ಹಿಂದೂ ಧರ್ಮದ ಮಹತ್ವವನ್ನು ತಿಳಿದುಕೊಳ್ಳಲು ‘ಕುಂಕುಮವನ್ನು ಹಚ್ಚಿಕೊಳ್ಳುವುದರ’ ಬಗ್ಗೆ ವೈಜ್ಞಾನಿಕ ಸಂಶೋಧನೆಯಾಗುವುದು ಆವಶ್ಯಕ

೨.೧೧.೨೦೨೨ ರಂದು ಪೂ. ಸಂಭಾಜಿ ಭಿಡೆಗುರೂಜಿಯವರು ಓರ್ವ ಮಹಿಳಾ ಪತ್ರಕರ್ತೆಗೆ ನೀನು ‘ಕುಂಕುಮ ಹಚ್ಚಿಕೊಂಡು ಬಾ, ಅನಂತರ ನಾನು ನಿನ್ನೊಂದಿಗೆ ಮಾತನಾಡುತ್ತೇನೆ’, ಎಂದು ಹೇಳಿದರು. ಇದರಿಂದ ಪ್ರಗತಿ(ಅಧೋಗತಿ)ಪರರು, ಪ್ರಸಾರಮಾಧ್ಯಮಗಳು ಮತ್ತು ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಮುಂತಾದ ಪಕ್ಷಗಳು ಸಭ್ಯತೆಯ ಮಿತಿಯನ್ನು ಮೀರಿ ಪೂ. ಗುರೂಜಿಯವರ ವಿಷಯದಲ್ಲಿ ಕೋಲಹಲವನ್ನುಂಟು  ಮಾಡಿದರು.

೧. ಸರಾಯಿ ಕುಡಿಯಿರಿ ಮತ್ತು…

‘ಟೀಕೆಯನ್ನು ಮಾಡುವವರು ಪೂಜ್ಯ ಗುರೂಜಿಯವರ ಮಾತುಗಳನ್ನು ಪೂರ್ಣ ಕೇಳಲಿಲ್ಲ ಎಂದು ಅನಿಸುತ್ತದೆ. ‘ಪ್ರತಿಯೊಬ್ಬ ಸ್ತ್ರೀಯು ಭಾರತಮಾತೆಯ ರೂಪವಾಗಿದ್ದಾಳೆ, ಎಂದು ಹೇಳಿ ಮಹಿಳಾ ಪತ್ರಕರ್ತೆಯನ್ನೂ ಭಾರತ ಮಾತೆಯಂತೆ ಪೂಜ್ಯ ಎಂದು ತಿಳಿಯುವ ಗುರೂಜಿಯವರು ಆ ಮಹಿಳೆಯನ್ನು ಹೀನತನದಿಂದ ನಡೆಸಿಕೊಂಡರು ಎಂದು ಹೇಳುತ್ತಿದ್ದಾರೆ. ಇದು ‘ಸರಾಯಿ ಕುಡಿಯಿರಿ ಮತ್ತು ನರಕಕ್ಕೆ ಹೋಗಿರಿ, ಎಂದು ಓರ್ವ ಕೀರ್ತನಕಾರರು ಹೇಳುವುದು ಮತ್ತು ಕೇಳುಗರು ಮಾತ್ರ ಅದರಲ್ಲಿನ ಕೇವಲ ‘ಸರಾಯಿ ಕುಡಿಯಿರಿ ಇಷ್ಟೆ ವಾಕ್ಯವನ್ನು ಕೇಳಿದಹಾಗೆ ಆಯಿತು.

೨. ಪ್ರಗತಿ(ಅಧೋಗತಿ)ಪರರ ಬೆಲೆಯಿಲ್ಲದ ವಿಜ್ಞಾನನಿಷ್ಠೆ

‘ಇಂದಿನ ವಿಜ್ಞಾನಯುಗದಲ್ಲಿ ‘ಕುಂಕುಮವನ್ನು ಹಚ್ಚಿಕೊಳ್ಳಬೇಕೋ ಅಥವಾ ಹಚ್ಚಿಕೊಳ್ಳಬಾರದೋ ಎಂಬುದು ಅವರವರ ಪ್ರಶ್ನೆಯಾಗಿದೆ, ಎಂಬ ಟೀಕೆಯ  ಮಾತುಗಳು ಕೇಳಿಬಂದವು. ‘ವಿಜ್ಞಾನ ಯುಗ, ೨೧ ನೇ ಶತಮಾನ, ವಿಜ್ಞಾನನಿಷ್ಠೆ ಎಂಬ ಶಬ್ದಗಳನ್ನು ಉಚ್ಚರಿಸಿದರೆ, ಹಿಂದೂಗಳ ಧರ್ಮಪರಂಪರೆಗಳ ಮೇಲೆ ಟೀಕೆಯನ್ನು ಮಾಡಲು ಅನುಮತಿಯೇ ಸಿಕ್ಕಿತು, ಎಂದು ಕೆಲವರಿಗೆ ಅನಿಸುತ್ತದೆ. ಈ ತಥಾಕಥಿತ ವಿಜ್ಞಾನವಾದಿಗಳು ‘ದೀಪದ ಕೆಳಗೆ ಕತ್ತಲೆ ಎಂಬ ಮಾತನ್ನು ಸಾರ್ಥಕಗೊಳಿಸುತ್ತಾರೆ.

೩. ಕುಂಕುಮವನ್ನು ಹಚ್ಚಿಕೊಳ್ಳುವುದರ ಬಗ್ಗೆ ವೈಜ್ಞಾನಿಕ ಸಂಶೋಧನೆ ಆಗುವುದು ಆವಶ್ಯಕ

‘ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಪರಂಪರೆಯ ಹಿಂದೆ ಬಹುದೊಡ್ಡ ವಿಜ್ಞಾನ ಅಡಗಿರುತ್ತದೆ, ಎಂಬುದನ್ನು ಪಾಶ್ಚಾತ್ಯರು ಗುರುತಿಸಿದ್ದಾರೆ ಮತ್ತು ಅಲ್ಲಿ ಜಿಜ್ಞಾಸೆಯಿಂದ ಹಿಂದೂ ಧರ್ಮದಲ್ಲಿನ ಚಿಕ್ಕಪುಟ್ಟ ವಿಷಯಗಳ ಬಗ್ಗೆಯೂ ಸಂಶೋಧನೆಯನ್ನು ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಪರಂಪರೆ ಮತ್ತು ಆರೋಗ್ಯ, ಇವುಗಳಿಗೆ ನಿಕಟ ಸಂಬಂಧ ಇರುತ್ತದೆ. ದೀರ್ಘ ಕಾಲ ಆರೋಗ್ಯವಂತ ಜೀವನವನ್ನು ಜೀವಿಸುತ್ತಾ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ೪ ಪುರುಷಾರ್ಥಗಳನ್ನು ಸಾಧ್ಯಗೊಳಿಸುವ ಶಿಕ್ಷಣವನ್ನು ಹಿಂದೂ ಧರ್ಮ ನೀಡಿದೆ. ಸಂಶೋಧನೆಗಾಗಿ ಕುಂಕುಮವನ್ನು ಹಚ್ಚಿಕೊಳ್ಳುವುದು ಮತ್ತು ಕುಂಕುಮವನ್ನು ಹಚ್ಚಿಕೊಳ್ಳಲಾಗುವ ಸ್ಥಳಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಇಲ್ಲಿ ಮಂಡಿಸುತ್ತಿದ್ದೇನೆ. ನಿಜವಾದ ವಿಜ್ಞಾನನಿಷ್ಠರು ಇದರ ಸಂಶೋಧನೆ ಯನ್ನು ಮಾಡಿ ಢಾಂಬಿಕ (ಅ)ವಿಜ್ಞಾನವಾದಿ ಪ್ರಗತಿ(ಆಧೋಗತಿ)ಪರರ ಬಾಯಿಯನ್ನು ಮುಚ್ಚಬೇಕು. ಧರ್ಮಾಚರಣಿ ಹಿಂದೂ ಸಮಾಜವು ಇಂತಹ ವಿಜ್ಞಾನನಿಷ್ಠರ ಬಗ್ಗೆ ಸದಾ ಕೃತಜ್ಞವಾಗಿರುವುದು.

೪. ‘ಕುಂಕುಮವನ್ನು ಹಚ್ಚಿಕೊಳ್ಳುವುದು’ ಈ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ಕೆಲವು ವಿಷಯಗಳು

ಅ. ಭ್ರೂಮಧ್ಯದ ನಿಖರ ಹಿಂದಿನ ಭಾಗದಲ್ಲಿ ಮೆದುಳಿನಲ್ಲಿ ‘ಪಿನೀಯಲ್’ ಮತ್ತು ‘ಪಿಟಿಟ್ಯರಿ’ ಈ ಗ್ರಂಥಿಗಳಿರುತ್ತವೆ. ಹಾರ್ಮೋನಗಳ ನಿಯಂತ್ರಣದಲ್ಲಿ ಅವುಗಳಿಗೆ ಬಹುದೊಡ್ಡ ಮಹತ್ವದ ಪಾಲಿರುತ್ತದೆ. ಸ್ತ್ರೀಯರ ಆರೋಗ್ಯಕ್ಕೆ ಹಾರ್ಮೋನ್‌ಗಳ ಸಮತೋಲನವಿರುವುದು ತುಂಬಾ ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ಸ್ತ್ರೀಯರಿಗೆ ಕುಂಕುಮವನ್ನು ಹಚ್ಚಿಕೊಳ್ಳಲು ಹೇಳಲಾಗುತ್ತದೆಯೇ ?

ಆ. ಸೌಭಾಗ್ಯವತಿಯರು ಮಾತ್ರ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ. ವಿಧವಾಸ್ತ್ರೀಯರು ಕುಂಕುಮವನ್ನು ಹಚ್ಚಿಕೊಳ್ಳುವುದಿಲ್ಲ. ಸ್ತ್ರೀಯರ ಪ್ರಜನನ ಕ್ಷಮತೆಯೊಂದಿಗೆ ಇದರ ಏನಾದರೂ ಸಂಬಂಧವಿದೆಯೇ ?

ಇ. ಕುಂಕುಮವು ಅರಶಿನ ಮತ್ತು ಸುಣ್ಣದ ಮಿಶ್ರಣದಿಂದ ತಯಾರಾಗುತ್ತದೆ. ಧರ್ಮಶಾಸ್ತ್ರದಲ್ಲಿ ಕುಂಕುಮ ವನ್ನು ಹಚ್ಚಿಕೊಳ್ಳಲು ಹೇಳಲಾಗಿದೆ. ಕೇವಲ ಅರಶಿನ ಅಥವಾ ಕೇವಲ ಸುಣ್ಣವನ್ನು ಹಚ್ಚಿಕೊಳ್ಳಲು ಹೇಳಿಲ್ಲ. ಹೀಗೇಕೆ ಹೇಳಲಾಗಿದೆ ?

ಈ. ಎರಡು ಹುಬ್ಬುಗಳ ನಡುವೆ ಎಲ್ಲಿ ಕುಂಕುಮವನ್ನು ಹಚ್ಚಿಕೊಳ್ಳಲಾಗುತ್ತದೆಯೋ, ಅಲ್ಲಿ ಆಯುರ್ವೇದಕ್ಕನುಸಾರ ‘ಸ್ಥಪನೀ’ ಎಂಬ ಮರ್ಮಸ್ಥಾನವಿರುತ್ತದೆ. ಮೆದುಳಿನ ರೋಗಗಳ ದೃಷ್ಟಿಯಿಂದ ಈ ಮರ್ಮಸ್ಥಾನಕ್ಕೆ ಏನಾದರೂ ಮಹತ್ವವಿದೆಯೇ ?

ಉ. ಯೋಗಶಾಸ್ತ್ರದಲ್ಲಿ ‘ಎರಡು ಹುಬ್ಬುಗಳ ಮಧ್ಯದಲ್ಲಿ ಗಮನವನ್ನು ಏಕಾಗ್ರಗೊಳಿಸಬೇಕು’, ಎಂದು ಹೇಳಲಾಗಿದೆ. ಭ್ರೂಮಧ್ಯಕ್ಕೆ ಇಷ್ಟೇಕೆ ಮಹತ್ವವಿದೆ ?

ಊ. ತಾಯಿ ಮಗುವನ್ನು ತೊಡೆಯ ಮೇಲೆ ಮಲಗಿಸಿ ಹಣೆಯ ಮೇಲೆ ಎಲ್ಲಿ ಕುಂಕುಮವನ್ನು ಹಚ್ಚಿಕೊಳ್ಳಲಾಗುತ್ತದೆಯೋ, ಅದೇ ಸ್ಥಾನದ ಮೇಲೆ ಕೈಯಿಂದ ತಟ್ಟುತ್ತಾಳೆ. ಹೀಗೆ ಮಾಡುವುದರಿಂದ ಮಗುವೂ ಬೇಗ ಮಲಗುತ್ತದೆ. ಈ ಸ್ಥಾನಕ್ಕೆ ಮತ್ತು ಮೆದುಳಿನ ನಿದ್ರೆಯ ಕೇಂದ್ರಕ್ಕೆ ಏನಾದರೂ ಸಂಬಂಧವಿದೆಯೇ ?

ಎ. ಪರೀಕ್ಷೆಯ ಕೇಂದ್ರಗಳಲ್ಲಿ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವಾಗ ಉತ್ತರ ನೆನಪಾಗದಿದ್ದರೆ, ವಿದ್ಯಾರ್ಥಿಗಳು ಅರಿವಿಲ್ಲದೇ ಭ್ರೂಮಧ್ಯಕ್ಕೆ ಪೆನ್ನನ್ನು ಹಚ್ಚುತ್ತಾರೆ. ಈ ಸ್ಥಾನ ಮತ್ತು ಮೆದುಳಿನ ಸ್ಮೃತಿಕೇಂದ್ರ ಇವುಗಳಿಗೆ ಏನಾದರೂ ಸಂಬಂಧವಿದೆಯೇ ? ಕುಂಕುಮ ವನ್ನು ಹಚ್ಚುವುದರಿಂದ ಮೆದುಳಿನ ಈ ಕೇಂದ್ರ ಜಾಗೃತವಾಗುತ್ತದೆಯೇ ?

೫. ಹಿಂದೂ ಬಾಂಧವರೇ, ಸ್ವಾರ್ಥಿ ಪ್ರಗತಿ(ಅಧೋಗತಿ)ಪರರ ಅಪಪ್ರಚಾರಕ್ಕೆ ಬಲಿಯಾಗದೆ ಧರ್ಮಾಚರಣೆಯನ್ನು ಮಾಡಿರಿ ಮತ್ತು ಆನಂದದಿಂದಿರಿ !

ಇನ್ನು ಕೆಲವು ವರ್ಷಗಳಲ್ಲಿ ಪಾಶ್ಚಾತ್ಯರು ‘ಕುಂಕುಮ ಹಚ್ಚುವ ವಿಷಯದ ಬಗ್ಗೆ ಸಂಶೋಧನೆಯನ್ನು ಮಾಡುವರು ಮತ್ತು ಹಿಂದೂ ಧರ್ಮದಲ್ಲಿನ ಪರಂಪರೆಗಳು ಶೇ. ೧೦೦ ರಷ್ಟು ವಿಜ್ಞಾನನಿಷ್ಠವಾಗಿವೆ ಎಂದು ಪುನಃ ಸಿದ್ಧವಾಗುವುದು; ಅಲ್ಲಿಯ ವರೆಗೆ ಅಥವಾ ಅದರ ನಂತರವೂ ಇಲ್ಲಿನ ಪ್ರಗತಿಪರರು ಈ ವಿಷಯದ ಬಗ್ಗೆ ವಿಚಾರವನ್ನೂ ಮಾಡಲಿಕ್ಕಿಲ್ಲ, ಏಕೆಂದರೆ ಅವರಿಗೆ ವಿರೋಧಕ್ಕಾಗಿ ವಿರೋಧಮಾಡಿ ತಮ್ಮ ಸ್ವಾರ್ಥವನ್ನು ಸಾಧಿಸಲಿಕ್ಕಿದೆ. ಅವರ ಈ ಅಪಪ್ರಚಾರದಿಂದ ಧರ್ಮಾಚರಣಿ ಜನಸಾಮಾನ್ಯರು ಮಾತ್ರ ಗೊಂದಲಿಕ್ಕೀಡಾಗುತ್ತಿದ್ದಾರೆ !

ಹಿಂದೂ ಭಗಿನಿಯರೇ, ‘ಸೌಭಾಗ್ಯವತಿ ಸ್ತ್ರೀಯರು ಕುಂಕುಮವನ್ನು ಹಚ್ಚಿಕೊಳ್ಳುವುದು’ ನಮ್ಮ ಧರ್ಮದಲ್ಲಿನ ಒಂದು ಶ್ರೇಷ್ಠ ಪರಂಪರೆಯಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿರಿ. ಪ್ರಗತಿಪರರ ಅಪಪ್ರಚಾರಕ್ಕೆ ಬಲಿಯಾಗಬೇಡಿರಿ. ಧರ್ಮಾಚರಣೆ ಮಾಡಿರಿ ಮತ್ತು ಆನಂದಿಯಾಗಿರಿ ! ಏಕೆಂದರೆ ಧರ್ಮಾಚರಣೆಯನ್ನು ಮಾಡುವುದರಿಂದಲೇ ಜೀವನ ಆನಂದಮಯವಾಗುತ್ತದೆ.

ಸುಖಾರ್ಥಾಃ ಸರ್ವಭೂತಾನಾಂ ಮತಾಃ ಸರ್ವಾಃ ಪ್ರವೃತ್ತಯಃ |

ಸುಖಂ ಚ ನ ವಿನಾ ಧರ್ಮಾತ್ ತಸ್ಮಾತ್ ಧರ್ಮಪರೋ ಭವೇತ್ ||

– ಆಯುರ್ವೇದ (ಅಷ್ಟಾಂಗಹೃದಯ, ಸೂತ್ರಸ್ಥಾನ, ಅಧ್ಯಾಯ ೨, ಶ್ಲೋಕ ೨೦)

ಅರ್ಥ : ಪ್ರಾಣಿಮಾತ್ರರ ಎಲ್ಲ ಚಡಪಡಿಕೆಯು ಆನಂದಪ್ರಾಪ್ತಿಗಾಗಿಯೇ ಇರುತ್ತದೆ. ಧರ್ಮಾಚರಣೆಯ ಹೊರತು ಆನಂದಪ್ರಾಪ್ತಿ ಆಗುವುದಿಲ್ಲ. ಆದ್ದರಿಂದ ನಿಯಮಿತ ಧರ್ಮಾಚರಣೆಯನ್ನು ಮಾಡಿರಿ.

(೧೩.೧೧.೨೦೨೨)

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ ಗೋವಾ.