ವಟಪೂರ್ಣಿಮೆ !

ಜ್ಯೇಷ್ಠ ಹುಣ್ಣಿಮೆ, ಅಂದರೆ ೨೪.೬.೨೦೨೧ ರಂದು ವಟಸಾವಿತ್ರಿ ವ್ರತ ಇದೆ. ಕೊರೊನಾದ ಹಾವಳಿಯಿಂದ ಪ್ರಸ್ತುತ ನಮಗೆ ಹೆಚ್ಚಾಗಿ ಮನೆ ಹೊರಗೆ ಹೋಗಲಾಗುವುದಿಲ್ಲ. ಆದುದರಿಂದ ಆಪತ್ಧರ್ಮದ ಭಾಗವೆಂದು ನಾವು ಮುಂದಿನ ಕೃತಿಗಳನ್ನು ಮಾಡಬಹುದು. ಪ್ರಸ್ತುತ ಮಹಾಮಾರಿಯಿಂದ ಅನ್ವಯವಾಗಿರುವ ನಿಯಮಗಳಿಂದಾಗಿ ಮಹಿಳೆಯರು ವಟವೃಕ್ಷದ ಹತ್ತಿರ ಒಟ್ಟಿಗೆ ಸೇರಿ ವಟವೃಕ್ಷವನ್ನು ಪೂಜಿಸಲು ಸಾಧ್ಯವಿಲ್ಲ. ಆದ್ದರಿಂದ ಕೆಲವರು ವಟವೃಕ್ಷದ ಟೊಂಗೆಯನ್ನು ಮನೆಗೆ ತಂದು ಪೂಜಿಸುತ್ತಾರೆ; ಅದು ಸಹ ಸಂಪೂರ್ಣವಾಗಿ ಯೋಗ್ಯವಲ್ಲ. ಈ ಸಮಯದಲ್ಲಿ ಸೌಭಾಗ್ಯವತಿ ಸ್ತ್ರೀಯು ಮನೆಯಿಂದ ಹೊರಗೆ ಹೋಗದೇ ಮನೆಯಲ್ಲಿ ಮುಂದಿನಂತೆ ಪೂಜೆ ಮಾಡಬೇಕು :

೧. ಮಣೆ ಅಥವಾ ಚೌರಂಗಕ್ಕೆ ಪ್ರದಕ್ಷಿಣೆ ಹಾಕಲು ಸಾಧ್ಯವಿರುವಂತೆ ಮಣೆ ಅಥವಾ ಚೌರಂಗವನ್ನು ಪೂರ್ವ-ಪಶ್ಚಿಮವಾಗಿ ಇಡಬೇಕು.

೨. ಮಣೆ ಅಥವಾ ಚೌರಂಗದ ಮೇಲೆ ಗಂಧದಿಂದ ಆಲದ ಮರದ ರೇಖಾಚಿತ್ರವನ್ನು ಬಿಡಿಸಬೇಕು.

೩. ನಾವು ಪ್ರತ್ಯಕ್ಷ ವಟವೃಕ್ಷದ ಕೆಳಗೆ ಕುಳಿತಿದ್ದೇವೆ ಎನ್ನುವ ಭಾವವನ್ನು ಇಟ್ಟುಕೊಂಡು ಅದನ್ನು ವಿಧಿವತ್ತಾಗಿ ಪೂಜಿಸಬೇಕು.

೪. ನಾವು ಪ್ರತ್ಯಕ್ಷ ವಟವೃಕ್ಷಕ್ಕೇ ಪ್ರದಕ್ಷಿಣೆಯನ್ನು ಹಾಕುತ್ತಿದ್ದೇವೆ ಎನ್ನುವ ಭಾವವನ್ನಿಟ್ಟುಕೊಂಡು ಮಣೆಗೆ ಪ್ರದಕ್ಷಿಣೆಯನ್ನು ಹಾಕುತ್ತ ದಾರವನ್ನು ಸುತ್ತಬೇಕು ಮತ್ತು ಪತಿಗೆ ದೀರ್ಘಾಯುಷ್ಯ ಲಭಿಸಲಿ ಎಂದು ಪ್ರಾರ್ಥಿಸಬೇಕು.

೫. ನಗರಗಳ ‘ಫ್ಲಾಟ್ನಲ್ಲಿರುವವರಿಗೆ ಮನೆಯಲ್ಲಿ ಸಾಕಷ್ಟು ಜಾಗವಿಲ್ಲದಿದ್ದರೆ, ಅವರು ಪೂಜೆಯ ಬಳಿಕ ಪ್ರಾರ್ಥಿಸಿ ಮಣೆಯನ್ನು ಪಕ್ಕಕ್ಕೆ ಇರಿಸಿದರೂ ಪರವಾಗಿಲ್ಲ.

– ಶ್ರೀ. ದಾಮೋದರ ವಝೆ, ಸಂಚಾಲಕರು, ಸನಾತನ ಪುರೋಹಿತ ಪಾಠಶಾಲೆ, ರಾಮನಾಥಿ, ಗೋವಾ.