರ್ತಿಗಳ ವಾಸವಿರುತ್ತದೆ ಎಂದು ಹೇಳಲಾಗಿದೆ. ಈ ವೃಕ್ಷದ ಬೇರುಗಳಲ್ಲಿ ಬ್ರಹ್ಮ, ಮಧ್ಯಭಾಗದಲ್ಲಿ ವಿಷ್ಣು ಮತ್ತು ಅಗ್ರ (ಮೇಲಿನ) ಭಾಗದಲ್ಲಿ ಶಿವನ ಅಸ್ತಿತ್ವವಿರುತ್ತದೆ. ಆದ್ದರಿಂದ ‘ಈ ವೃಕ್ಷದ ಪೂಜೆಯನ್ನು ಮಾಡಬೇಕು’, ಎಂದು ಹೇಳಲಾಗಿದೆ. ತ್ರಿಮೂರ್ತಿಗಳ ಅಸ್ತಿತ್ವದಿಂದ ಈ ವೃಕ್ಷದಿಂದ ನಿರಂತರವಾಗಿ ಸಾತ್ತ್ವಿಕ ಸ್ಪಂದನಗಳ ಪ್ರಕ್ಷೇಪಣೆಯಾಗುತ್ತದೆ.
೨ ಇ. ಔದುಂಬರ, ಕೃಷ್ಣತುಳಸಿ ಮತ್ತು ರಾಮತುಳಸಿ ಇವುಗಳಿಂದ ಉತ್ತರೋತ್ತರ ಹೆಚ್ಚೆಚ್ಚು ಸಕಾರಾತ್ಮಕ ಸ್ಪಂದನಗಳ ಪ್ರಕ್ಷೇಪಣೆಯಾಗುತ್ತದೆ: ಕೃಷ್ಣತುಳಸಿಯಲ್ಲಿ ಕೃಷ್ಣತತ್ತ್ವವನ್ನು, ರಾಮ ತುಳಸಿಯಲ್ಲಿ ರಾಮತತ್ತ್ವವನ್ನು ಮತ್ತು ಔದುಂಬರದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ (ಶಿವ) ಈ ತ್ರಿದೇವತೆಗಳ ಸಂಯುಕ್ತ ತತ್ತ್ವ (ದತ್ತತತ್ತ್ವ) ವನ್ನು ಆಕರ್ಷಿಸಿ ಪ್ರಕ್ಷೇಪಿಸುವ ಕ್ಷಮತೆಯಿದೆ. ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿದ ನಂತರ ಎರಡೂ ತುಳಸಿಗಳಿಗೆ ನೀರನ್ನು ಹಾಕಿ ಪ್ರದಕ್ಷಿಣೆಗಳನ್ನು ಹಾಕುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರು ಈ ಕೃತಿಯನ್ನು ಅತ್ಯಂತ ಭಾವಪೂರ್ಣವಾಗಿ ಮಾಡುತ್ತಾರೆ. ಪರಾತ್ಪರ ಗುರು ಡಾಕ್ಟರರು ಮಾಡಿದ ಭಾವಪೂರ್ಣ ಪೂಜೆಯಿಂದ ತುಳಸಿಯಲ್ಲಿ ದೇವತೆಯ ತತ್ತ್ವವು ಜಾಗೃತವಾಗಿ ಕಾರ್ಯನಿರತ ವಾಗಿದೆ. ಸದ್ಯದ ಕಾಲವು ಆಪತ್ಕಾಲವಾಗಿದೆ. ಸೂಕ್ಷ್ಮದಲ್ಲಿ ದೇವಾಸುರರ ಹೋರಾಟವು ಕೊನೆಯ ಹಂತದಲ್ಲಿದೆ. ಸೂಕ್ಷ್ಮದಲ್ಲಿ ದೊಡ್ಡ ಕೆಟ್ಟ ಶಕ್ತಿಗಳು ದ್ವೇಷದಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಸೂಕ್ಷ್ಮದಿಂದ ಹಲ್ಲೆಗಳನ್ನು ಮಾಡುತ್ತಿವೆ. ಪರಾತ್ಪರ ಗುರು ಡಾಕ್ಟರರ ಮೇಲಾಗುವ ಹಲ್ಲೆಗಳ ಪರಿಣಾಮವು ಅವರು ನೀರು ಹಾಕುತ್ತಿರುವ ತುಳಸಿಗಳ ಮೇಲಾಗುತ್ತದೆ. ಆದ್ದರಿಂದ ಯಾವಾಗ ಪರಾತ್ಪರ ಗುರು ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳ ಹಲ್ಲೆಗಳಾಗಿ ಅವರ ಪ್ರಾಣಶಕ್ತಿ ಕಡಿಮೆಯಾಗುತ್ತದೆಯೋ, ಆಗ ತುಳಸಿಯ ಎಲೆಗಳು ಕರಟುತ್ತವೆ ಅಥವಾ ಅವು ಒಣಗುತ್ತವೆ. ‘ಆಗಸ್ಟ್ ೨೦೨೦ ರಲ್ಲಿ ಕೃಷ್ಣತುಳಸಿಯ ಕುಂಡದಲ್ಲಿ ತಾನಾಗಿಯೇ ಔದುಂಬರ ಸಸಿ ಚಿಗುರುವುದು’, ಇದು ಸೂಕ್ಷ್ಮದಲ್ಲಿ ದೇವಾಸುರರ ಸಂಗ್ರಾಮದಲ್ಲಿ ಸಹಾಯ ಮಾಡಲು ದತ್ತತತ್ತ್ವ (ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ತ್ರಿದೇವತೆಗಳ ಸಂಯುಕ್ತ ತತ್ತ್ವ) ಕಾರ್ಯನಿರತವಾಗಿರುವುದರ ಸಂಕೇತವಾಗಿದೆ.
ಅದೇ ರೀತಿ ‘ಅಕ್ಟೋಬರ್ ೨೦೨೦ ರಲ್ಲಿ ಔದುಂಬರ, ಕೃಷ್ಣತುಳಸಿ ಮತ್ತು ರಾಮತುಳಸಿ ಇವುಗಳಿಂದ ಉತ್ತರೋತ್ತರ ಹೆಚ್ಚೆಚ್ಚು ಸಕಾರಾತ್ಮಕ ಸ್ಪಂದನಗಳ ಪ್ರಕ್ಷೇಪಣೆಯಾಗುವುದು ಮತ್ತು ರಾಮ ತುಳಸಿಯಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಅತೀ ಹೆಚ್ಚಿರುವುದು’, ಇದು ಕಾಲಾನುರೂಪ ದತ್ತ, ಕೃಷ್ಣ ಮತ್ತು ರಾಮ ಈ ದೇವತೆಗಳ ತತ್ತ್ವಗಳು ಕಾರ್ಯನಿರತವಾಗಿದ್ದು ರಾಮ ತತ್ತ್ವದ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರ ಸಂಕೇತವಾಗಿದೆ. – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಗೋವಾ. (೫.೧೨.೨೦೨೦)
ವಿ-ಅಂಚೆ : [email protected]
* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. * ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |