ಶಿವನ ವೈಶಿಷ್ಟ್ಯಗಳು

೧. ಗಂಗೆ

‘ಗಮಯತಿ ಭಗವತ್ಪದಮಿತಿ ಗಂಗಾ | ಅಂದರೆ ‘ಯಾರು (ಸ್ನಾನವನ್ನು ಮಾಡುವ ಜೀವವನ್ನು) ಭಗವಂತನ ಪದವಿಗೆ ತಲುಪಿಸುತ್ತಾಳೆಯೋ ಅವಳೇ ಗಂಗಾ.

ಗಂಗಾನದಿಯು ಹಿಮಾಲಯದಲ್ಲಿನ ಗಂಗೋತ್ರಿಯಲ್ಲಿ ಉಗಮವಾಗಿ ಅನೇಕ ಉಪನದಿಗಳ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಅವಳ ಒಟ್ಟು ಉದ್ದ ೨೫೧೦ ಕಿ.ಮೀ. ಗಂಗಾನದಿಯಲ್ಲಿ ಆಧ್ಯಾತ್ಮಿಕ ಗಂಗೆಯ ಅಂಶಾತ್ಮಕ ತತ್ತ್ವವಿರುವುದರಿಂದ ಪ್ರದೂಷಣೆಯಿಂದ ಎಷ್ಟು ಕಲುಷಿತ ಳಾದರೂ ಅವಳ ಪಾವಿತ್ರ್ಯವು ಭಂಗವಾಗುವುದಿಲ್ಲ. ಆದುದರಿಂದ ವಿಶ್ವದ ಯಾವುದೇ ಜಲದೊಂದಿಗೆ ತುಲನೆ ಮಾಡಿದರೂ ಗಂಗಾಜಲವು ಅತ್ಯಂತ ಪವಿತ್ರವಾಗಿರುತ್ತದೆ.

೨. ಚಂದ್ರ

ಶಿವನ ತಲೆಯ ಮೇಲೆ ಚಂದ್ರನಿದ್ದಾನೆ. ಚಂದ್ರನು ಮಮತೆ, ಕ್ಷಮಾಶೀಲತೆ ಮತ್ತು ವಾತ್ಸಲ್ಯ (ಆಹ್ಲಾದ) ಈ ಮೂರು ಗುಣಗಳ ಒಟ್ಟು ಅವಸ್ಥೆಯಾಗಿದ್ದಾನೆ.

೩. ಮೂರನೆಯ ಕಣ್ಣು

ಅ. ಶಿವನ ಎಡಗಣ್ಣೆಂದರೆ ಮೊದಲನೆಯ ಕಣ್ಣು, ಶಿವನ ಬಲಗಣ್ಣೆಂದರೆ ಎರಡನೆಯ ಕಣ್ಣು ಮತ್ತು ಭ್ರೂಮಧ್ಯಕ್ಕಿಂತ ಸ್ವಲ್ಪ ಮೇಲೆ ಸೂಕ್ಷ್ಮರೂಪದಲ್ಲಿರುವ ಊರ್ಧ್ವ ನೇತ್ರವೆಂದರೆ ಮೂರನೆಯ ಕಣ್ಣು. ಊರ್ಧ್ವ ನೇತ್ರವು ಎಡಗಣ್ಣು ಹಾಗೂ ಬಲಗಣ್ಣುಗಳ ಸಂಯುಕ್ತ ಶಕ್ತಿಯ ಪ್ರತೀಕವಾಗಿದೆ ಮತ್ತು ಅದು ಅತೀಂದ್ರಿಯ ಶಕ್ತಿಯ ಮಹಾಪೀಠವಾಗಿದೆ. ಇದಕ್ಕೆ ಜ್ಯೋತಿರ್ಮಠ, ವ್ಯಾಸಪೀಠ ಮುಂತಾದ ಹೆಸರುಗಳಿವೆ.

ಆ. ಶಿವನ ಮೂರನೆಯ ಕಣ್ಣು ತೇಜತತ್ತ್ವದ ಪ್ರತೀಕವಾಗಿದೆ. ಶಿವನ ಚಿತ್ರದಲ್ಲೂ ಮೂರನೇ ಕಣ್ಣು ಜ್ಯೋತಿಯ ಆಕಾರದಲ್ಲಿದೆ.

ಇ. ಶಿವನು ಮೂರನೆಯ ಕಣ್ಣಿನಿಂದ ಕಾಮದಹನ ಮಾಡಿದ್ದಾನೆ. (ನಿಜವಾದ ಜ್ಞಾನವಂತನ ಮೇಲಾದ ಕಾಮದ ಪ್ರಹಾರವು ನಿಷ್ಕ್ರಿಯವಾಗುತ್ತದೆ; ಇಷ್ಟು ಮಾತ್ರವಲ್ಲ, ನಿಜವಾದ ಜ್ಞಾನಿಯು ತನ್ನ ಜ್ಞಾನಾಗ್ನಿಯಿಂದ ಕಾಮನೆಗಳನ್ನು ಸುಟ್ಟುಹಾಕುತ್ತಾನೆ.)

ಈ. ಯೋಗಶಾಸ್ತ್ರದಲ್ಲಿ ೩ ನೇ ಕಣ್ಣೆಂದರೆ ಸುಷುಮ್ನಾನಾಡಿ. ಉ. ಶಿವನು ತ್ರಿನೇತ್ರನಾಗಿದ್ದಾನೆ, ಅಂದರೆ ಶಿವನು ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ಕಾಲ ಈ ತ್ರಿಕಾಲಗಳಲ್ಲಿನ ಘಟನೆಗಳನ್ನು ನೋಡಬಲ್ಲನು.

೪. ನಾಗ

ಅ. ನಾಗನನ್ನು ಶಿವನ ಆಯುಧವೆಂದು ತಿಳಿದು ಕೊಳ್ಳಲಾಗುತ್ತದೆ. ವಿಶ್ವದಲ್ಲಿನ ಒಂಭತ್ತು ನಾಗಗಳಿಗೆ ‘ನವನಾರಾಯಣ ಎಂದು ಹೇಳುತ್ತಾರೆ. ನವನಾಥರ ಉತ್ಪತ್ತಿಯು ಒಂಭತ್ತು ನಾಗಗಳಿಂದಲೇ ಆಗಿದೆ.

೫. ಭಸ್ಮ

ಶಿವನು ಪೂರ್ಣ ಶರೀರಕ್ಕೆ ಭಸ್ಮವನ್ನು ಹಚ್ಚಿಕೊಂಡಿದ್ದಾನೆ. ಭಸ್ಮವನ್ನು ‘ಶಿವನ ವೀರ್ಯ ಎಂದೂ ತಿಳಿದುಕೊಳ್ಳುತ್ತಾರೆ.

೬. ರುದ್ರಾಕ್ಷಿ

ಶಿವನು ಜಡೆ, ಕುತ್ತಿಗೆ, ರಟ್ಟೆ, ಮಣಿಕಟ್ಟು ಮತ್ತು ಸೊಂಟ ಇವುಗಳಲ್ಲಿ ರುದ್ರಾಕ್ಷಿಮಾಲೆಗಳನ್ನು ಧರಿಸಿದ್ದಾನೆ.

೭. ವ್ಯಾಘ್ರಾಂಬರ

ಹುಲಿಯು (ರಜ-ತಮ ಗುಣಗಳು) ಕ್ರೂರತೆಯ ಪ್ರತೀಕವಾಗಿದೆ. ಇಂತಹ ಹುಲಿಯನ್ನು (ರಜ-ತಮಗಳನ್ನು) ಕೊಂದು ಶಿವನು ಅದರ ಆಸನವನ್ನು ಮಾಡಿಕೊಂಡಿದ್ದಾನೆ.