ಅರಿವಿಲ್ಲದೇ ಮಾಡಿದ ಶಿವನ ಉಪಾಸನೆಯಿಂದ ಪ್ರಸನ್ನನಾಗುವ ಶಿವ

ಬೇಟೆಯನ್ನು ನೋಡಲು ಬೇಟೆಗಾರನು ಒಂದು ಮರದ ಮೇಲೆ ಏರಿ ಕುಳಿತನು, ಆದರೆ ಮರದ ಎಲೆಗಳಿಂದಾಗಿ ಅವನಿಗೆ ಬೇಟೆಯು ಕಾಣಿಸುತ್ತಿರಲಿಲ್ಲ. ಆಗ ಅವನು ಒಂದೊಂದೇ ಎಲೆಯನ್ನು ಕಿತ್ತು ಕೆಳಗೆ ಎಸೆಯತೊಡಗಿದನು. ಎಲೆಗಳನ್ನು ಕಿತ್ತೆಸೆಯುವಾಗ ಅವನು ‘ಶಿವ ಶಿವ ಎನ್ನುತ್ತಿದ್ದನು.

ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ

ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿ ಅರ್ಪಿಸಿದರೆ ಅದರಿಂದ ನಿರ್ಗುಣ ಸ್ತರದಲ್ಲಿನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿತವಾಗಿ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ.

ರಥಸಪ್ತಮಿ

ಅಂಗಳದಲ್ಲಿ ಬೆರಣಿಗಳನ್ನು ಉರಿಸಿ ಅದರ ಮೇಲೆ ಒಂದು ಮಣ್ಣಿನ ಮಡಕೆಯಲ್ಲಿ ಹಾಲನ್ನು ಉಕ್ಕುವ ತನಕ ಕಾಯಿಸುತ್ತಾರೆ; ಅಂದರೆ ಅಗ್ನಿಗೆ ಸಮರ್ಪಣೆಯಾಗುವ ತನಕ ಇಡುತ್ತಾರೆ. ಅನಂತರ ಉಳಿದ ಹಾಲನ್ನು ಎಲ್ಲರಿಗೂ ಪ್ರಸಾದವೆಂದು ನೀಡುತ್ತಾರೆ.

ಆಹಾರ ಮತ್ತು ಮನುಷ್ಯ ಹಾಗೂ ಮನಸ್ಸಿನ ಸಂಬಂಧ

ಆಹಾರವು ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಅವಿನಾಶಿ ಪರಬ್ರಹ್ಮನ ನೆನಪಾಗುತ್ತದೆ; ಅಂದರೆ ಒಳ್ಳೆಯದರ ಸ್ಮರಣೆಯಾಗುತ್ತದೆ. ಒಳ್ಳೆಯ ಸ್ಮರಣೆಯಿಂದ ಅಜ್ಞಾನಸಹಿತ ಎಲ್ಲ ಬಂಧನಗಳು ಹರಿದು ಮೋಕ್ಷ ಸಿಗುತ್ತದೆ.

ಮಕರ ಸಂಕ್ರಾಂತಿ

ಎಳ್ಳಿನಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುವುದರಿಂದ ಎಳ್ಳುಬೆಲ್ಲವನ್ನು ಸೇವಿಸುವುದರಿಂದ ಅಂತಃಶುದ್ಧಿಯಾಗಿ ಸಾಧನೆಯು ಒಳ್ಳೆಯ ರೀತಿಯಿಂದಾಗಲು ಸಹಾಯವಾಗುತ್ತದೆ. ಎಳ್ಳುಬೆಲ್ಲವನ್ನು ಒಬ್ಬರಿಗೊಬ್ಬರು ಹಂಚುವುದರಿಂದ ಸಾತ್ತ್ವಿಕತೆಯ ಕೊಡುಕೊಳ್ಳುವಿಕೆಯಾಗುತ್ತದೆ.

ಹಿಂದೂ ಧರ್ಮದ ಮಹತ್ವವನ್ನು ತಿಳಿದುಕೊಳ್ಳಲು ‘ಕುಂಕುಮವನ್ನು ಹಚ್ಚಿಕೊಳ್ಳುವುದರ’ ಬಗ್ಗೆ ವೈಜ್ಞಾನಿಕ ಸಂಶೋಧನೆಯಾಗುವುದು ಆವಶ್ಯಕ

ಎರಡು ಹುಬ್ಬುಗಳ ನಡುವೆ ಎಲ್ಲಿ ಕುಂಕುಮವನ್ನು ಹಚ್ಚಿಕೊಳ್ಳಲಾಗುತ್ತದೆಯೋ, ಅಲ್ಲಿ ಆಯುರ್ವೇದಕ್ಕನುಸಾರ ‘ಸ್ಥಪನೀ’ ಎಂಬ ಮರ್ಮಸ್ಥಾನವಿರುತ್ತದೆ. ಮೆದುಳಿನ ರೋಗಗಳ ದೃಷ್ಟಿಯಿಂದ ಈ ಮರ್ಮಸ್ಥಾನಕ್ಕೆ ಏನಾದರೂ ಮಹತ್ವವಿದೆಯೇ ?

ಭಗವದ್ಗೀತೆ ಏನು ಹೇಳುತ್ತದೆ ?

ಸಂಕ್ಷಿಪ್ತವಾಗಿ ಹೇಳುವುದಾದರೆ, ಗೀತೆಯು ಜನ್ಮಮರಣದ ಚಕ್ರಗಳಿಂದ ಬಿಡುಗಡೆಯಾಗುವ ಪ್ರಯತ್ನಗಳನ್ನು ಮಾಡುವ ಬುದ್ಧಿಯನ್ನು ನೀಡಿ ಅದಕ್ಕಾಗಿ ಉಪಾಯವನ್ನು (ಮಾರ್ಗ) ಸಹ ಹೇಳುತ್ತದೆ. ಅನೇಕ ಮಾರ್ಗಗಳನ್ನು ಹೇಳಿ ನಮ್ಮ ಪ್ರಕೃತಿಗೆ ಇಷ್ಟವಾಗುವ ಮಾರ್ಗವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೂ ಕೊಡುತ್ತದೆ.

ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ಜಾಜಿ ಮತ್ತು ನಿಶಿಗಂಧ ಹೂವುಗಳಲ್ಲಿ ದತ್ತತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ದತ್ತನಿಗೆ ಈ ಹೂವುಗಳನ್ನು ಅರ್ಪಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ.

ದತ್ತನ ತ್ರಿಮುಖಿ ಮೂರ್ತಿಯ ಕೈಯಲ್ಲಿರುವ ‘ಕಮಂಡಲ’

ದತ್ತನ ಕೈಯಲ್ಲಿರುವ ಕಮಂಡಲವು ಅವಶ್ಯಕತೆಗನುಸಾರ ಕೆಟ್ಟ ಶಕ್ತಿಗಳ ನಾಶಕ್ಕಾಗಿ ಬಾಗಿರುವ ಅವಸ್ಥೆಯಲ್ಲಿ, ಹತ್ತೂ ದಿಕ್ಕುಗಳಲ್ಲಿ ಸಂಚರಿಸಿ, ಆಯಾ ಸ್ಥಳಗಳಲ್ಲಿ ನಿರ್ಗುಣ ರೂಪಿ ಮಾರಕ ಚೈತನ್ಯದ ಪ್ರವಾಹೀ ಧಾರೆಯನ್ನು ಪ್ರಕ್ಷೇಪಿಸುತ್ತದೆ.

ತೊಂದರೆ ನಿವಾರಣೆಗಾಗಿ ದತ್ತನ ಜಪವನ್ನು ಎಷ್ಟು ಮಾಡಬೇಕು ?

ಮಧ್ಯಮ ತೊಂದರೆ ಇದ್ದರೆ ಕುಲ ದೇವತೆಯ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೨ ರಿಂದ ೪ ಗಂಟೆ ಮಾಡಬೇಕು. ಅದರೊಂದಿಗೆ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆ ಹಾಕಬೇಕು ಹಾಗೂ ಅಲ್ಲಿ ಕುಳಿತು ಒಂದೆರಡು ಮಾಲೆ ಜಪ ಮಾಡಬೇಕು.