ನೃತ್ಯ ಮತ್ತು ಸಂಗೀತ ಇವುಗಳ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
‘ಸಂಗೀತವು ಆಕಾಶ ತತ್ತ್ವಕ್ಕೆ ಸಂಬಂಧಿಸಿದೆ; ಆದುದರಿಂದ ಪೃಥ್ವಿ, ಆಪ, ತೇಜ ಮತ್ತು ವಾಯು ಈ ತತ್ತ್ವಗಳಿಗೆ ಸಂಬಂಧಿಸಿದ ಕಲೆಗಳ ಅನುಭೂತಿಗಳಿಗಿಂತ ಸಂಗೀತಕ್ಕೆ ಸಂಬಂಧಿಸಿದ ಅನುಭೂತಿಗಳು ಮೇಲಿನ ಮಟ್ಟದ್ದಾಗಿರುತ್ತವೆ ! – (ಪರಾತ್ಪರ ಗುರು) ಡಾ. ಆಠವಲೆ |
‘ಶೇ. ೫೯ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಅಪಾಲಾ ಔಂಧಕರ ಈ ಬಾಲಸಾಧಕಿಯು ೧೯ ಮತ್ತು ೨೦ ಡಿಸೆಂಬರ್ ೨೦೨೦ ರಂದು ‘ಭರತನಾಟ್ಯಮ್ನ ನೃತ್ಯಗಳನ್ನು ಶಾಸ್ತ್ರೀಯ ಗೀತೆಗಳ ಆಧಾರದಲ್ಲಿ ಪ್ರಸ್ತುತಪಡಿಸಿದಳು. ಅವುಗಳಿಂದ ಸುಯೋಗ್ಯವಾದ ಪರಿಣಾಮವಾಗಬೇಕೆಂದು ಅವಳು ಅರ್ಧ ಗಂಟೆಯ ಕಾಲಾವಧಿಯಲ್ಲಿ ಪ್ರತಿಯೊಂದು ನೃತ್ಯವನ್ನು ಪುನಃ ಪುನಃ ೩ ಸಲ ಮಾಡಿ ತೋರಿಸಿದಳು. ಉಡುಗೆ ತೊಡುಗೆಗಳಿಂದ ನೃತ್ಯದ ಮೇಲೆ ಯಾವ ಪರಿಣಾಮವಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲು ಅವಳು ಪ್ರಯೋಗವೆಂದು ಪ್ರತಿಯೊಂದು ಗೀತೆಯ ಮೇಲಿನ ನೃತ್ಯವನ್ನು ‘ಭರತನಾಟ್ಯಮ್‌ನ ಪ್ರಚಲಿತ ಉಡುಪುಗಳನ್ನು ಧರಿಸಿ ಮತ್ತು ಸೀರೆಯನ್ನು ಉಟ್ಟುಕೊಂಡು ಹೀಗೆ ಎರಡೂ ಉಡುಗೆಗಳಲ್ಲಿ ಪ್ರಸ್ತುತ ಪಡಿಸಿದಳು. ಆಗ ನನಗೆ ಅರಿವಾದ ಸೂಕ್ಷ್ಮದ ಪರಿಣಾಮಗಳು ಮುಂದಿನಂತಿದ್ದವು.
೧. ‘ನಟೇಶ ಕೌತುಕಮ್ ಈ ಗೀತೆಗೆ ೩ ಸಲ ಪ್ರಸ್ತುತಪಡಿಸಿದ ಭರತನಾಟ್ಯಮ್ ನೃತ್ಯ
೧ ಅ. ನಿಷ್ಕರ್ಷ : ಈ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
ಅಪಾಲಾಳು ಭರತನಾಟ್ಯಮ್‌ನ ಪ್ರಚಲಿತ ಉಡುಪನ್ನು ಧರಿಸಿ ಮೂರು ಸಲ ಮಾಡಿದ ನೃತ್ಯದಲ್ಲಿ ಪ್ರತಿಯೊಂದು ನೃತ್ಯದಿಂದ ಪ್ರಕ್ಷೇಪಿಸುವ ತೊಂದರೆದಾಯಕ ಶಕ್ತಿಯ ಪ್ರಮಾಣವು ಹೆಚ್ಚುತ್ತಾ ಹೋಗಿ ಅದು ಶೇ. ೯೦ ರಷ್ಟು ಆಯಿತು. ತದ್ವಿರುದ್ಧ ಅವಳು ಸೀರೆಯನ್ನು ಉಟ್ಟುಕೊಂಡು ಮೂರು ಸಲ ಮಾಡಿದ ನೃತ್ಯದಲ್ಲಿ ಪ್ರತಿಯೊಂದು ನೃತ್ಯದಿಂದ ಪ್ರಕ್ಷೇಪಿಸುವ ತೊಂದರೆದಾಯಕ ಶಕ್ತಿಯ ಪ್ರಮಾಣವು ಕಡಿಮೆಯಾಗುತ್ತಾ ಹೋಗಿ ಅದು ಕೊನೆಗೆ ಶೂನ್ಯವಾಯಿತು.
೨. ನೃತ್ಯವನ್ನು ಮಾಡುವಾಗ ಪ್ರಚಲಿತ ಭರತನಾಟ್ಯಮ್‌ನ ಉಡುಪುಗಳನ್ನು ಧರಿಸಿದ್ದರಿಂದ ಅಪಾಲಾಳ ಮೇಲಿನ ತೊಂದರೆದಾಯಕ ಶಕ್ತಿಯ ಆವರಣ ಹೆಚ್ಚುತ್ತಾ ಹೋಯಿತು. ತದ್ವಿರುದ್ಧ ಅವಳು ಸೀರೆಯನ್ನು ಉಟ್ಟುಕೊಂಡು ಮಾಡಿದ ನೃತ್ಯದಿಂದ ಅವಳಲ್ಲಿನ ತೊಂದರೆದಾಯಕ ಶಕ್ತಿಯ ಆವರಣ ಕಡಿಮೆಯಾಗುತ್ತಾ ಹೋಗಿ ಅದು ಕೊನೆಗೆ ಇಲ್ಲವಾಯಿತು.
ಅಪಾಲಾಳು ಭರತನಾಟ್ಯಮ್‌ನ ಪ್ರಚಲಿತ ಉಡುಪುಗಳನ್ನು ಧರಿಸಿ ಮಾಡಿದ ನೃತ್ಯದಿಂದ ಪ್ರಕ್ಷೇಪಿಸುವ ತೊಂದರೆದಾಯಕ ಶಕ್ತಿಯ ಒತ್ತಡದಿಂದಾಗಿ ಕೊನೆಗೆ ನೃತ್ಯದ ಸ್ಪಂದನಗಳು ಯಾವುದೇ ಚಕ್ರದಲ್ಲಿ ಅರಿವಾಗಲಿಲ್ಲ. ತದ್ವಿರುದ್ಧ ಅವಳು ಸೀರೆಯನ್ನು ಉಟ್ಟುಕೊಂಡು ಮಾಡಿದ ನೃತ್ಯದಿಂದ ಪ್ರಕ್ಷೇಪಿಸುವ ಒಳ್ಳೆಯ ಸ್ಪಂದನಗಳಿಂದ ಕೊನೆಗೆ ನೃತ್ಯದ ಸ್ಪಂದನಗಳು ಸಹಸ್ರಾರ ಚಕ್ರದವರೆಗೆ ತಲುಪಿದವು. ಇದರ ಅರ್ಥ ನೃತ್ಯದ ಸಕಾರಾತ್ಮಕತೆಯು ಹೆಚ್ಚುತ್ತಾ ಹೋಯಿತು.
ಅಪಾಲಾಳು ಭರತನಾಟ್ಯಮ್‌ನ ಪ್ರಚಲಿತ ಉಡುಪುಗಳನ್ನು ಧರಿಸಿ ಮಾಡಿದ ನೃತ್ಯಗಳಲ್ಲಿ ಚೈತನ್ಯದ ಪ್ರಮಾಣವು ಕಡಿಮೆಯಾಗುತ್ತಾ ಹೋಯಿತು. ತದ್ವಿರುದ್ಧ ಅವಳು ಸೀರೆಯನ್ನು ಉಟ್ಟುಕೊಂಡು ಮಾಡಿದ ನೃತ್ಯದಲ್ಲಿ ಚೈತನ್ಯ, ಆನಂದ ಮತ್ತು ಶಾಂತಿ ಇವುಗಳ ಪ್ರಮಾಣವು ಹೆಚ್ಚುತ್ತಾ ಹೋಯಿತು.
೨. ‘ಗಣೇಶ ಪಂಚರತ್ನಮ್ ಈ ಗೀತೆಗೆ ಪ್ರಸ್ತುತ ಪಡಿಸಿದ ಭರತನಾಟ್ಯಮ್ ನೃತ್ಯ
೨ ಅ. ನಿಷ್ಕರ್ಷ : ‘ಗಣೇಶ ಪಂಚರತ್ನಮ್ ಈ ಗೀತೆಯ ನಿಷ್ಕರ್ಷವೂ ‘ಅಂಶ ಕ್ರ. ೧ ಅ ದಲ್ಲಿ ಕೊಟ್ಟಂತೆಯೇ ಬಂದಿತು. ಈ ಸಲವೂ ಅಪಾಲಾಳು ಭರತನಾಟ್ಯಮ್‌ನ ಪ್ರಚಲಿತ ಉಡುಪನ್ನು ಧರಿಸಿ ಮಾಡಿದ ನೃತ್ಯದಿಂದ ಅವಳಲ್ಲಿ ತೊಂದರೆದಾಯಕ ಸ್ಪಂದನಗಳು ಹೆಚ್ಚುತ್ತಾ ಆವರಣ ಬಂದಿತು, ಹಾಗೆಯೇ ವಾತಾವರಣದಲ್ಲಿಯೂ ತೊಂದರೆದಾಯಕ ಸ್ಪಂದನಗಳು ಹರಡಿದವು. ತದ್ವಿರುದ್ಧ ಅವಳು ಸೀರೆಯನ್ನು ಉಟ್ಟುಕೊಂಡು ಮಾಡಿದ ನೃತ್ಯದಿಂದ ಅವಳಲ್ಲಿ ಆರಂಭದಲ್ಲಿ ಸ್ವಲ್ಪವಿದ್ದ ಆವರಣವೂ ದೂರವಾಯಿತು ಹಾಗೆಯೇ ಅವಳ ನೃತ್ಯದಿಂದ ಕೊನೆಗೆ ಶೇಕಡಾ ೧೦೦ ರಷ್ಟು ಒಳ್ಳೆಯ ಸ್ಪಂದನಗಳು ಪ್ರಕ್ಷೇಪಿಸತೊಡಗಿದವು.
ಅಪಾಲಾಳು ‘ನಟೇಶ ಕೌತುಕಮ್ ಮತ್ತು ‘ಗಣೇಶ ಪಂಚರತ್ನಮ್ ಈ ಗೀತೆಗೆ ನೃತ್ಯವನ್ನು ಮಾಡುವಾಗ ಪ್ರತಿಯೊಂದು ಗೀತೆಯ ಸಮಯದಲ್ಲಿ ಒಮ್ಮೆ ಭರತನಾಟ್ಯಮ್‌ನ ಪ್ರಚಲಿತ ಉಡುಪನ್ನು ಧರಿಸಿ ಮತ್ತು ನಂತರ ಸೀರೆಯನ್ನು ಉಟ್ಟುಕೊಂಡು ಒಂದೇ ರೀತಿಯ ನೃತ್ಯವನ್ನು ಮಾಡಿದಳು.
ಹೀಗಿದ್ದರೂ ಕೇವಲ ಉಡುಗೆ-ತೊಡುಗೆಗಳಿಂದ ಮೇಲೆ ನಮೂದಿಸಿದಂತೆ ಪರಸ್ಪರ ವಿರುದ್ಧ ಪರಿಣಾಮ ಕಂಡುಬಂದಿತು. ಇದರಿಂದ ನೃತ್ಯವನ್ನು ಮಾಡುವಾಗ ‘ಭರತನಾಟ್ಯಮ್‌ನ ಪ್ರಚಲಿತ ಉಡುಪುಗಳನ್ನು ಧರಿಸಿದ್ದರಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ ಮತ್ತು ಸೀರೆಯನ್ನು ಉಡುವುದರಿಂದ ಒಳ್ಳೆಯ ಸ್ಪಂದನಗಳು ಪ್ರಕ್ಷೇಪಿಸುತ್ತವೆ, ಎಂಬುದು ಗಮನಕ್ಕೆ ಬರುತ್ತದೆ.
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೧೨.೨೦೨೦)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. *ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ – ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |