ಬಟ್ಟೆಗಳ ಮೇಲಿನ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ವಿನ್ಯಾಸಗಳಿಂದ ಪ್ರಕ್ಷೇಪಣೆಯಾಗುವ ಸ್ಪಂದನಗಳಿಂದ ವಾತಾವರಣದ ಮೇಲಾಗುವ ಪರಿಣಾಮಗಳು

ಬಟ್ಟೆಗಳ ವಿಷಯದಲ್ಲಿ ನಾವೀನ್ಯಪೂರ್ಣ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಥರ್ಮೋಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ಪ್ರತಿಯೊಂದು ವಸ್ತುವಿನಲ್ಲಿ ಅದರ ಗುಣಧರ್ಮಕ್ಕನುಸಾರ ಒಳ್ಳೆಯ ಅಥವಾ ಕೆಟ್ಟ ಸ್ಪಂದನಗಳಿರುತ್ತವೆ. ನಮ್ಮ ಸುತ್ತಮುತ್ತಲಿನ ಮತ್ತು ನಾವು ಉಪಯೋಗಿಸುತ್ತಿರುವ ಅನೇಕ ವಸ್ತುಗಳ ಸ್ಪಂದನಗಳಿಂದ ನಮ್ಮ ಮೇಲೆ ನಿರಂತರವಾಗಿ ಪರಿಣಾಮವಾಗುತ್ತಿರುತ್ತದೆ, ಆದುದರಿಂದ ಆ ವಸ್ತುಗಳು ಸತ್ತ್ವಪ್ರಧಾನವಾಗಿರುವುದು ಆವಶ್ಯಕವಾಗಿದೆ. ಇತರ ಯಾವುದೇ ವಸ್ತುಗಳಿಗಿಂತ ಮೈಮೇಲಿನ ಬಟ್ಟೆಗಳಿಗೆ ಮತ್ತು ನಮಗೆ ಬಹಳ ಹತ್ತಿರದ ಸಂಬಂಧವಿರುತ್ತದೆ. ಬಟ್ಟೆಗಳ ವಿಧ, ಬಟ್ಟೆಗಳ ಬಣ್ಣ, ಬಟ್ಟೆಗಳ ಮೇಲಿನ ವಿನ್ಯಾಸ ಮತ್ತು ಬಟ್ಟೆಗಳ ಹೊಲಿಗೆಯ ಮೇಲೆ ಆ ಬಟ್ಟೆಗಳ ಸಾತ್ತ್ವಿಕತೆ ಅವಲಂಬಿಸಿರುತ್ತದೆ. ಇಂದಿನ ಯುವ ಪೀಳಿಗೆಯು ‘ಫ್ಯಾಶನ್ ಹೆಸರಿನಲ್ಲಿ ಚಿತ್ರವಿಚಿತ್ರ ಆಕೃತಿಗಳಿರುವ, ವಿಭಿನ್ನ ಬಣ್ಣದ, ಜೀನ್ಸ್-ಸ್ಟ್ರೆಚ್ಚೇಬಲ್ಸ್‌ನಂತಹ ಕಡಿಮೆ ಮತ್ತು ಬಿಗಿಯಾಗಿರುವ ಬೇರೆ ಬೇರೆ ವಿಧದ ಬಟ್ಟೆಗಳನ್ನು ಉಪಯೋಗಿಸುತ್ತಿದೆ. ಇತ್ತೀಚೆಗೆ ಫ್ಯಾಶನ್ ಹೆಸರಿನಲ್ಲಿ ನಡುನಡುವೆ ಹರಿದಿರುವ ಜೀನ್ಸ್ ಪ್ಯಾಂಟಗಳನ್ನು ಉಪಯೋಗಿಸಲಾಗುತ್ತಿದೆ. ಇವೆಲ್ಲವೂ ವಿಕೃತ ಉಡುಗೆತೊಡುಗೆಗಳಾಗಿವೆ. ವಿಕೃತ ಉಡುಗೆ ತೊಡುಗೆಗಳೆಂದರೆ ರಜ-ತಮಾತ್ಮಕ ಸ್ಪಂದನಗಳನ್ನು ನಿರ್ಮಿಸುವ ಉಡುಗೆತೊಡುಗೆಗಳು. ಇವುಗಳಿಂದ ಮನುಷ್ಯನ ಬುದ್ಧಿ ವಿಕೃತವಾಗುತ್ತದೆ. ಅವನು ಅನೇಕ ರೀತಿಯ ದುಷ್ಪ್ರವೃತ್ತಿಗಳ ಗುಲಾಮ ನಾಗುತ್ತಾನೆ, ಕಾಮ-ಕ್ರೋಧಾದಿ ಷಡ್ರಿಪುಗಳ ಅಧೀನನಾಗುತ್ತಾನೆ ಹಾಗೂ ಕೆಟ್ಟ ಶಕ್ತಿಗಳ ಆಕ್ರಮಣಕ್ಕೆ ತುತ್ತಾಗುತ್ತಾನೆ. ತದ್ವಿರುದ್ಧ ಮನುಷ್ಯನು ಸಾತ್ತ್ವಿಕ ಬಟ್ಟೆಗಳನ್ನು ಧರಿಸುವುದರಿಂದ ಅವನಿಗೆ ಈಶ್ವರೀ ಚೈತನ್ಯವನ್ನು ಗ್ರಹಿಸಲು ಸಾಧ್ಯವಾಗುವುದರಿಂದ ಅವನ ಮನಸ್ಸು ಮತ್ತು ಬುದ್ಧಿಯು ಸಾತ್ತ್ವಿಕವಾಗುತ್ತದೆ. ಅವನು ಸದಾಚಾರಯುಕ್ತ ಮತ್ತು ಜ್ಞಾನವುಳ್ಳವನಾಗುತ್ತಾನೆ, ಹಾಗೆಯೇ ಅವನು ಕೆಟ್ಟ ಶಕ್ತಿಗಳ ಆಕ್ರಮಣಳಿಂದ ರಕ್ಷಿಸಲ್ಪಡುತ್ತಾನೆ.

ಬಟ್ಟೆಗಳ ಮೇಲಿನ ಸಾತ್ತ್ವಿಕ, ರಾಜಸಿಕ ಹಾಗೂ ತಾಮಸಿಕ ವಿನ್ಯಾಸಗಳಿಂದ ಪ್ರಕ್ಷೇಪಣೆಯಾಗುವ ಸ್ಪಂದನಗಳಿಂದ ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ, ಎಂಬುದನ್ನು ವಿಜ್ಞಾನದ ಮಾಧ್ಯಮದ ಮೂಲಕ ಅಧ್ಯಯನ ಮಾಡಲು ೧೬.೩.೨೦೨೦ ರಂದು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯ ಸ್ವರೂಪ, ಮಾಡಿದ ಅಳತೆಗಳ ನೋಂದಣಿ ಮತ್ತು ಅವುಗಳ ವಿವರಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ಸ್ವರೂಪ

ಈ ಪರೀಕ್ಷಣೆಯಲ್ಲಿ ಬಟ್ಟೆಗಳ ಮೇಲಿನ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ವಿನ್ಯಾಸಗಳ ಗಣಕೀಯ ಪ್ರಿಂಟ್‌ಗಳನ್ನು (ಕಲರ್ ಪ್ರಿಂಟ್) ತೆಗೆದು ಅವುಗಳ ‘ಯು.ಎ.ಎಸ್. ಉಪಕರಣದ ಮೂಲಕ ಮಾಡಿದ ಅಳತೆಗಳ ನೋಂದಣಿಗಳನ್ನು ಮಾಡಲಾಯಿತು.

೨. ಅಳತೆಗಳ ನೋಂದಣಿಗಳು ಮತ್ತು ಅವುಗಳ ವಿವೇಚನೆ

೨ ಅ. ನಕಾರಾತ್ಮಕ ಊರ್ಜೆಯ ಬಗ್ಗೆ ಮಾಡಿದ ಅಳತೆಗಳ ವಿವೇಚನೆ

೨ ಅ ೧. ಸಾತ್ತ್ವಿಕ ಹಾಗೂ ರಾಜಸಿಕ ಈ ಎರಡೂ ವಿಧದ ವಿನ್ಯಾಸಗಳಲ್ಲಿ ‘ಇನ್ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ವಿಧದ ನಕಾರಾತ್ಮಕ ಊರ್ಜೆಗಳು ಕಂಡು ಬರಲಿಲ್ಲ.

೨ ಅ ೨. ತಾಮಸಿಕ ವಿನ್ಯಾಸಗಳಲ್ಲಿ ತುಂಬಾ ನಕಾರಾತ್ಮಕ ಊರ್ಜೆ ಕಂಡು ಬಂದಿತು : ತಾಮಸಿಕ ವಿನ್ಯಾಸಗಳಲ್ಲಿ ‘ಇನ್ಫ್ರಾರೆಡ್ ಮತ್ತು ‘ಅಲ್ಟ್ರಾವೈಲೆಟ್ ಈ ಎರಡೂ ವಿಧದ ನಕಾರಾತ್ಮಕ ಊರ್ಜೆಗಳು ಕಂಡು ಬಂದವು ಮತ್ತು ಅವುಗಳ ಪ್ರಭಾವಲಯಗಳು ಅನುಕ್ರಮವಾಗಿ ೭.೫೧ ಮೀಟರ್ ಮತ್ತು ೬.೩೪ ಮೀಟರ್‌ನಷ್ಟಿತ್ತು.

೨ ಆ. ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ವಿವೇಚನೆ : ಎಲ್ಲ ವ್ಯಕ್ತಿಗಳು, ವಾಸ್ತು ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇದ್ದೇ ಇರುತ್ತದೆ ಎಂದೇನಿಲ್ಲ.

೨ ಆ ೧. ರಾಜಸಿಕ ವಿನ್ಯಾಸಗಳ ತುಲನೆಯಲ್ಲಿ ಸಾತ್ತ್ವಿಕ ವಿನ್ಯಾಸಗಳಲ್ಲಿ ತುಂಬಾ ಹೆಚ್ಚು ಸಕಾರಾತ್ಮಕ ಊರ್ಜೆ ಇರುತ್ತದೆ : ಸಾತ್ತ್ವಿಕ ಹಾಗೂ ರಾಜಸಿಕ ವಿನ್ಯಾಸಗಳಲ್ಲಿ ಸಕಾರಾತ್ಮಕ ಊರ್ಜೆ ಇತ್ತು ಮತ್ತು ಅವುಗಳ ಪ್ರಭಾವಲಯಗಳು ಅನುಕ್ರಮವಾಗಿ ೫.೪೬ ಮೀಟರ್ ಮತ್ತು ೧.೪೦ ಮೀಟರ್ ಇತ್ತು. ಅಂದರೆ ರಾಜಸಿಕ ವಿನ್ಯಾಸಗಿಂತ ಸಾತ್ತ್ವಿಕ ವಿನ್ಯಾಸದ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೪.೦೪ ಮೀಟರ್‌ನಷ್ಟು ಹೆಚ್ಚಿತ್ತು.

೨ ಆ ೨. ತಾಮಸಿಕ ವಿನ್ಯಾಸಗಳಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ.

೨ ಇ. ಒಟ್ಟು ಪ್ರಭಾವಲಯಗಳ (ಟಿಪ್ಪಣಿ) ವಿಷಯದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ : ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಒಟ್ಟು ಪ್ರಭಾವಲಯವು ಸುಮಾರು ೧ ಮೀಟರ್‌ನಷ್ಟಿರುತ್ತದೆ.

ಟಿಪ್ಪಣಿ : ಒಟ್ಟು ಪ್ರಭಾವಲಯ (ಔರಾ) : ವ್ಯಕ್ತಿಯ ವಿಷಯದಲ್ಲಿ ಅವನ ಜೊಲ್ಲು (ಉಗುಳು), ಹಾಗೆಯೇ ವಸ್ತುವಿನ ವಿಷಯದಲ್ಲಿ ಅದರ ಮೇಲಿನ ಧೂಳಿನ ಕಣಗಳು ಅಥವಾ ಅದರ ಸ್ವಲ್ಪ ಭಾಗವನ್ನು ಮಾದರಿಯೆಂದು ಉಪಯೋಗಿಸಿ ಆ ವ್ಯಕ್ತಿಯ ಅಥವಾ ವಸ್ತುವಿನ ಒಟ್ಟು ಪ್ರಭಾವಲಯವನ್ನು ಅಳೆಯಲಾಗುತ್ತದೆ.

೨ ಇ ೧. ಪರೀಕ್ಷಣೆಯ ಘಟಕಗಳ ಒಟ್ಟು ಪ್ರಭಾವಲಯ

ಈ ಮೇಲಿನ ಎಲ್ಲ ಅಂಶಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ವಿಷಯ ‘೩’ ರಲ್ಲಿ ಮಾಡಲಾಗಿದೆ.

೩. ಅಳತೆಗಳ ನೋಂದಣಿಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ರಾಜಸಿಕ ವಿನ್ಯಾಸಗಳ ತುಲನೆಯಲ್ಲಿ ಸಾತ್ತ್ವಿಕ ವಿನ್ಯಾಸಗಳಿಂದ ತುಂಬಾ ಹೆಚ್ಚು ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ : ಪರೀಕ್ಷಣೆಯಲ್ಲಿ ರಾಜಸಿಕ ವಿನ್ಯಾಸಗಳ ತುಲನೆಯಲ್ಲಿ ಸಾತ್ತ್ವಿಕ ವಿನ್ಯಾಸಗಳು ತುಂಬಾ ಹೆಚ್ಚು ಸಾತ್ತ್ವಿಕವಾಗಿವೆ. ಸಾತ್ತ್ವಿಕ ವಿನ್ಯಾಸಗಳಲ್ಲಿ ನೀಲಿ ಬಣ್ಣದ ಒಂದೇ ರೀತಿಯ ಹಿನ್ನೆಲೆಯಲ್ಲಿ (ಬ್ಯಾಕ್‌ಗ್ರೌಂಡ್‌ನಲ್ಲಿ) ಬಿಳಿ ಬಣ್ಣದ ಚಿಕ್ಕ ಮತ್ತು ಒಂದೇ ಆಕಾರದ ನಾಜೂಕು ಹೂವುಗಳಿವೆ; ಹಾಗೆಯೇ ಅವುಗಳ ರಚನೆಯು ಬಿಡಿಬಿಡಿಯಾಗಿದೆ. ಆದುದರಿಂದ ಸಾತ್ತ್ವಿಕ ವಿನ್ಯಾಸಗಳಿಂದ ತುಂಬಾ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಿದವು. ತದ್ವಿರುದ್ಧ ರಾಜಸಿಕ ವಿನ್ಯಾಸದಲ್ಲಿ ಗುಲಾಬಿ ಬಣ್ಣದ, ಚಿಕ್ಕ ಮತ್ತು ದೊಡ್ಡ ಆಕಾರದ ಹೂವುಗಳು ಮತ್ತು ಕಂದು ಬಣ್ಣದ ಚೂಪಾದ ಎಲೆಗಳಿವೆ; ಹಾಗೆಯೇ ಅವುಗಳ ರಚನೆಯು ಬಿಡಿಬಿಡಿಯಾಗಿರದೆ ಪರಸ್ಪರ ತುಂಬಾ ಸಮೀಪದಲ್ಲಿವೆ. ಆದ್ದರಿಂದ ರಾಜಸಿಕ ವಿನ್ಯಾಸಗಳಿಂದ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಿದವು. ವಿನ್ಯಾಸಗಳು ಸಾತ್ತ್ವಿಕತೆಯ ದೃಷ್ಟಿಯಿಂದ ಹೇಗಿರಬೇಕು ?’, ಎಂಬುದನ್ನು ಮುಂದೆ ನೀಡಲಾಗಿದೆ.

೧. ವಿನ್ಯಾಸಗಳು ಅರ್ಥಹೀನವಾಗಿರಬಾರದು : ಬಟ್ಟೆಗಳ ಮೇಲಿನ ವಿನ್ಯಾಸಗಳನ್ನು ಆರಿಸುವಾಗ ಅವು ಅರ್ಥಪೂರ್ಣವಾಗಿರಬೇಕು, ಉದಾ. ಬಿಂದುಗಳು, ಎಲೆ, ಹೂವು ಮತ್ತು ಬಳ್ಳಿ.

೨. ವಿನ್ಯಾಸಗಳ ಆಕಾರ ತುಂಬಾ ದೊಡ್ಡದಾಗಿರಬಾರದು.

೩. ಹರಿತವಾದ ತುದಿಗಳಿರುವ ವಿನ್ಯಾಸಗಳಿರಬಾರದು : ಎಲೆಹೂವುಗಳ ವಿನ್ಯಾಸವು ಹರಿತವಾದ (ಚೂಪಾದ) ತುದಿಗಳಿರುವ ಹೂವು ಎಲೆಗಳಿರಬಾರದು. ವಿನ್ಯಾಸಗಳು ಕೋಮಲ ಹಾಗೂ ಆಕರ್ಷಕವಿರಬೇಕು.

೪. ವಿನ್ಯಾಸಗಳು ತುಂಬಾ ಸಮೀಪ ಸಮೀಪ ಇರಬಾರದು : ವಿನ್ಯಾಸಗಳು ತುಂಬಾ ಸಮೀಪ ಸಮೀಪ ಇದ್ದರೆ ಆ ವಿನ್ಯಾಸಗಳಿಂದ ತೊಂದರೆದಾಯಕ ಸ್ಪಂದನಗಳ ಪ್ರಕ್ಷೇಪಣೆಯಾಗುತ್ತದೆ. ಆಕಾರದಲ್ಲಿ ಒಳ್ಳೆಯ ವಿನ್ಯಾಸಗಳು ಕೂಡ ಪರಸ್ಪರ ತುಂಬಾ ಸಮೀಪವಿದ್ದರೆ, ತೊಂದರೆದಾಯಕ ಸ್ಪಂದನಗಳು ನಿರ್ಮಾಣವಾಗುತ್ತವೆ. ವಿನ್ಯಾಸಗಳು ಎಷ್ಟು ವಿರಳವಾಗಿರುತ್ತವೆಯೊ, ಅಷ್ಟು ಅವು ನಿರ್ಗುಣ ತತ್ತ್ವದ ಕಡೆಗೆ ಹೋಗುತ್ತವೆ ಹಾಗೂ ಅವುಗಳಿಂದ ಒಳ್ಳೆಯ ಸ್ಪಂದನಗಳು ಬರುತ್ತವೆ.

೫. ಬಣ್ಣಗಳ ಸ್ವರೂಪಕ್ಕನುಸಾರ ಅವುಗಳಲ್ಲಿನ ಸಗುಣ ಅಥವಾ ನಿರ್ಗುಣ ತತ್ತ್ವವು ಬದಲಾಗುವುದು : ಬಣ್ಣಗಳ ಸ್ವರೂಪಕ್ಕನುಸಾರ ಅವುಗಳಲ್ಲಿ ಸಗುಣ ಅಥವಾ ನಿರ್ಗುಣ ಇವುಗಳಲ್ಲಿ ಯಾವ ತತ್ವ ಹೆಚ್ಚಿದೆ, ಎಂಬುದು ನಿರ್ಧರಿಸಲ್ಪಡುತ್ತದೆ. ಯಾವುದಾದರೊಂದು ಬಣ್ಣದಲ್ಲಿ ಬಿಳಿ ಬಣ್ಣದ ಪ್ರಮಾಣವು ಹೆಚ್ಚುತ್ತಾ ಹೋದರೆ, ಆ ಬಣ್ಣದಲ್ಲಿ ನಿರ್ಗುಣ ತತ್ತ್ವದ ಪ್ರಮಾಣ ಹೆಚ್ಚಾಗುತ್ತದೆ. ಯಾವುದಾದರೊಂದು ಬಣ್ಣದಲ್ಲಿ ಕಪ್ಪು ಬಣ್ಣವನ್ನು ಮಿಶ್ರಣಮಾಡಿದರೆ ಆ ಬಣ್ಣದಲ್ಲಿ ತೊಂದರೆದಾಯಕ ಸ್ಪಂದನಗಳು ಆಕರ್ಷಿಸಲ್ಪಡುತ್ತವೆ.’ (ಆಧಾರ : ಸನಾತನದ ಗ್ರಂಥ ‘ಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಲ್ಲಿ ಹೇಗಿರಬೇಕು ?’)

೩ ಆ. ತಾಮಸಿಕ ವಿನ್ಯಾಸಗಳಿಂದ ತುಂಬಾ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಣೆಯಾಗುವುದರ ಕಾರಣಗಳು : ಪರೀಕ್ಷಣೆಯಲ್ಲಿ ತಾಮಸಿಕ ವಿನ್ಯಾಸಗಳಲ್ಲಿ ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಚಿಕ್ಕ-ದೊಡ್ಡ ಆಕಾರದ ತಲೆಬುರುಡೆಗಳ ಆಕೃತಿಗಳಿವೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗಿರುತ್ತವೆ’, ಎಂಬುದು ಅಧ್ಯಾತ್ಮದ ಒಂದು ಸಿದ್ಧಾಂತವಾಗಿದೆ. ಅದಕ್ಕನುಸಾರ ಕೋಮಲ (ನಾಜೂಕು) ಅರಳಿಕೊಂಡಿರುವ ಹೂವುಗಳನ್ನು ನೋಡಿದರೆ ಮನಸ್ಸಿಗೆ ಆನಂದವೆನಿಸುತ್ತದೆ; ತದ್ವಿರುದ್ಧ ತಲೆಬುರುಡೆಗಳ ಆಕೃತಿಗಳನ್ನು ನೋಡಿ ಮನಸ್ಸಿನಲ್ಲಿ ಭಯ ನಿರ್ಮಾಣವಾಗಿ ಅಸ್ವಸ್ಥತೆಯ ಅರಿವಾಗುತ್ತದೆ. ಹೂವುಗಳಿಂದ ಆನಂದದ ಮತ್ತು ತಲೆ ಬುರುಡೆಗಳಿಂದ ತೊಂದರೆದಾಯಕ ಸ್ಪಂದನಗಳ ಪ್ರಕ್ಷೇಪಣೆಯಾಗುತ್ತದೆ. ಪರೀಕ್ಷಣೆಯಲ್ಲಿನ ತಾಮಸಿಕ ವಿನ್ಯಾಸಗಳು ಅತ್ಯಂತ ತಮ ಪ್ರಧಾನವಾಗಿದ್ದರಿಂದ ಅವುಗಳಿಂದ ತುಂಬಾ ನಕಾರಾತ್ಮಕ ಸ್ಪಂದನಗಳ ಪ್ರಕ್ಷೇಪಣೆಯಾಯಿತು.

೪. ಕಲಿಯುಗದಲ್ಲಿ ವಿನ್ಯಾಸಗಳೆಂದು ಚಿತ್ರವಿಚಿತ್ರ ಆಕೃತಿಗಳನ್ನು ಉಪಯೋಗಿಸುವುದರಿಂದ ಅವು ಮನುಷ್ಯರ ಜೀವನಕ್ಕೆ ಘಾತಕವಾಗಿವೆ !

‘ಇಂದಿನ ಕಲಿಯುಗದಲ್ಲಿ ವಿವಿಧ ಪ್ರಾಣಿಗಳ ಆಕೃತಿಗಳಿರುವ ಬಟ್ಟೆಗಳು, ಭಯಂಕರ ಭೂತಗಳ ಮುಖಗಳಿರುವ ಬಟ್ಟೆಗಳು, ವಿವಿಧ ಸ್ಥಳಗಳಲ್ಲಿ ಹರಿದಿರುವ ಬಟ್ಟೆ ಇತ್ಯಾದಿಗಳು ಸಾಕಷ್ಟು ನೋಡಲು ಸಿಗುತ್ತವೆ. ಇಂತಹ ಬಟ್ಟೆಗಳ ಆಕೃತಿಬಂಧಗಳಲ್ಲಿ ಘನೀಕೃತವಾಗಿರುವ ತೊಂದರೆದಾಯಕ ಲಹರಿಗಳು ಕಾಲಾಂತರದಲ್ಲಿ ಜೀವದ ವೃತ್ತಿಯ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಚಿತ್ರವಿಚಿತ್ರ ಬಟ್ಟೆಗಳನ್ನು ಧರಿಸುವ ಜೀವವು ಕ್ರಮೇಣ ತಮೋಗುಣಿಯಾಗುತ್ತದೆ.’ – (ಶ್ರೀಚಿತ್‌ಶಕ್ತಿ) ಸೌ. ಅಂಜಲಿ ಗಾಡಗೀಳ

ಸ್ವಲ್ಪದರಲ್ಲಿ ಸಾತ್ತ್ವಿಕತೆಯ ದೃಷ್ಟಿಕೋನದಿಂದ ಬಟ್ಟೆಗಳನ್ನು ಆರಿಸುವಾಗ ತಮಗೆ ಬೇಕು-ಬೇಡಗಳಿಗಿಂತ ಸ್ಪಂದನಶಾಸ್ತ್ರದ ಅಧ್ಯಯನವನ್ನು ಮಾಡಿದರೆ ನಮಗೆ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ. ಬಟ್ಟೆಗಳು ಸಾತ್ತ್ವಿಕವಾಗಿದ್ದರೆ, ಆ ಬಟ್ಟೆಗಳಲ್ಲಿ ಸಾತ್ತ್ವಿಕ ಸ್ಪಂದನಗಳು ಬಂದು ಅವುಗಳನ್ನು ಧರಿಸುವ ವ್ಯಕ್ತಿಗೆ ಸಾತ್ತ್ವಿಕತೆ ಮತ್ತು ಈಶ್ವರೀ ಚೈತನ್ಯದ ಲಾಭವಾಗುತ್ತದೆ.’ – ಡಾ. ಅಮಿತ ಭೋಸಲೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೪.೪.೨೦೨೦)

ವಿ-ಅಂಚೆ : [email protected]

ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ.  ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.