ವ್ಯಕ್ತಿಯ ಉಡುಪನ್ನು ಅವನ ಅಳತೆಗನುಸಾರ ಯೋಗ್ಯ ಪದ್ಧತಿಯಲ್ಲಿ ಹೊಲಿದರೆ ಉಡುಪಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಸಾತ್ತ್ವಿಕತೆ ಬರುತ್ತದೆ, ಎಂಬುದನ್ನು ಕಲಿಸಿದ ಪರಾತ್ಪರ ಗುರು ಡಾ. ಆಠವಲೆ !

ಹೊಲಿಗೆಯ ವಿಷಯದಲ್ಲಿ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಪ್ರತಿಯೊಂದು ವಸ್ತುವಿನಲ್ಲಿ ಅದರ ಗುಣಕ್ಕನುಸಾರ ಸ್ಪಂದನಗಳಿರುತ್ತವೆ. ಉಡುಪಿನ ವಿಧ, ಆಕಾರ, ಬಣ್ಣ, ವಿನ್ಯಾಸ, ಉಡುಪಿನ ಹೊಲಿಗೆ ಇತ್ಯಾದಿಘಟಕಗಳ ಮೇಲೆ ಉಡುಪಿನ ಸ್ಪಂದನ ಗಳು ಅವಲಂಬಿಸಿರುತ್ತವೆ. ಅದೇ ರೀತಿ ಉಡುಪುಗಳನ್ನು ಹೊಲಿಯುವ ವ್ಯಕ್ತಿಯ ಮನಃಸ್ಥಿತಿಯು ಸಹ ಅವನು ಹೊಲಿದಿರುವ ಉಡುಪಿನ ಮೇಲೆ ಸೂಕ್ಷ್ಮದಿಂದ ಪರಿಣಾಮ ಬೀರುತ್ತಾ ಇರುತ್ತದೆ. ಈ ಘಟಕಗಳು ಎಷ್ಟು ಸಾತ್ತ್ವಿಕವಾಗಿರುತ್ತವೆಯೋ ಅಷ್ಟು ಉಡುಪು ಸಾತ್ತ್ವಿಕವಾಗಿ ರೂಪುಗೊಳ್ಳುತ್ತವೆ. ಸಾತ್ತ್ವಿಕ ಉಡುಪನ್ನು ಧರಿಸುವುದರಿಂದ ವ್ಯಕ್ತಿಗೆ ಸಾತ್ತ್ವಿಕತೆ ಮತ್ತು ಈಶ್ವರೀ ಚೈತನ್ಯದ ಲಾಭವಾಗುತ್ತದೆ.

ಇತ್ತೀಚೆಗೆ ಹೆಚ್ಚಿನವರಲ್ಲಿ ಸಿದ್ಧ ಉಡುಪಿನ (ಹೊಲಿದ ಉಡುಪು) ಆಸಕ್ತಿ ಹೆಚ್ಚು ಇದೆ. ಅಂಗಡಿಗಳಲ್ಲಿ ಸಿಗುವ ‘ರೆಡಿಮೇಡ್ ಉಡುಪುಗಳ ‘ಕಟ್ಟಿಂಗ್ ಮತ್ತು ಹೊಲಿಗೆ ಸರಿಯಾಗಿರುವುದಿಲ್ಲ. ಆದ್ದರಿಂದ ಅಂತಹ ಉಡುಪುಗಳ ಭುಜಗಳು ಕೆಳಗಿಳಿಯುತ್ತವೆ, ಉಡುಪು ಸಡಿಲ ಅಥವಾ ಬಿಗಿಯಾಗಿರುತ್ತವೆ. ಉಡುಪುಗಳ ಎತ್ತರ ಅಥವಾ ಎದೆಯ ಸುತ್ತಳತೆಯು ಹೆಚ್ಚುಕಡಿಮೆಯಾಗಿರುತ್ತದೆ, ಉಡುಪಿನ ಜೇಬು ಸರಿಯಾದ ಸ್ಥಾನದಲ್ಲಿರುವುದಿಲ್ಲ, ಹೊಲಿಗೆಯೂ ಸರಿಯಿರುವುದಿಲ್ಲ. ಆದ್ದರಿಂದ ಸಿದ್ಧ ಉಡುಪನ್ನು ಖರೀದಿಸಿದರೂ ಕೆಲವೊಮ್ಮೆ ಅದನ್ನು ದರ್ಜಿಯಿಂದ (ಟೈಲರ್‌ನಿಂದ) ದುರಸ್ತಿ ಮಾಡಿಸಬೇಕಾಗುತ್ತದೆ. ಇದನ್ನು ಹೆಚ್ಚಿನವರು ಅನುಭವಿಸಿರಬಹುದು.

‘ಉಡುಪುಗಳನ್ನು ಹೊಲಿಯುವಾಗ ವ್ಯಕ್ತಿಯ ಅಳತೆಗನುಸಾರ ಯೋಗ್ಯ ಪದ್ಧತಿಯಿಂದ ಏಕೆ ಹೊಲಿಯಬೇಕು ?, ಎಂಬುದನ್ನು ಸ್ಪಷ್ಟಪಡಿಸುವ ವೈಶಿಷ್ಟ್ಯಪೂರ್ಣ ಸಂಶೋಧನೆಯನ್ನು ಮುಂದೆ ಕೊಡಲಾಗಿದೆ. ಈ ಅಭಿನವ ಸಂಶೋಧನೆಯನ್ನು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಮಾಡಲಾಗಿದೆ.

ಸೌ. ಪಾರ್ವತಿ ಜನಾರ್ಧನ

ಪರಾತ್ಪರ ಗುರು ಡಾ. ಆಠವಲೆಯವರು ಅವರ ಹೊಸ ಅಂಗಿಯಲ್ಲಿ ದುರಸ್ತಿ ಮಾಡಲು ಅದನ್ನು ಹೊಲಿಗೆಯ ಸೇವೆ ಮಾಡುವ ಸಾಧಕಿ ಸೌ. ಪಾರ್ವತಿ ಇವರಿಗೆ ಕೊಡುವುದು

ಪರಾತ್ಪರ ಗುರು ಡಾ. ಆಠವಲೆಯವರಿಗಾಗಿ ಬಿಳಿ ಬಣ್ಣದ ಎರಡು ಅಂಗಿಗಳನ್ನು ತರಲಾಗಿತ್ತು. ಅವರು ಅಂಗಿಗಳನ್ನು ಹಾಕಿ ನೋಡಿದಾಗ ಅದು ವ್ಯವಸ್ಥಿತವಾಗಿ ಕೂರುತ್ತಿರಲಿಲ್ಲ. ಆದ್ದರಿಂದ ಅವುಗಳಲ್ಲಿ ಬದಲಾವಣೆ ಮಾಡಲು ಅವರು ಸನಾತನದ ಶೇ. ೬೧ ಆಧ್ಯಾತ್ಮಿಕ ಮಟ್ಟದ ಸಾಧಕಿ ಸೌ. ಪಾರ್ವತಿ ಜನಾರ್ಧನ ಇವರಿಗೆ ಕೊಟ್ಟರು. ಸೌ. ಪಾರ್ವತಿ ಜನಾರ್ಧನ ಇವರು ಸನಾತನದ ರಾಮನಾಥಿ ಆಶ್ರಮದಲ್ಲಿ ಬಟ್ಟೆ ಹೊಲಿಯುವ ಸೇವೆ ಮಾಡುತ್ತಾರೆ. ಅವರು ಅಂಗಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು. ಉದಾ. ಎದೆಯ ಮತ್ತು ಭುಜಗಳ ಅಳತೆಯನ್ನು ಬದಲಾವಣೆ ಮಾಡುವುದು, ಕಂಕುಳದ ಅಳತೆ ಮತ್ತು ಆಕಾರದಲ್ಲಿ ಬದಲಾವಣೆ ಮಾಡುವುದು, ಅಂಗಿಯ ಜೇಬನ್ನು ಸರಿಯಾದ ಸ್ಥಾನದಲ್ಲಿ ಹೊಲಿಯುವುದು, ಬಟನ್‌ಪಟ್ಟಿಯನ್ನು ಸ್ವಲ್ಪ ಸುಧಾರಣೆ ಮಾಡುವುದು ಮತ್ತು ಅಂಗಿಯ ಹಿಂದು ಮುಂದಿನ ಭಾಗವನ್ನು ಸಮಾನಗೊಳಿಸುವುದು ಇತ್ಯಾದಿ. ಎರಡೂ ಅಂಗಿಗಳಲ್ಲಿ ಬದಲಾವಣೆ ಮಾಡಿದ ನಂತರ ಪ್ರತಿಬಾರಿ ಪರಾತ್ಪರ ಗುರು ಡಾ. ಆಠವಲೆಯವರು ಅವುಗಳನ್ನು ಹಾಕಿ ನೋಡುತ್ತಿದ್ದರು ಮತ್ತು ಮುಂದಿನ ಬದಲಾವಣೆಗೆ ಮಾಡಲು ಸೌ. ಪಾರ್ವತಿಯವರಿಗೆ ಕೊಡುತ್ತಿದ್ದರು. ಮೊದಲ ಅಂಗಿಯಲ್ಲಿ ೧೩ ಸಲ ಮತ್ತು ಇನ್ನೊಂದು ಅಂಗಿಯಲ್ಲಿ ೮ ಸಲ ಬದಲಾವಣೆ ಮಾಡಲಾಯಿತು. ಆಗ ಆ ಅಂಗಿಗಳು ಪರಾತ್ಪರ ಗುರು ಡಾ. ಆಠವಲೆಯವರ ಅಳತೆಗೆ ಸರಿಯಾದವು. ಆಗ ಆ ಅಂಗಿಗಳಿಗೆ ಒಳಗಿನಿಂದ ‘ಒವರ್‌ಲಾಕ್ ಹೊಲಿಗೆ ಹಾಕಿ ಪೂರ್ಣಗೊಳಿಸಲಾಯಿತು.

‘ಸೌ. ಪಾರ್ವತಿ ಇವರು ಎರಡೂ ಅಂಗಿಗಳಲ್ಲಿ ಸುಧಾರಣೆ ಮಾಡಿದಾಗ ಆ ಅಂಗಿಗಳಿಗೆ ಮತ್ತು ಅವರ ಮೇಲೆ ಯಾವ ತರಹದ ಆಧ್ಯಾತ್ಮಿಕ ಪರಿಣಾಮವಾಗುತ್ತದೆ ?, ಎಂಬುದನ್ನು ವಿಜ್ಞಾನದ ಮೂಲಕ ಅಭ್ಯಾಸ ಮಾಡಲು ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (‘ಯು.ಎ.ಎಸ್.) ಉಪಕರಣದ ಮೂಲಕ ಪರಿಶೀಲನೆ ಮಾಡಲಾಯಿತು. ಈ ಪರಿಶೀಲನೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ಪರಿಶೀಲನೆಯ ನಿರೀಕ್ಷಣೆಗಳ ವಿವೇಚನೆ

ಸೌ. ಪಾರ್ವತಿ ಜನಾರ್ಧನ ಇವರು ಪ್ರತಿ ಸಲ ಅಂಗಿಗಳ ಸುಧಾರಣೆ ಮಾಡುವ ಮೊದಲು ಮತ್ತು ಮಾಡಿದ ನಂತರ ಅವರ ಹಾಗೂ ಎರಡೂ ಅಂಗಿಗಳ ‘ಯು.ಎ.ಎಸ್ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು.

೧ ಅ. ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿಗೆ ಸಂಬಂಧಿಸಿದ ನಿರೀಕ್ಷಣೆಗಳ ವಿಶ್ಲೇಷಣೆ

೧ ಅ ೧. ಅಂಗಿಗಳಲ್ಲಿ ಬದಲಾವಣೆ ಮಾಡಿದ ನಂತರ ಅವುಗಳಲ್ಲಿನ ಸಕಾರಾತ್ಮಕ ಶಕ್ತಿಯು ತುಂಬಾ ಪ್ರಮಾಣದಲ್ಲಿ ಹೆಚ್ಚಳವಾಯಿತು : ಎರಡೂ ಅಂಗಿಗಳಲ್ಲಾದ ಪ್ರತಿಯೊಂದು ಹಂತದಲ್ಲಿ ಬದಲಾವಣೆ ಮಾಡುತ್ತಾ ಹೋದಂತೆ ಅವುಗಳಲ್ಲಿ ಸಕಾರಾತ್ಮಕ ಶಕ್ತಿಯ ಪ್ರಮಾಣವು ಹೆಚ್ಚಾಗುತ್ತಾ ಹೋಯಿತು. ಸ್ಥಳದ ಅಭಾವದಿಂದ ಅಂಗಿಗಳಲ್ಲಿ ಎಲ್ಲ ಬದಲಾವಣೆಗಳ ನಿರೀಕ್ಷಣೆಯನ್ನು ಕೊಡದೆ ಕೆಲವೇ ಆಯ್ದ ಬದಲಾವಣೆಯ ನಿರೀಕ್ಷಣೆಗಳನ್ನು ಕೆಳಗೆ ನೀಡಿದ ಕೋಷ್ಟಕದಲ್ಲಿ ಕೊಡಲಾಗಿದೆ. (ಕೆಲವು ಕಡೆ ಅಂಗಿಗಳ ಬದಲಾವಣೆ ಮಾಡಿದ ನಂತರ ಅವುಗಳಲ್ಲಿ ನಕಾರಾತ್ಮಕ ಶಕ್ತಿ ಕಂಡುಬಂದಿದೆ. ಇದರ ಕಾರಣವನ್ನು ವಿಷಯ ‘೨ ಇ ಯಲ್ಲಿ ಕೊಡಲಾಗಿದೆ.)

ಟಿಪ್ಪಣಿ : ಅಂತಿಮ ಬದಲಾವಣೆ ಎಂದರೆ ೧೩ ನೇ ಬದಲಾವಣೆ ನಂತರ ಮೊದಲ ಅಂಗಿಯ ಮತ್ತು ೮ ನೇ ಬದಲಾವಣೆ ನಂತರ ಇನ್ನೊಂದು ಅಂಗಿಯ ಒಳಗಿನ ಹೊಲಿಗೆಗೆ ‘ಒವರ್‌ಲಾಕ್’ ಹೊಲಿಗೆ ಹಾಕಲಾಯಿತು.

೧ ಅ ೨. ಅಂಗಿಗಳಲ್ಲಿ ಸುಧಾರಣೆ ಮಾಡಿದ ನಂತರ ಸೌ. ಪಾರ್ವತಿ ಇವರಲ್ಲಿನ ನಕಾರಾತ್ಮಕ ಶಕ್ತಿಯು ಕಡಿಮೆಯಾಗಿ ಅವರಲ್ಲಿನ ಸಕಾರಾತ್ಮಕ ಶಕ್ತಿಯು ಹೆಚ್ಚಾಗುವುದು : ಎರಡೂ ಅಂಗಿಗಳಲ್ಲಿ ಬದಲಾವಣೆ ಮಾಡುತ್ತಾ ಹೋದಾಗ ಸೌ. ಪಾರ್ವತಿಯವರಲ್ಲಿನ ನಕಾರಾತ್ಮಕ ಶಕ್ತಿಯು ಕಡಿಮೆಯಾಗಿ ಅವರಲ್ಲಿನ ಸಕಾರಾತ್ಮಕ ಶಕ್ತಿಯು ಹೆಚ್ಚಾಯಿತು. ಸ್ಥಳದ ಅಭಾವದಿಂದ ಸೌ. ಪಾರ್ವತಿಯವರ ಎಲ್ಲ ನಿರೀಕ್ಷಣೆಗಳನ್ನು ಕೊಡದೆ, ಕೆಲವು ಆಯ್ದ ನಿರೀಕ್ಷಣೆಗಳನ್ನು ಮಾತ್ರ ಮುಂದಿನ ಪುಟದಲ್ಲಿರುವ ಕೋಷ್ಟಕದಲ್ಲಿ ಕೊಡಲಾಗಿದೆ.

ಪರಿಶೀಲನೆಯಲ್ಲಿನ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಸೌ. ಪಾರ್ವತಿಯವರು ಅಂಗಿಗಳಲ್ಲಿ ಸುಧಾರಣೆ ಮಾಡಿದ ನಂತರ ಅಂಗಿಗಳಲ್ಲಿನ ಸಕಾರಾತ್ಮಕ ಶಕ್ತಿಯ ಪ್ರಮಾಣವು ಹೆಚ್ಚಳವಾಗುವುದರ ಕಾರಣ

ಸೌ. ಮಧುರಾ ಕರ್ವೆ

೨ ಅ ೧. ಸೌ. ಪಾರ್ವತಿಯವರು ಅಂಗಿಗಳನ್ನು ಯೋಗ್ಯವಾದ ಪದ್ಧತಿಯಲ್ಲಿ ಸುಧಾರಣೆ ಮಾಡಿದ್ದರಿಂದ ಅವುಗಳಲ್ಲಿ ಸಾತ್ತ್ವಿಕತೆ ಹೆಚ್ಚಾಗುವುದು : ಸೌ. ಪಾರ್ವತಿಯವರಿಗೆ ಎರಡೂ ಅಂಗಿಗಳನ್ನು ಅನೇಕ ಬಾರಿ ವಿವಿಧ ಪ್ರಕಾರದ ಸುಧಾರಣೆ ಮಾಡಬೇಕಾಯಿತು. ಸೌ. ಪಾರ್ವತಿಯವರು ಸುಧಾರಣೆ ಮಾಡುತ್ತಿದ್ದಂತೆಯೇ ಪರಾತ್ಪರ ಗುರು ಡಾ. ಆಠವಲೆಯವರು ಅವುಗಳನ್ನು ಹಾಕಿ ನೋಡುತ್ತಿದ್ದರು. ಅಂಗಿಯನ್ನು ಹಾಕಿದಾಗ ಕೆಲವು ಕಡೆಗಳಲ್ಲಿ ನೆರಿಗೆ ಬೀಳುತ್ತಿತ್ತು. ಉಡುಪಿಗೆ ನೆರಿಗೆ ಬಿದ್ದರೆ ಅದರಿಂದ ಒಳ್ಳೆಯ ಸ್ಪಂದನ ಬರುವುದಿಲ್ಲ. ಆದ್ದರಿಂದ ಅವರು ಸೌ. ಪಾರ್ವತಿಯವರಿಗೆ ನೆರಿಗೆಯನ್ನು ತೆಗೆಯಲು ಹೇಳಿದರು. ಸೌ. ಪಾರ್ವತಿಯವರು ನೆರಿಗೆಯನ್ನು ತೆಗೆಯಲು ತುಂಬಾ ಶ್ರಮಪಟ್ಟರು. ಸಾಮಾನ್ಯವಾಗಿ ಸಿದ್ಧ ಉಡುಪಿನಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸುಧಾರಣೆ ಮಾಡುವಾಗ ಅದನ್ನು ಅತ್ಯಂತ ಕೌಶಲ್ಯದಿಂದ ಮತ್ತು ಪಟ್ಟುಹಿಡಿದು ಮಾಡಬೇಕಾಗುತ್ತದೆ. ಮೊದಲ ಅಂಗಿಯಲ್ಲಿ ಒಟ್ಟು ೧೩ ಸಲ ಮತ್ತು ಎರಡನೆಯ ಅಂಗಿಯಲ್ಲಿ ೮ ಸಲ ಬದಲಾವಣೆಗಳನ್ನು ಮಾಡಿದ ನಂತರ ಆ ಅಂಗಿಗಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ಸರಿಯಾಗಿ ಅಳತೆಗೆ ಆದವು.

೨ ಅ ೨. ಸೌ. ಪಾರ್ವತಿಯವರಲ್ಲಿರುವ ಕಲಿಯುವ ವೃತ್ತಿಯಿಂದ ಮೊದಲಿನ ಅಂಗಿಯ ತುಲನೆಯಲ್ಲಿ ಎರಡನೇ ಅಂಗಿ ಕಡಿಮೆ ಬದಲಾವಣೆಯಿಂದ ಅಂತಿಮವಾಗುವುದು : ಮೊದಲ ಅಂಗಿಯ ಅನುಭವದಿಂದ ಕಲಿತು ಎರಡನೇ ಅಂಗಿಯಲ್ಲಿ ಬದಲಾವಣೆ ಮಾಡುವಾಗ ಸೌ. ಪಾರ್ವತಿಯವರು ಪರಾತ್ಪರ ಗುರು ಡಾಕ್ಟರರು ಹೇಳಿದಂತೆ ಇನ್ನೊಂದು ಅಂಗಿಯನ್ನು ಪೂರ್ಣ ಬಿಡಿಸಿ ಪುನಃ ಅದರ ಕಟ್ಟಿಂಗ್‌ನಲ್ಲಿ ಸುಧಾರಣೆ ಮಾಡಿಕೊಂಡು ಹೊಲಿದರು. ಸಾಮಾನ್ಯವಾಗಿ ‘ರೆಡಿಮೇಡ್ ಅಂಗಿಗಳ ಕಟ್ಟಿಂಗ್ ಯೋಗ್ಯ ರೀತಿಯಲ್ಲಿ ಆಗಿರುವುದಿಲ್ಲ ಹಾಗಾಗಿ  ಅದನ್ನು ಸುಧಾರಣೆ ಮಾಡಲು ತುಂಬಾ ಕಷ್ಟವಾಗುತ್ತದೆ. ಅದೇ ರೀತಿ ಮೊದಲು ಅಳತೆಗನುಸಾರ ಕಟ್ಟಿಂಗ್ ಮಾಡುವಾಗ ಓರೆಕೋರೆ ಯಾಗಿ ಕಟ್ಟಿಂಗ್ ಮಾಡಿದ್ದರೆ ಅದರಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಸೌ. ಪಾರ್ವತಿಯವರಿಗೆ ಮೊದಲಿನ ಅಂಗಿಯನ್ನು ಬಿಡಿಸಿ ಸುಧಾರಣೆ ಮಾಡುವಾಗ ಇದೇ ಅನುಭವವಾಯಿತು. ಆದ್ದರಿಂದ ಅವರು ಇನ್ನೊಂದು ಅಂಗಿಯನ್ನು ಮೊದಲೇ ಸಂಪೂರ್ಣ ಬಿಡಿಸಿ ಪುನಃ ಅದನ್ನು ಯೋಗ್ಯ ರೀತಿಯಲ್ಲಿ ಕಟ್ಟಿಂಗ್ ಮಾಡಿ ಹೊಲಿದು ಪೂರ್ಣಗೊಳಿಸಿದರು. ಆದ್ದರಿಂದ ಇದಕ್ಕೆ ಕಡಿಮೆ ಸಮಯ ತಗಲಿತು. ‘ಇದರಿಂದ ಉಡುಪುಗಳನ್ನು ಹೊಲಿಸುವಾಗ ಅಳತೆಗನುಸಾರ ಯೋಗ್ಯ ರೀತಿಯಲ್ಲಿ ಕತ್ತರಿಸುವುದು ಎಷ್ಟು ಆವಶ್ಯಕವಾಗಿದೆಯೆಂಬುದು ಅರಿವಾಗುತ್ತದೆ. ಸೌ. ಪಾರ್ವತಿಯವರು ಅಂಗಿಗಳಲ್ಲಿ ಮಾಡಿದ ಯೋಗ್ಯ ಸುಧಾರಣೆಯಿಂದಾಗಿ ಅಂಗಿಗಳಲ್ಲಿ ಈಶ್ವರೀ ಚೈತನ್ಯವನ್ನು ಆಕರ್ಷಿಸುವ ಕ್ಷಮತೆ ಹೆಚ್ಚುತ್ತಾ ಹೋಯಿತು. ಇದರ ಪರಿಣಾಮವೆಂದು ಅಂಗಿಗಳಲ್ಲಿ ಸುಧಾರಣೆ ಮಾಡಿದ ನಂತರ ಅವುಗಳಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತಾ ಹೋಯಿತು.

೨ ಆ. ಸೌ. ಪಾರ್ವತಿಯವರು ಸಂತರ ಉಡುಪನ್ನು ಹೊಲಿಯುವ ಸೇವೆಯನ್ನು ಭಾವಪೂರ್ಣ ಮಾಡಿರುವುದರಿಂದ ಅವರಿಗೆ ಸೇವೆಯಿಂದ ಚೈತನ್ಯ ಸಿಕ್ಕಿತು : ಅಂಗಿಗಳನ್ನು ಸುಧಾರಣೆ ಮಾಡುವುದು ತುಂಬಾ ಕ್ಲಿಷ್ಟಕರ ಮತ್ತು ಕಠಿಣ ಕೆಲಸವಾಗಿರುತ್ತದೆ. ಕೆಲವೊಮ್ಮೆ ಅದನ್ನು ಮಾಡಲು ಸಾಧ್ಯವೂ ಆಗುವುದಿಲ್ಲ. ಆದ್ದರಿಂದ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ಬಂದು ಅವರಿಗೆ ಒತ್ತಡವಾಗುತ್ತಿತ್ತು. ಎರಡೂ ಅಂಗಿಗಳನ್ನು ಸುಧಾರಣೆ ಮಾಡುತ್ತಿರುವಾಗ ಕೆಲವೊಮ್ಮೆ ಅವರ ವಿಷಯದಲ್ಲಿ ಅನೇಕ ಪ್ರಸಂಗಗಳು ನಡೆಯುತ್ತಿದ್ದವು; ಆದ್ದರಿಂದ ಅವರ ಮನಸ್ಸು ಅಸ್ಥಿರವಾಗುತ್ತಿತ್ತು.  ಅವರ ಮಾನಸಿಕ ಸ್ಥಿತಿಯಿಂದ ಅವರ ಹೊಲಿಗೆಯ ಮೇಲೆ ಪರಿಣಾಮವಾಗುತ್ತಿತ್ತು. ಈ ವಿಷಯ ಅವರಿಗೆ ಅರಿವಾದಾಗ ಅವರು ಪ.ಪೂ. ಬಾಬಾರವರಿಗೆ (ಭಕ್ತರಾಜ ಮಹಾರಾಜರಿಗೆ) ಅತ್ಯಂತ ಶರಣಾಗತಭಾವದಿಂದ ಭಾವಪೂರ್ಣ ಪ್ರಾರ್ಥನೆ ಮಾಡಿದರು. ಅನಂತರ ಅವರ ಮನಸ್ಸು ಶಾಂತವಾಗಿ ಅವರಲ್ಲಿ ಸಕಾರಾತ್ಮಕತೆ ಉಂಟಾಯಿತು. ಅವರ ಮನಸ್ಸು ಸ್ಥಿರವಾದ ನಂತರ ಅವರು ಪುನಃ ಹೊಲಿಯಲು ಪ್ರಾರಂಭಿಸಿದರು. ಸೌ. ಪಾರ್ವತಿಯವರು ಈ ರೀತಿಯಲ್ಲಿ ಪರಿಸ್ಥಿತಿಯನ್ನು ಸ್ವೀಕರಿಸಿ ಮತ್ತು ಸಕಾರಾತ್ಮಕರಾಗಿದ್ದು ಅಂಗಿಯಲ್ಲಿನ ಎಲ್ಲ ಬದಲಾವಣೆಗಳನ್ನು ಬೇಸರಪಡದೆ ಪಟ್ಟು ಹಿಡಿದು ಮಾಡಿದರು. ಸಂತರ ಉಡುಪನ್ನು (ಪರಾತ್ಪರ ಗುರು ಡಾ. ಆಠವಲೆಯವರ ಅಂಗಿಗಳು) ಹೊಲಿಯುವ ಸೇವೆಯನ್ನು ಭಾವಪೂರ್ಣವಾಗಿ ಮಾಡಿರುವುದರಿಂದ ಸೇವೆಯಿಂದ ಚೈತನ್ಯ ಸಿಕ್ಕಿತು. ಅವರು ಮಾಡಿದ ಪ್ರತಿಯೊಂದು ಸೇವೆಯ ನಂತರ ಅವುಗಳನ್ನು ‘ಯು.ಎ.ಎಸ್. ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ಆಗ ಅವರಲ್ಲಿನ ನಕಾರಾತ್ಮಕ ಶಕ್ತಿಯು ತುಂಬಾ ಕಡಿಮೆಯಾಗಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗಿರುವುದು ಕಾಣಿಸಿತು.

೨ ಇ. ಕೆಲವೊಮ್ಮೆ ಅಂಗಿಗಳಲ್ಲಿ ಸುಧಾರಣೆ ಮಾಡಿದ ನಂತರ ಅವರಲ್ಲಿ ನಕಾರಾತ್ಮಕ ಶಕ್ತಿ ಕಾಣಿಸಲು ಕಾರಣವೇನು ? : ಅನಿಷ್ಟ ಶಕ್ತಿಗಳು ಅಂಗಿಗಳ ಮೇಲೆ ಕಪ್ಪು ಆವರಣವನ್ನು ಹರಡಿಸಿ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯವಾದ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಅಭಿನವ ಸಂಶೋಧನೆಯಲ್ಲಿ ಅಡಚಣೆಯನ್ನು ತರಲು ಪ್ರಯತ್ನ ಮಾಡಿದವು. ಅಂಗಿಯಲ್ಲಿ ಕೆಲವೊಮ್ಮೆ ತೊಂದರೆದಾಯಕ ಶಕ್ತಿಗಳ ಆವರಣ ಬಂದಿರುವುದರಿಂದ ಅವರಲ್ಲಿ ನಕಾರಾತ್ಮಕ ಇಂಧನವು ಕಾಣಿಸಿತು. ಅಂಗಿಗಳಲ್ಲಿ ಸುಧಾರಣೆ ಮಾಡಿದ ನಂತರ ಅವುಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ಹಾಕಿ ನೋಡುತ್ತಿದ್ದರು. ಆಗ ಅವರಿಂದ ಪ್ರಕ್ಷೇಪಣೆಯಾಗುವ ಚೈತನ್ಯದಿಂದ ಅಂಗಿಗಳಲ್ಲಿನ ಆವರಣ ನಷ್ಟವಾಗಿ ಅವುಗಳಲ್ಲಿ ಚೈತನ್ಯವು ಹೆಚ್ಚಾಗುತ್ತಿತ್ತು. ಈಶ್ವರನ ಕೃಪೆಯಿಂದ ಸಂಶೋಧನೆಯಲ್ಲಿ ಬರುವ ಎಲ್ಲ ಅಡಚಣೆಗಳು ದೂರವಾಗಿ ಸಂಶೋಧನೆ ಪೂರ್ಣವಾಯಿತು. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಈ ಅಭಿನವ ಸಂಶೋಧನೆಯಿಂದ ಉಡುಪುಗಳನ್ನು ಹೊಲಿಯುವಾಗ ಅಳತೆಗನುಸಾರ ಅವುಗಳನ್ನು ಯೋಗ್ಯಪದ್ಧತಿಯಲ್ಲಿ ಹೊಲಿಯುವುದು ಎಷ್ಟು ಆವಶ್ಯಕವಾಗಿದೆ, ಎಂಬುದು ಅರಿವಾಗುತ್ತದೆ. ಉಡುಪನ್ನು ಹೊಲಿಯುವ ವ್ಯಕ್ತಿಯ ಮನಃಸ್ಥಿತಿಯ ಸೂಕ್ಷ್ಮ ಪರಿಣಾಮವು ಅವನು ಹೊಲಿಯುವ ಉಡುಪಿನ ಮೇಲಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟು ಬಟ್ಟೆಗಳನ್ನು ಹೊಲಿಯುವವರು ಸೌ. ಪಾರ್ವತಿಯವರ ಹಾಗೆ ಪ್ರಯತ್ನ ಮಾಡಿದರೆ ಅವರಿಗೂ ಚೈತನ್ಯ ಸಿಗಬಹುದು ಹಾಗೂ ಉಡುಪು ಸಾತ್ತ್ವಿಕವಾಗುವುದರಿಂದ ಅವುಗಳನ್ನು ಉಪಯೋಗಿಸುವವರಿಗೆ ಸಾತ್ತ್ವಿಕತೆಯ ಲಾಭವಾಗುವುದು. ಬಟ್ಟೆಗಳ ಹೊಲಿಗೆಯ ವಿಷಯದಲ್ಲಿನ ಈ ಸಂಶೋಧನೆಯಿಂದ ಯೋಗ್ಯವಾದ ಅಳತೆಗನುಸಾರ ಉಡುಪುಗಳನ್ನು ಹೊಲಿಯುವುದರ ಮಹತ್ವ ಅರಿವಾಗುತ್ತದೆ. ಸಮಾಜದಲ್ಲಿ ಎಲ್ಲರೂ ಸಾತ್ತ್ವಿಕ ಉಡುಪುಗಳನ್ನು ಹೊಲಿಸಿದರೆ ಅದರಿಂದ ಅವರಿಗೆ ಈಶ್ವರೀ ಚೈತನ್ಯ ಸಿಗುವುದು. ಆದ್ದರಿಂದ ಸಮಾಜದ ಸಾತ್ತ್ವಿಕತೆಯೂ ಹೆಚ್ಚಾಗುವುದು. – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ವಿ-ಅಂಚೆ : [email protected]

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.