ಮಾಘ ಶುಕ್ಲ ಸಪ್ತಮಿ (ಜನವರಿ ೨೮)
ಸೂರ್ಯ ನಾರಾಯಣನ ಪೂಜೆ
ರಂಗೋಲಿಯಿಂದ ಅಥವಾ ಚಂದನದಿಂದ ಮಣೆಯ ಮೇಲೆ ಏಳು ಕುದುರೆಗಳ ಸೂರ್ಯನಾರಾಯಣನ ರಥ, ಅರುಣಸಾರಥಿ ಮತ್ತು ರಥದಲ್ಲಿ ಸೂರ್ಯನಾರಾಯಣನನ್ನು ಬಿಡಿಸಿ ಅವನನ್ನು ಪೂಜಿಸುತ್ತಾರೆ. ಅಂಗಳದಲ್ಲಿ ಬೆರಣಿಗಳನ್ನು ಉರಿಸಿ ಅದರ ಮೇಲೆ ಒಂದು ಮಣ್ಣಿನ ಮಡಕೆಯಲ್ಲಿ ಹಾಲನ್ನು ಉಕ್ಕುವ ತನಕ ಕಾಯಿಸುತ್ತಾರೆ; ಅಂದರೆ ಅಗ್ನಿಗೆ ಸಮರ್ಪಣೆಯಾಗುವ ತನಕ ಇಡುತ್ತಾರೆ. ಅನಂತರ ಉಳಿದ ಹಾಲನ್ನು ಎಲ್ಲರಿಗೂ ಪ್ರಸಾದವೆಂದು ನೀಡುತ್ತಾರೆ.